Ajith Rai: ಬಂಧನದಲ್ಲಿರುವ ಬೇನಾಮಿ ಆಸ್ತಿಯ ಒಡೆಯ ಅಜಿತ್ ರೈ ಸದ್ದಿಲ್ಲದೆ ವರ್ಗಾವಣೆ !

latest news intresting news Ajith Rai in custody quietly transferred

Share the Article

Ajith Rai: ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿ ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದ್ದ, ತಹಶೀಲ್ದಾರ್ ಅಜಿತ್ ಕುಮಾರ್ ರೈ (Ajith Rai) ಅವರನ್ನು ಸಿರಿವಾರ ತಾಲೂಕಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹೌದು, ಸಿರವಾರದಲ್ಲಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಪರಶುರಾಮ 500 ರೂಪಾಯಿ ಲಂಚ ಸ್ವೀಕಾರದ ಆರೋಪದಡಿ ಲೋಕಾಯುಕ್ತ ದಾಳಿಗೆ ಸಿಲುಕಿ ಸೇವೆಯಿಂದ ಅಮಾನತುಗೊಂಡಿದ್ದಾರೆ.

ಅಜಿತ್ ಕುಮಾರ್ ರೈ ಅವರನ್ನು ಬೆಂಗಳೂರು ಕೆಆರ್ ಪುರಂನಿಂದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಿದ್ದು ಸಾರ್ವಜನಿಕರಿಂದ ವಿರೋದ ವ್ಯಕ್ತವಾಗಿದೆ. ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದರಿಂದ ಕಂದಾಯ ಇಲಾಖೆ ಅಜಿತ್ ರೈ ವಿರುದ್ಧ ಅಮಾನತು ಆದೇಶ ಹೊರಡಿಸಿತ್ತು.

ಅಜಿತ್ ರೈ ಅಧಿಕಾರದಲ್ಲಿದ್ರೆ ಸಾಕ್ಷ್ಯನಾಶ, ಅಧಿಕಾರ ದುರ್ಬಳಕೆ, ತನಿಖೆಗೆ ಅಡ್ಡಿಯಾಗಬಹುದು ಎಂದು ಅಮಾನತಿನಲ್ಲಿಟ್ಟಿತ್ತು. ಅದ್ರೆ ಇದೀಗ ಅದೇ ಭ್ರಷ್ಟ ಅಧಿಕಾರಿ ಅಜಿತ್ ರೈಯನ್ನು ಬಂಧನದಿಂದ ಮುಕ್ತಗೊಳ್ಳುವ ಮೊದಲೇ ರಾಯಚೂರು ಜಿಲ್ಲೆಯ ಸಿರವಾ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ.

ಆದರೆ ಸರ್ಕಾರಿ ಸೇವೆ ಸಲ್ಲಿಸುವ ಅಧಿಕಾರಿ ಅಥವಾ ಯಾವುದೇ ನೌಕರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಎರಡಕ್ಕಿಂತ ಹೆಚ್ಚು ದಿನ ಬಂಧಿಸಿಟ್ಟಲ್ಲಿ ಆತನನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಬಹುದು.

ಆದರೆ, ಲೋಕಾಯುಕ್ತಕ್ಕೆ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿರುವ ಭ್ರಷ್ಟ ತಹಸೀಲ್ದಾರ್ ಅಜಿತ್ ರೈಯನ್ನು ಬಂಧನದಲ್ಲಿ ಇರುವಾಗಲೇ ರಾಜ್ಯ ಸರ್ಕಾರ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿ ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದ್ರೂ ಸರ್ಕಾರ ಮಾತ್ರ ಅಮಾನತುಗೊಂಡ ತಹಸೀಲ್ದಾರರನ್ನ ತರಾತುರಿಯಲ್ಲಿ ರಾಯಚೂರಿಗೆ ವರ್ಗಾಯಿಸಿ ತನಿಖೆಗೆ ಅಡ್ಡಿ ಮಾಡಿದ್ದು ಅಲ್ಲದೇ ಇದು ನಿಯಮ ಅನುಸಾರ ಸರಿಯಲ್ಲ ಎಂದು ಧ್ವನಿ ಎತ್ತಲಾಗಿದೆ.

 

ಇದನ್ನು ಓದಿ: Bengaluru: ಹಾಡಹಗಲೇ ಯುವಕನ ಭೀಕರ ಹತ್ಯೆ ! ಬಕ್ರೀದ್‌ ಹಬ್ಬಕ್ಕೆ ಕಾಲೇಜು ಹುಡುಗನ ಬಲಿಕೊಟ್ಟ ದುಷ್ಕರ್ಮಿಗಳು !

Leave A Reply