SSLC ವಿದ್ಯಾರ್ಥಿಗಳೇ ನಿಮಗೊಂದು ಮುಖ್ಯವಾದ ಮಾಹಿತಿ; ಪೂರಕ ಪರೀಕ್ಷೆಯ ಸ್ಕ್ಯಾನ್ಡ್‌ ಪ್ರತಿ ಬಗ್ಗೆ ಇಲ್ಲಿದೆ ವಿವರ

Latest Karnataka education news board exams SSLC 2023 supplementary examination scanned copy complete detail is here

SSLC Exam Scanned copy : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಬಂದಿದ್ದು, ನಂತರ ಪೂರಕ ಪರೀಕ್ಷಾ ಫಲಿತಾಂಶ ಕೂಡಾ ಬಂದಿದ್ದು, ಇದೀಗ ತಿಳಿದಿರುವ ಮಾಹಿತಿ ಪ್ರಕಾರ, ಈಗಾಗಲೇ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಈಗ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮಾಹಿತಿಯೊಂದನ್ನು ವಿದ್ಯಾರ್ಥಿಗಳಿಗೆ ನೀಡಿದೆ. ಅದೇನೆಂದರೆ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ(SSLC Exam Scanned copy) , ಮರುಎಣಿಕೆಗೆ ಅರ್ಜಿಯನ್ನು ಆಹ್ವಾನಿಸಿದೆ.‌ ಇದು ಪೂರಕ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಗಮನಿಸಬೇಕಾದ ವಿಷಯ. ಶಾಲಾ ಮಂಡಳಿ ಮಾಹಿತಿಯ ಪ್ರಕಾರ,

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಸ್ಕ್ಯಾನ್ಡ್‌ ಪ್ರತಿ, ಮರು ಮೌಲ್ಯಮಾಪನಕ್ಕಾಗಿ ವಿದ್ಯಾರ್ಥಿಗಳು https://kseab.karnataka.gov.in ಈ ಲಿಂಕ್‌ ಮೂಲಕ ಭೇಟಿ ನೀಡಿ ಸಲ್ಲಿಸಬಹುದು ಎಂದು ಮಂಡಲಿ ಹೇಳಿದೆ.

ಹಾಗೆನೇ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-07-2023 ಆಗಿರುತ್ತದೆ.

ಉತ್ತರ ಪತ್ರಿಕೆಗಳ ಮರಎಣಿಕೆಗೆ ಅರ್ಜಿ ಸಲ್ಲಿಸಲು ದಿನಾಂಕ 04-07-2023 ರಿಂದ 10-07-2023 ರವರೆಗೆ ಇರುತ್ತದೆ.

ಶುಲ್ಕ: ಆನ್‌ಲೈನ್‌  ಮೂಲಕ ಸ್ಕ್ಯಾನ್ಡ್‌ ಪ್ರತಿ ಪಡೆಯಲು ವಿದ್ಯಾರ್ಥಿಗಳು ಬಯಸಿದರೆ , ಒಂದು ಸಬ್ಜೆಕ್ಟ್‌ಗೆ ರೂ.410 ನೀಡಬೇಕು. ಅದೇ ರೀತಿ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದರೆ ರೂ.420 ಆಗುತ್ತದೆ. ಹಾಗೆನೇ ಮರುಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ ರೂ.810 ಆನ್‌ಲೈನ್‌ ಮೂಲಕ, ರೂ.820 ಆಫ್‌ ಲೈನ್‌ ಮೂಲಕ ಪಾವತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: Pan-Adhar link: ಆಧಾರ್, ಪಾನ್ ಲಿಂಕ್ ಮಾಡಲಿದ್ದ ಗಡುವು ಮುಕ್ತಾಯ! ಮಾಡದಿದ್ದವರಿಗೂ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಸರ್ಕಾರ !!

Leave A Reply

Your email address will not be published.