Jo Lindner: ʼಪೊಗರುʼ ಚಿತ್ರದಲ್ಲಿ ನಟಿಸಿದ, ಕಬ್ಬಿಣದ ಬಾಡಿ ಹೊಂದಿದ ನಟ 30ರ ಹರೆಯದಲ್ಲೇ ಸಾವು!

Latest national news Body builder actor Jo lindner dies at age 30

ಜಗತ್ತಿನಾದ್ಯಂತ ಪ್ರಖ್ಯಾತಿ ಪಡೆದ ಬಾಡಿ ಬಿಲ್ಡಿಂಗ್‌ನಲ್ಲಿ ಜೋ ಲಿಂಡ್ಕರ್ (Jo Lindner)ತಮ್ಮ 30ರ ಹರೆಯದಲ್ಲೇ ವಿಧಿವಶರಾಗಿದ್ದಾರೆ. ಕಬ್ಬಿಣದಂತಹ ದೇಹ ಹೊಂದಿದ್ದ ಇವರು ಇದ್ದಕ್ಕಿಂದ್ದಂತೆ ನಿಧನರಾಗಿರುವುದು ಹೆಚ್ಚಿನವರಿಗೆ ಅಚ್ಚರಿ ಮೂಡಿಸಿದೆ.

 

ಜೋ ಲಿಂಡ್ನರ್ (Jo Lindner) ‘ಪೊಗರು’ (Pogaru Kannada Film) ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಧ್ರುವ ಸರ್ಜಾ ಜೊತೆ ಸೆಣಸಾಡಿದ್ದರು. ಬಾಡಿ ಬಿಲ್ಡಿಂಗ್, ಫಿಟ್‌ನೆಸ್ ಕಡೆ ಹೆಚ್ಚಿನ ಮುತುವರ್ಜಿ ತೋರುತ್ತಿದ್ದ ಜೋ ಲಿಂಡ್ನರ್ ಅವರಿಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ 87 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ. ಜರ್ಮನಿ ಮೂಲದವರಾದರೂ ಜೋ ಲಿಂಡರ್ ಹಲವು ವರ್ಷಗಳಿಂದ ಥಾಯ್ಲೆಂಡ್‌ನಲ್ಲಿ ನೆಲೆಸಿದ್ದರು.

ಇನ್‌ಸ್ಟಾಗ್ರಾಂನಲ್ಲಿ ತಮ್ಮ ದೇಹದಾಡ್ಯತೆಯ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದ ಇವರು ಈ ವಿಡಿಯೋಗಳಿಂದಲೇ ವಿಶ್ವದಾದ್ಯಂತ ಹಲವರನ್ನು ಸೆಳೆದಿದ್ದರು. ತಮ್ಮ ಸಿನಿಮಾದಲ್ಲಿ ನಟಿಸಿದ್ದ ಜೋ ಲಿಂಡ್ಕರ್ ಅವರ ನಿಧನದ ಕುರಿತಂತೆ ಅಚ್ಚರಿ ವ್ಯಕ್ತಪಡಿಸಿರುವ ನಟ ಧ್ರುವ ಸರ್ಜಾ, ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

ಜೋ ಲಿಂಡ್ನರ್ ನಿಧನದ ಸುದ್ದಿಯನ್ನು ಅವರ ಗರ್ಲ್‌ಫ್ರೆಂಡ್ ಖಚಿತಪಡಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿಚಾ, ಅವರು ‘ಈ ಜಗತ್ತಿನಲ್ಲಿ ನಾನು ನೋಡಿದ ಅದ್ಭುತ ವ್ಯಕ್ತಿ ಜೋ ಈಗ ಉತ್ತಮ ಸ್ಥಳವನ್ನು ಸೇರಿದ್ದಾರೆ. ನಿನ್ನೆ (ಜು 1) ಜೋ ರಕ್ತನಾಳ ಛಿದ್ರವಾಗಿ ಮೃತರಾಗಿದ್ದಾರೆ. ಇತ್ತೀಚೆಗೆ ಅವರಿಗೆ ಕುತ್ತಿಗೆಯಲ್ಲಿ ನೋವು ಕಂಡುಬಂದಿತ್ತು ಎನ್ನಲಾಗಿದೆ. ರಕ್ತನಾಳದ ಸಮಸ್ಯೆ ಜೋ ಲಿಂಡರ್ ಅವರ ನಿಧನಕ್ಕೆ ಇದೇ ಕಾರಣ ಎನ್ನಲಾಗಿದೆ. ಇದೀಗ ಜೋ ಲಿಂಡ್ನರ್ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಗುಂಡ್ಲುಪೇಟೆ: ಕಾರು ಲಾರಿ ಡಿಕ್ಕಿ, ಸಜೀವ ದಹನಗೊಂಡ ಕಾರು ಚಾಲಕ

Leave A Reply

Your email address will not be published.