ಸೌಜನ್ಯಾ ಗೌಡ ಅತ್ಯಾಚಾರ ಕೊಲೆ ಪ್ರಕರಣ: ಜೈನರ ಸಪೋರ್ಟ್’ಗೆ ಸ್ವಜಾತಿ ಬಾಂಧವ ಕಾಂಗ್ರೆಸ್ ನಾಯಕ ಅಭಯಚಂದ್ರ ಜೈನ್ ಎಂಟ್ರಿ !
Belthangdi :ಕಳೆದ ಹತ್ತನ್ನೆರಡು ವರ್ಷಗಳ ಹಿಂದೆ ಬೆಳ್ತಂಗಡಿ(Belthangdi )ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದ್ದ ಕಾಲೇಜು ವಿದ್ಯಾರ್ಥಿ ಸೌಜನ್ಯ ಗೌಡ ಅತ್ಯಾಚಾರ, ಕೊಲೆ ಪ್ರಕರಣ ಮತ್ತೊಮ್ಮೆ ತಿರುವು ಪಡೆದುಕೊಂಡಿದ್ದು, ಇದ್ದ ಓರ್ವ ಆರೋಪಿಯೂ ನ್ಯಾಯಾಲಯದಿಂದ ಖುಲಾಸೆಯಾದ ಬಳಿಕ ಮತ್ತೆ ‘ಅವರ’ ಮೇಲೆ ಆರೋಪ ಕೇಳಿಬಂದಿದೆ.
ಕಳೆದ ಕೆಲವೊಂದು ವರ್ಷಗಳಿಂದ, ಒಂದು ದಶಕಗಳಿಂದ ಆಕೆಯ ಕೊಲೆ ಹಿಂದಿನ ಆರೋಪಿ, ಹಾಗೂ ಆ ಕೃತ್ಯದ ಹಿಂದಿನ ಕೈಗಳ ವಿರುದ್ಧ ಬೆಳ್ತಂಗಡಿ ಹಿಂದೂ ಮುಖಂಡ, ಸೌಜನ್ಯ ಗೌಡ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಆರೋಪದ ಜೊತೆಗೆ ಪತ್ರಿಕಾಗೋಷ್ಠಿ ಸಹಿತ ಪ್ರತಿಭಟನೆ ನಡೆಸಿದ್ದರೂ ನೈಜ ಆರೋಪಿಗಳ ಪತ್ತೆಯಾಗುವ ಯಾವುದೇ ಸುಳಿವು ಈವರೆಗೂ ಲಭ್ಯವಾಗಿಲ್ಲ.
ಈ ನಡುವೆ ಇದ್ದ ಓರ್ವ ಆರೋಪಿ ಸಂತೋಷ್ ರಾವ್ ಕೂಡಾ ದೋಷಮುಕ್ತಗೊಂಡಿದ್ದು, ನೈಜ ಆರೋಪಿ ಯಾರು ಎನ್ನುವ ಬಗ್ಗೆ ಮತ್ತೊಮ್ಮೆಪ್ರಶ್ನೆ, ಆಕ್ರೋಶ ಹೊರಬಿದ್ದಿದೆ. ಈ ಮಧ್ಯೆ ಮೊನ್ನೆ ತಾನೇ ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಸಹಿತ ತಿಮರೋಡಿ ಪತ್ರಿಕಾಗೋಷ್ಠಿ ನಡೆಸಿ ಧರ್ಮದ ಹೆಸರಿನಲ್ಲಿ ಹಿಂದೂ ಭಯೋತ್ಪಾದನೆ ನಡೆಯುತ್ತಿದೆ ಎನ್ನುವ ನೇರ ಆರೋಪ ಸಹಿತ ಆಕ್ರೋಶ ಹೊರಹಾಕಿದ್ದರು.
ಆದರೆ ಇಂದು ಈ ಮೊದಲು ವಿಚಾರಣೆಗೆ ಒಳಪಟ್ಟಿದ್ದ ಆರೋಪಿತ ವ್ಯಕ್ತಿಗಳಾದ ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ್ ಜೈನ್ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ವಿರುದ್ಧ ಆರೋಪ ಹೋರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಕಾನತ್ತೂರು ನಾಲ್ವರ್ ದೈವದ ನಡೆಯಲ್ಲಿ ಆಣೆ ಪ್ರಮಾಣಕ್ಕೆ ಬರುವಂತೆ ಬಹಿರಂಗ ಆಹ್ವಾನ ನೀಡಿದ್ದಾರೆ.
