Toby Movie: ‘ ಟೋಬಿ’ ಮತ್ತು ‘ ಸಪ್ತ ಸಾಗರದಾಚೆ ಎಲ್ಲೋ ‘ ಬಾಕ್ಸ್ ಆಫೀಸ್ ಕಿತ್ತಾಟ ?
Latest news intresting news Toby' and 'Saptha Sagara yello ' box office clash
Toby Movie: ಕರಾವಳಿಯ ನಟರಲ್ಲಿ ರಾಜ್ ಬಿ. ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರೂ ಕೂಡ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಜೊತೆಗೆ ಇವರಿಬ್ಬರ ‘ಟೋಬಿ’ ಹಾಗೂ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಒಂದು ವಾರದ ಗ್ಯಾಪ್ನಲ್ಲಿ ರಿಲೀಸ್ ಆಗುತ್ತಿರುವುದು ಕೆಲವು ಗೊಂದಲ ಉಂಟುಮಾಡಿದೆ.
ರಾಜ್ ಬಿ. ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಟೋಬಿ’ ಸಿನಿಮಾ (Toby Movie) ಆಗಸ್ಟ್ 25ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಟಗರು ಕೂಡ ಹೈಲೈಟ್ ಆಗಿದೆ. ಈ ಸಿನಿಮಾ ರಿಲೀಸ್ ಆದ ಒಂದು ವಾರದ ಬಳಿಕ (ಸೆಪ್ಟೆಂಬರ್ 1) ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರ ತೆರೆಗೆ ಬರುತ್ತಿದೆ. ಒಟ್ಟಿನಲ್ಲಿ ಬಾಕ್ಸ್ ಆಫೀಸ್ನಲ್ಲಿ ಈ ಎರಡೂ ಸಿನಿಮಾಗಳು ಕ್ಲ್ಯಾಶ್ ಆಗುತ್ತಿವೆ. ಈ ಬಗ್ಗೆ ರಾಜ್ ಬಿ. ಶೆಟ್ಟಿ ಮಾತನಾಡಿದ್ದು, ಒಂದು ಕ್ಲಾರಿಟಿ ನೀಡಿದ್ದಾರೆ.
ರಾಜ್ ಬಿ. ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರ ನಡುವೆ ಒಳ್ಳೆಯ ಗೆಳೆತನದ ಭಾಂದವ್ಯ ಇದೆ. ‘777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಜೊತೆ ರಾಜ್ ಬಿ. ಶೆಟ್ಟಿ ನಟಿಸಿದ್ದರು. ಹೀಗಿದ್ದರೂ ‘ಟೋಬಿ’ ಹಾಗೂ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಒಂದು ವಾರದ ಗ್ಯಾಪ್ನಲ್ಲಿ ರಿಲೀಸ್ ಆಗುತ್ತಿದೆ. ಈ ವಿಚಾರದ ಕುರಿತು ರಾಜ್ ಬಿ. ಶೆಟ್ಟಿ ಮಾತನಾಡಿದ್ದಾರೆ.
‘ಟೋಬಿ ಹಾಗೂ ಸಪ್ತ ಎರಡೂ ಬೇರೆ ಬೇರೆ ರೀತಿಯ ಸಿನಿಮಾ. ಇದು ಕಾಂಪಿಟೇಷನ್ ಅಲ್ಲ ಸಹಯೋಗ. ಕನ್ನಡ ಸಿನಿಮಾ ನೋಡಲು ಜನರು ಮತ್ತೆ ಥಿಯೇಟರ್‌ಗೆ ಬರಬೇಕು ಎನ್ನುವ ಪ್ರಯತ್ನ’ ಎಂಬುದು ರಾಜ್ ಬಿ. ಶೆಟ್ಟಿ ಅಭಿಪ್ರಾಯ.
‘ನಾನು ಆಗಸ್ಟ್ 25ಕ್ಕೆ ಬರಬೇಕು ಎಂಬುದನ್ನು ಮೊದಲೇ ನಿರ್ಧರಿಸಿದ್ದೆ. ಅವರ ಲೆಕ್ಕಾಚಾರ ಬೇರೆ ರೀತಿ ಇತ್ತು. ನಾವು ಯಾವಾಗ ಸಿನಿಮಾ ರಿಲೀಸ್ ಮಾಡ್ತೀವಿ ಅನ್ನೋದಕ್ಕೆ ಸಾವಿರಾರು ಕಾರಣ ಇರುತ್ತದೆ. ಎದುರು ಟೀಂನವರು ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.
