Lijjat Papad: ಹರಟೆಯ ಜತೆ ಶುರುವಾದ ಹಪ್ಪಳ ಮತ್ತು ಇವತ್ತಿನ 1600 ಕೋಟಿಯ ಬಿಸ್ನೆಸ್, ಬಂಡವಾಳ ಜಸ್ಟ್ 80 ರೂಪಾಯಿ !

latest news Lijjat Papad started with chatter has reached the 1600 crores business today

Lijjat Papad: ಗೆಳತಿಯರೆಲ್ಲಾ ಸೇರಿ ಹರಟೆ ಹೊಡೆಯುವಾಗ ಹಪ್ಪಳ ಬಿಸ್ನೆಸ್ ಯಾಕೆ ಶುರು ಮಾಡಬಾರದು ಎಂಬ ಆಲೋಚನೆ ಬಂದು ಜಸ್ಟ್ 80 ರೂಪಾಯಿಯಲ್ಲಿ ಶುರುವಾದ ಹಪ್ಪಳ ಬಿಸ್ನೆಸ್ ಈಗ 1600 ಕೋಟಿಗೂ ಮೀರಿದ ಬಿಸ್ನೆಸ್ ಆಗಿದೆ. ಏನಿದು ಹಪ್ಪಳದ ಸ್ಟೋರಿ? ಮಾಹಿತಿ ಓದಿ.

ಮುಂಬೈನ ಗೋರೆಗಾಂವ್ ನಲ್ಲಿ ಗುಜರಾತಿನ ಏಳು ಮಹಿಳೆಯರು ಸೇರಿ ಈ ಹಪ್ಪಳ ಬ್ಯುಸಿನೆಸ್ ಶುರು ಮಾಡಿದರು.
ಜಸ್ವಂತಿಬೆನ್, ಪಾರ್ವತಿಬೆನ್, ಉಜಂಬೆನ್, ಬಾನುಬೆನ್, ಲಗುಬೆನ್, ಜಯಾಬೆನ್ ಮತ್ತು ಅಮಿಶ್ ಗಾವಡೆಮ್ ಇವರೇ ವ್ಯಾಪಾರಕ್ಕೆ ಬಂಡವಾಳವಿಲ್ಲದಿದ್ದರೂ ಹಪ್ಪಳ ತಯಾರಿಗೆ ಕೈ ಹಾಕಿದವರು.

ಮಹಿಳೆಯರು ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ಛಗನ್‌ಲಾಲ್ ಕರಮ್ಶಿ ಪರೇಖ್ ಅವರಿಂದ 80 ರೂಪಾಯಿಯನ್ನು ಸಾಲವಾಗಿ ಪಡೆದು, ಆ ಹಣದಲ್ಲಿ ಮಾರ್ಚ್ 15, 1959ರಲ್ಲಿ ಹಪ್ಪಳದ ವ್ಯಾಪಾರ ಶುರು ಮಾಡಿದರು. ಮೊದಲ ದಿನ ಇವರು ಕೇವಲ 4 ಪ್ಯಾಕೆಟ್ ಹಪ್ಪಳ ತಯಾರಿಸಿದರು‌. ಇವರು ಒಂದು ವರ್ಷದಲ್ಲಿ 6 ಸಾವಿರ ರೂಪಾಯಿಗಿಂತ ಹೆಚ್ಚು ಮೌಲ್ಯದ ಹಪ್ಪಳವನ್ನು ಮಾರಾಟ ಮಾಡಿದರು. 1962ರಲ್ಲಿ ಕ್ಯಾಶ್ ಪ್ರೈಜ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗ ಹಪ್ಪಳಕ್ಕೆ ಲಿಜ್ಜತ್ ಪಾಪಡ್ (Lijjat Papad) ಎಂದು ನಾಮಕರಣ ಮಾಡಿದರು.

ನಂತರದಲ್ಲಿ ಅನೇಕ ಮಹಿಳೆಯರು ಈ ಕಂಪನಿಯಲ್ಲಿ ಭಾಗಿಯಾಗಿದರು. ಈವರೆಗೆ ಲಿಜ್ಜತ್ ಪಾಪಡ್ ಭಾರತದ ಸುಮಾರು 45 ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಿದೆ ಎನ್ನಲಾಗಿದೆ. ಈಗ ದೇಶದ 82 ಕಡೆ ಬ್ರ್ಯಾಂಚ್ ಹೊಂದಿದೆ. ಪ್ರತಿ ದಿನ 48 ಲಕ್ಷ ಹಪ್ಪಳವನ್ನು ಈ ಕಂಪನಿ ತಯಾರಿಸುತ್ತದೆ. ಇದು ಈಗ ಮಲ್ಟಿಮಿಲಿಯನ್ ಡಾಲರ್ ವ್ಯವಹಾರವನ್ನು ನಡೆಸ್ತಿದೆ. 2019ರಲ್ಲಿ 1600 ಕೋಟಿ ವ್ಯವಹಾರವನ್ನು ಇದು ನಡೆಸಿತ್ತು. ಈಗ ಲಿಜ್ಜತ್ ಪಾಪಡ್, ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ.

ನವೆಂಬರ್ 2021ರಲ್ಲಿ ಲಿಜ್ಜತ್ ಪಾಪಡ್ ನ ಸಹ ಸಂಸ್ಥಾಪಕಿ 90 ವರ್ಷದ ಜಸವಂತಿ ಬೇನ್ ಜಮನಾದಾಸ್ ಅವರಿಗೆ ರಾಷ್ಟ್ರಪತಿಗಳು ಪದ್ಮಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು. 2005ರಲ್ಲಿ ಕಂಪನಿಗೆ ಬ್ರ್ಯಾಂಡ್ ಇಕ್ವಿಟಿ ಸನ್ಮಾನ ಸಿಕ್ಕಿದೆ. ಇದಲ್ಲದೆ ಕಂಪನಿ ಇನ್ನೂ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

 

ಇದನ್ನು ಓದಿ: Tomato Price: ಇನ್ಮುಂದೆ ಪಡಿತರ ಕೇಂದ್ರಗಳಲ್ಲಿ ಸಿಗಲಿದೆ ಟೊಮ್ಯಾಟೋ ; ರಾಜ್ಯ ಸರ್ಕಾರದಿಂದ ಹೊಸ ಆದೇಶ, ಇಂದಿನಿಂದಲೇ ಜಾರಿ ! 

Leave A Reply

Your email address will not be published.