Home News Benjamin mendy: 10,000 ಮಹಿಳೆಯರ ಜತೆ ಮಲಗಿದ ಈ ಸೆಲೆಬ್ರಿಟಿ ಸ್ಟಾರ್ ಯಾರು ಗೊತ್ತಾ ?

Benjamin mendy: 10,000 ಮಹಿಳೆಯರ ಜತೆ ಮಲಗಿದ ಈ ಸೆಲೆಬ್ರಿಟಿ ಸ್ಟಾರ್ ಯಾರು ಗೊತ್ತಾ ?

Benjamin mendy
Image source: the mirror

Hindu neighbor gifts plot of land

Hindu neighbour gifts land to Muslim journalist

Benjamin mendy:  ಖ್ಯಾತಿ ಹಾಗೂ ಹಣ ಒಮ್ಮೆಲೆ ಇವೆರಡೂ ಮನುಷ್ಯನ ಕೈ ಸಿಕ್ಕರೆ ಮನುಷ್ಯ ಸುಮ್ಮನಿರುತ್ತಾನೆಯೇ? ಖಂಡಿತ ಇಲ್ಲ. ಇದಕ್ಕೆ ಸಾಕ್ಷಾತ್ ಉದಾಹರಣೆ ಎಂಬಂತೆ ಫ್ರೆಂಚ್ ಫುಟ್ಬಾಲಿಗನೊಬ್ಬನ ಅವಾಂತರವೇ ಸಾಕ್ಷಿ. ಆತ ತನ್ನ 28ನೇ ವಯಸ್ಸಿನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 10,000 ಮಹಿಳೆಯರ ಜತೆ ಸೆಕ್ಸ್‌ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ..!

ಹೌದು, ಇದೀಗ ಪ್ರಸಿದ್ಧ ಫ್ರೆಂಚ್ ಫುಟ್ಬಾಲಿಗ ಬೆಂಜಮಿನ್‌ ಮೆಂಡಿ (Benjamin mendy ) ಅತ್ಯಾಚಾರ ಹಾಗೂ ಅತ್ಯಾಚಾರಕ್ಕೆ ಯತ್ನದ ಆರೋಪದಡಿ ವಿಚಾರಣೆ ಎದುರಿಸುತ್ತಿರುವ ಬೆನ್ನಲ್ಲೇ ತಾವು 10,000 ಮಹಿಳೆಯರ ಜತೆ ಸಂಭೋಗ ನಡೆಸಿರುವುದಾಗಿ ನ್ಯಾಯಾಲಯ ವಿಚಾರಣೆ ವೇಳೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ 2020ರ ಅಕ್ಟೋಬರ್​ನಲ್ಲಿ ಇಂಗ್ಲೆಂಡ್‌ನ ತನ್ನ ಮನೆಯಲ್ಲಿ ಬೆಂಜಮಿನ್, ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು. ಆರು ವರ್ಷಗಳ ಹಿಂದೆ 29 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಗಂಭೀರ ಆರೋಪವು ಇದೆ.

ಚೆಷೈರ್‌ನಲ್ಲಿರುವ ಮೊಟ್ರಾಮ್‌ ಸೇಂಟ್ ಆಂಡ್ರ್ಯೂ ಹೆಸರಿನ ಮೆಂಡಿ ಬಂಗಲೆಯಲ್ಲಿ ಆಗಾಗ ಪಾರ್ಟಿ ನಡೆಯುತ್ತಲೇ ಇರುತ್ತದೆ. ಹಲವು ಸ್ನೇಹಿತ-ಸ್ನೇಹಿತೆಯರು ಎಂಜಾಯ್ ಮಾಡಲು ಅವರ ಬಂಗಲೆಗೆ ಬರುತ್ತಾರೆ. ಮನೆಗೆ ಬಂದ ಇಬ್ಬರು ಮಹಿಳಾ ಅತಿಥಿಗಳ ಜೊತೆ ಮೆಂಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಒಬ್ಬರನ್ನು ಅತ್ಯಾಚಾರ ನಡೆಸಿದ್ದರೆ ಮತ್ತೊಬ್ಬರೊಂದಿಗೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪವಿದೆ.

ತನ್ನ ಮೇಲಿನ ಆರೋಪಗಳನ್ನೆಲ್ಲ ಆಲಿಸಿದ ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಜಮಿನ್ ಮೆಂಡಿ, “ಸರಿ, ಇದೆಲ್ಲಾ ನನಗೆ ನೆನಪಿಲ್ಲ. ಆದರೆ ನಾನು 10,000 ಮಹಿಳೆಯರ ಜತೆ ಲೈಂಗಿಕ ಕ್ರಿಯೆ ನಡೆಸಿದ್ದೇನೆ. ಈ ಪೈಕಿ ಎಷ್ಟು ಜನರನ್ನು ನೆನಪಿಟ್ಟುಕೊಳ್ಳಲು ಸಾಧ್ಯ?. ಒಂದಂತೂ ಸತ್ಯ, ನಾನು ಯಾರೊಂದಿಗೂ ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿಲ್ಲ ಎಂದು ನ್ಯಾಯಾಲಯದ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ. ಇದೀಗ ಈ ಪ್ರಕರಣದ ತನಿಖೆ ನಡೆಯುತ್ತಿದೆ.

ಕಳೆದ ಜನವರಿಯಲ್ಲಿ ನಡೆದ ಕೋರ್ಟ್‌ ವಿಚಾರಣೆಯ ವೇಳೆಯಲ್ಲಿ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಕೋರ್ಟ್‌, ಇತರ ಮಹಿಳೆಯರ ಆರೋಪದಲ್ಲಿ ಮೆಂಡಿ ತಪ್ಪಿತಸ್ಥರಾಗಿ ಕಾಣಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

 

ಇದನ್ನು ಓದಿ: Free bus Scheme: ‘ಶಕ್ತಿ ಯೋಜನೆ’ ಸಕ್ಸಸ್ ಬೆನ್ನಲ್ಲೇ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್ !! ಇದನ್ನು ನೀವು ಊಹಿಸಲೂ ಅಸಾಧ್ಯ !!