“ರಕ್ಷಿತ್ ಶೆಟ್ಟಿ ಜೊತೆ ಪೈಪೋಟಿ ಯಾವತ್ತು ಇಲ್ಲ. ಅಂತಹ ದಿನ ಯಾವತ್ತು ಬರಬಾರದು. ಅಷ್ಟು ಒಳ್ಳೆ ಫ್ರೆಂಡ್ ಜೊತೆ ಪೈಪೋಟಿ ಸಾಧ್ಯಾನೇ ಇಲ್ಲ. ನಾನು ಎಲ್ಲೇ ಇದ್ದರೂ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಪ್ರಚಾರ ಮಾಡುತ್ತೇನೆ. ಹೇಮಂತ್ ರಾವ್, ರಕ್ಷಿತ್ ಇಬ್ಬರು ಇಷ್ಟ. ಹಾಗಾಗಿ ನಮ್ಮ ಸಿನಿಮಾಗೂ ಹಣ ಬರಬೇಕು, ಅವರ ಚಿತ್ರಕ್ಕೂ ಬರಬೇಕು” ಎಂದಿದ್ದಾರೆ.
ಒಟ್ಟಿನಲ್ಲಿ “ಅವರು ನಮಗೆ ಘಾಸಿ ಮಾಡುವುದಕ್ಕಂತೂ ಮಾಡಿಲ್ಲ. ಅದರ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಅವರ ನಿರ್ಧಾರಕ್ಕೆ ಏನೋ ಬಲವಾದ ಕಾರಣ ಇರಬೇಕು. ಸಿನಿಮಾ ಚೆನ್ನಾಗಿದ್ದರೆ 2 ಗೆಲ್ಲುತ್ತದೆ ಎನ್ನುವ ನಂಬಿಕೆ ಹೇಮಂತ್ ಅವರಿಗಿದೆ. ಅದೇ ನಂಬಿಕೆ ನನಗೂ ಇದೆ.” ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
ಸದ್ಯ ಚಾರ್ಲಿ ಸಿನಿಮಾದ ಯಶಸ್ಸಿನ ಬಳಿಕ ರಕ್ಷಿತ್ ಶೆಟ್ಟಿ ಈ ವರ್ಷ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಜತೆಗೆ ಆಗಮಿಸಲಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಬೀರಬಲ್ ಚಿತ್ರದ ಖ್ಯಾತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ.
ಇನ್ನು ಒಂದು ಮೊಟ್ಟೆಯ ಕಥೆ ಎಂಬ ಕಾಮಿಡಿ ಎಂಟರ್‌ಟೈನರ್ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ರಾಜ್, ಗರುಡ ಗಮನ ವೃಷಭ ವಾಹನದ ಮೂಲಕ ಗಮನ ಸೆಳೆದರು. ಇದೀಗ ಸೇಡಿನ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಟೋಬಿ ಸಿನಿಮಾ ಅವರು ಕಥೆ ಬರೆದ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ ಕಂಡುಬರಲಿದೆ ಎಂದು ಹೇಳಿದ್ದಾರೆ.
ಒಟ್ಟಾಗಿ ಹೇಳುವುದಾದರೆ ಹಿಂದೆ ಕೂಡ ಸಾಕಷ್ಟು ದೊಡ್ಡ ಸಿನಿಮಾಗಳು ಒಟ್ಟೊಟ್ಟಿಗೆ ಥಿಯೇಟರ್‌ಗೆ ಬಂದು ಬಾಕ್ಸಾಫೀಶ್ ಕ್ಲ್ಯಾಶ್ ಆಗಿದೆ. ಒಂದು ವಾರದ ಅಂತರದಲ್ಲಿ ದೊಡ್ಡ ಸಿನಿಮಾಗಳು ಬಂದ ಉದಾಹರಣೆಯಿದೆ. ಒಟ್ಟಿಗೆ ಸಿನಿಮಾಗಳು ರಿಲೀಸ್ ಆಗುವುದರಿಂದ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಇದನ್ನು ಒಪ್ಪುವುದಿಲ್ಲ.
ಇದನ್ನು ಓದಿ : Benjamin mendy: 10,000 ಮಹಿಳೆಯರ ಜತೆ ಮಲಗಿದ ಈ ಸೆಲೆಬ್ರಿಟಿ ಸ್ಟಾರ್ ಯಾರು ಗೊತ್ತಾ ?