ಅಲ್ಲದೇ ತಮ್ಮ ವಿರುದ್ಧ ಆರೋಪ ಹೋರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಈ ಮೊದಲೊಮ್ಮೆ ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿದ್ದೇವೆ. ಆದರೆ ಅವರು ಬಂದಿರಲಿಲ್ಲ, ಈ ಬಾರಿ ಮತ್ತೊಮ್ಮೆ ನಮ್ಮ ಮೇಲೆ, ಕ್ಷೇತ್ರದ ಮೇಲೆ ಆರೋಪಿ ಹೊರಿಸುತ್ತಿರುವ ‘ ತಿಮರೋಡಿ ಅಪ್ಪನಿಗೆ ಹುಟ್ಟಿದವನೇ ಆದರೆ, ಕಾನತ್ತೂರು ನಾಲ್ವರ್ ದೈವದ ನಡೆಯಲ್ಲಿ ಆಣೆ ಪ್ರಮಾಣಕ್ಕೆ ಬರುವಂತೆ ‘ ಬಹಿರಂಗ ಆಹ್ವಾನ ನೀಡಿದ್ದಾರೆ.
ಅಲ್ಲದೆ, ಪತ್ರಿಕಾಗೋಷ್ಠಿಯಲ್ಲಿ ಸವಿಸ್ತಾರ ವಿವರ ನೀಡಿದ ಆಪಾದಿತರಲ್ಲಿ ಒಬ್ಬರು, ‘ಇದೀಗ ಎಲ್ಲಾ ರೀತಿಯ ತನಿಖೆಗಳು ಮುಗಿದಿದೆ. ಸಿಐಡಿ ತನಿಖೆ ಆಯಿತು, ಸಿಬಿಐ ಕೂಡ ತನಿಖೆ ನಡೆಸಿ, ನಮ್ಮನ್ನು ನಿರಪರಾಧಿಗಳೆಂದು ಬಿಟ್ಟು ಕಳಿಸಿದೆ. ಆದರೂ ಹೋರಾಟ ಮತ್ತೆ ಶುರುವಾಗಿದೆ. ಇದೀಗ ಸೌಜನ್ಯ ಗೌಡ ಪರ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ವಿಠ್ಠಲ ಗೌಡ ಅವರ ಮೇಲೆ ನಮಗೆ ಅನುಮಾನಗಳಿವೆ ಅವರನ್ನೇ ತನಿಖೆಗೆ ಒಳಪಡಿಸಬೇಕು ಅವರೇ ಯಾಕೆ ಈ ಹತ್ಯೆ ಮಾಡಿರಬಾರದು ?’ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಆಸೀನರಿದ್ದ ಮುಲ್ಕಿ ಮೂಡುಬಿದಿರೆ ಮಾಜಿ ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ‘ತಿಮರೋಡಿ ಓರ್ವ ರೌಡಿ, ಆತ ಮತ್ತೆ ಧರ್ಮಾಧಿಕಾರಿ ಹೆಗ್ಗಡೆ ಕುಟುಂಬದ ವಿರುದ್ಧ ಧ್ವನಿ ಎತ್ತಿದ್ದಾನೆ. ಆತ ಹಣ ಮಾಡುವ ಉದ್ದೇಶದಿಂದ ಈ ಕೆಲಸ ಮಾಡಿಕೊಂಡಿದ್ದು, ಆತ ಅದೆಷ್ಟೇ ದೊಡ್ಡ ರೌಡಿಶೀಟರ್ ಆಗಿದ್ದರೂ ನಾವು ನೋಡಿಕೊಳ್ಳುತ್ತೇವೆ’ ಎನ್ನುವ ಮಾತು ಹೇಳಿದರು. ಸದ್ಯ ಈ ವಿಚಾರ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಸೌಜನ್ಯ ಗೌಡ ಎನ್ನುವ ಅಮಾಯಕ ಹೆಣ್ಣುಮಗಳೊಬ್ಬಳ ದುರಂತ ಅಂತ್ಯ ಪ್ರಕರಣಕ್ಕೆ ರಾಜಕೀಯ ಪ್ರವೇಶ ಪಡೆದುಕೊಂಡಿದೆ.
ಆಪಾದಿತ ಸ್ವಜಾತಿ ಭಾಂಧವರ ಪರವಾಗಿ ಮೂಡಬಿದಿರೆಯ ಕಾಂಗ್ರೆಸ್ ನ ಮಾಜಿ ಶಾಸಕ ಅಭಯಚಂದ್ರ ಜೈನ್ ಏಕಾಏಕಿ ಪ್ರವೇಶ ಪಡೆದುಕೊಂಡಿದ್ದಾರೆ. ಏಕಾಏಕಿಯಾಗಿ ಈ ರೀತಿ ಪತ್ರಿಕಾಗೋಷ್ಠಿ ಕರೆದು ಸೌಜನ್ಯ ಗೌಡ ಅತ್ಯಾಚಾರ ಕೊಲೆ ಆರೋಪದಲ್ಲಿ ತನಿಖೆಗೆ ಒಳಪಟ್ಟಿದ್ದ ಆಪಾದಿತರ ಜತೆ ಮಾಜಿ ಶಾಸಕ ಅಭಯ ಚಂದ್ರ ಜೈನ ಅವರು ವೇದಿಕೆ ಹಂಚಿಕೊಂಡಿರುವುದು ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಅವರನ್ನು ಪತ್ರಿಕಾಗೋಷ್ಠಿ ನಡೆಸಲು ಕರೆದು ತಂದದ್ದು ಸ್ವಜಾತಿ ಪ್ರೇಮವೇ ಅಥವಾ ಅದರ ಹಿಂದೆ ಕಾಣದ ಕೈಗಳ ಶಕ್ತಿ ಇದೆಯೇ ಎನ್ನುವ ಶಂಕೆ ವ್ಯಕ್ತವಾಗಿದೆ.
‘ಅಪರಾಧ ನಡೆದು ಮಗಳು ತೀರಿಕೊಂಡಿದ್ದಾಳೆ. ಒಬ್ಬ ಅಪರಾಧಿ ಎಂದು ಜೈಲಿನಲ್ಲಿದ್ದ ಸಂತೋಷ್ ರಾವ್ ಕೂಡ ನಿರಪರಾಧಿ ಎಂದು ತೀರ್ಮಾನವಾಗಿ ಬಿಡುಗಡೆಯಾಗಿದ್ದಾನೆ. ಹಾಗಾದರೆ ತನ್ನ ಪ್ರೀತಿಯ ಮಗಳು ತನ್ನಿಂದ ತಾನೇ ಸತ್ತು ಹೋಗುತ್ತಾಳೆಯೆ ? ಪ್ರತಿ ಕೊಲೆಗೂ ಒಂದು ಕಾರಣ, ಒಂದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಅದರ ಹಿಂದೆ ಇರಲೇ ಬೇಕಲ್ಲವೇ. ಅವರನ್ನು ಪತ್ತೆ ಮಾಡಿ’ ಎನ್ನುವುದು ಸೌಜನ್ಯ ಗೌಡಳ ಪೋಷಕರ ಮತ್ತು ಆ ನತದೃಷ್ಟ ಪೋಷಕರ ಜೊತೆ ಸದಾ ಹಿಂದೆ ನಿಂತಿರುವ ಮಹೇಶ್ ಶೆಟ್ಟಿ ತಿಮರೋಡಿ ಬಳಗದ ವಾದ. ಅಪರಾಧಿ ಯಾರೆಂದು ಈವರೆಗೂ ಪತ್ತೆಯಾಗದ ಕಾರಣ ಈ ಹತ್ಯಾ ಪ್ರಕರಣವು, ಇಡೀ ಪೊಲೀಸ್ ಮತ್ತು ತನಿಖಾ ಸಂಸ್ಥೆಗಳ ಮತ್ತು ಒಟ್ಟಾರೆ ವ್ಯವಸ್ಥೆಗಳ ವೈಫಲ್ಯಕ್ಕೆ ಕಾರಣವಾಗಿದೆ ಎನ್ನುವುದು ಸಾರ್ವತ್ರಿಕವಾಗಿ ಕೇಳಿ ಬರುತ್ತಿರುವ ಆರೋಪ.
ಇದನ್ನೂ ಓದಿ : 4 ಕೋಟಿ ರೂ. ಮೌಲ್ಯದ ದೈತ್ಯ ಗೂಳಿಯನ್ನು ಬಲಿ ಕೊಟ್ಟ ಖ್ಯಾತ ಕ್ರಿಕೆಟರ್ ವಿಡಿಯೋ ವೈರಲ್