Water price hike: ವಿದ್ಯುತ್ ದರ ಏರ್ತು, ತರಕಾರಿ ಆಕಾಶಕ್ಕೆ ಹಾರ್ತು, ಈಗ ನೀರಿನ ಬೆಲೆ ಬಾನಿಗೆ ಚಿಮ್ಮಲು ರೆಡಿ ?!
Latest news Bengaluru Water Supply and Sewerage Board is thinking of hike water price
Water price hike: ಕಾಂಗ್ರೆಸ್ ಸರ್ಕಾರ(Congress Government) ಆಡಳಿತಕ್ಕೆ ಬಂದಾಗಿನಿಂದ ಒಂದೊಂದೇ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ದಿಢೀರನೆ ಕರೆಂಟ್ ಬಿಲ್ ಡಬಲ್ ಆಗಿದೆ. ತರಕಾರಿ ಬೆಲೆ ಗಗನಕ್ಕೇರಿದೆ(Vegetable Hike Increase). ಇದೀಗ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ವಿದ್ಯುತ್ ಬಿಲ್ ಹೆಚ್ಚಳದ ಬೆನ್ನಲ್ಲೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೀರಿನ ದರವನ್ನು( Water price hike) ಹೆಚ್ಚಿಸಲು ಚಿಂತನೆ ನಡೆಸಿದೆ.
ವಿದ್ಯುತ್ ದರ ಏರಿಕೆ ಕೇವಲ ಜನ ಸಾಮಾನ್ಯರಿಗಷ್ಟೇ ಅಲ್ಲದೆ ಕೈಗಾರಿಕೆಗಳು ಮತ್ತು ಸರ್ಕಾರಿ ಸಂಸ್ಥೆಗಳ ಮೇಲೂ ಪರಿಣಾಮ ಬೀರಿದೆ. ವಿದ್ಯುತ್ ದರ ಹೆಚ್ಚಾದ ಕಾರಣ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (Bangalore water supply and sewerage board) ನೀರಿನ ದರವನ್ನು ಹೆಚ್ಚಿಸಲು ಸರ್ಕಾರದಲ್ಲಿ ಪ್ರಸ್ತಾವನೆಯನ್ನು ಮಾಡಿದೆ. ತೊರೆಕಾಡನಹಳ್ಳಿ, ಹಾರೋಹಳ್ಳಿ, ಟಿಕೆ ಹಳ್ಳಿ ಮತ್ತು ತಾತುಗುಣಿಯಲ್ಲಿನ ಪಂಪಿಂಗ್ ಸ್ಟೇಷನ್‌ಗಳ ಮೂಲಕ BWSSB ಈ ಎಲ್ಲಾ ನಗರಕ್ಕೆ ನೀರನ್ನು ಪೂರೈಸುತ್ತಿದೆ.
BWSSB ಅಧಿಕಾರಿಗಳ ಪ್ರಕಾರ, BWSSB ನೀರನ್ನು ಪಂಪ್ ಮಾಡಲು, ಮನೆಗಳಿಗೆ ಸರಬರಾಜು ಮಾಡಲು, ಪಂಪಿಂಗ್ ಸ್ಟೇಷನ್‌ಗಳು, ಉಪ ವಿಭಾಗಗಳು ಹಾಗೂ ಪ್ರಧಾನ ಕಚೇರಿ ಸೇರಿದಂತೆ ಇತರೆ ಕಚೇರಿಗಳಲ್ಲಿ ಬಳಸಿದ ವಿದ್ಯುತ್‌ಗೆ ಮಾಸಿಕ 80 ಕೋಟಿ ರೂ. ಶುಲ್ಕ ಕಟ್ಟಬೇಕಿದೆ. ಆದರೆ ಈಗ ಹೆಚ್ಚಿದ ವಿದ್ಯುತ್ ದರದಿಂದಾಗಿ ಇಲಾಖೆಯು ತಿಂಗಳಿಗೆ 10 ರಿಂದ 12 ಕೋಟಿ ಹೆಚ್ಚುವರಿ ಬಿಲ್‌ಗಳನ್ನು ಪಾವತಿಸಬೇಕಾಗಿದೆ. ಹಣಕಾಸು ನಿರ್ವಹಣೆಗಾಗಿ ನೀರಿನ ಬಿಲ್ ಶೇಕಡಾ 12-15% ಕ್ಕೆ ಏರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಈಗ ವಿದ್ಯುತ್ ದರ ಏರಿಕೆಯಾಗಿರುವುದರಿಂದ ಜಲಮಂಡಳಿಯು ತಿಂಗಳಿಗೆ ಹೆಚ್ಚುವರಿಯಾಗಿ ಬಿಲ್ ಕಟ್ಟಬೇಕಾಗಿದೆ. ವಿದ್ಯುತ್ ದರಗಳ ಹೆಚ್ಚಳದಿಂದಾಗಿ, BWSSB ಹಣಕಾಸು ನಿರ್ವಾಹಣೆ ಕಷ್ಟವಾಗಿದೆ. ನೀರಿನ ದರವನ್ನು ಹೆಚ್ಚಿಸಲು ವಿನಂತಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ಚಿಂತನೆ ನಡೆಸಿದೆ. ಹೀಗಾಗಿ ಸದ್ಯದಲ್ಲೇ ನೀರಿನ ದರ ಹೆಚ್ಚಳ ಸಾಧ್ಯತೆ ಇದೆ.
ನೀರಿನ ದರ ಪರಿಷ್ಕರಣೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಮಾಡಬೇಕೆಂಬ ನಿಯಮವಿದೆ. ಆದರೆ ಕಳೆದ 2014ರಿಂದ ಇಲ್ಲಿಯವರೆಗೂ ಹಿಂದಿನ ಸರಕಾರ ನೀರಿನ ದರ ಪರಿಷ್ಕರಣೆಗೆ ಅನುಮತಿಯನ್ನು ನೀಡಿಲ್ಲ. ಸದ್ಯ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಹಾಗೂ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಜಲಮಂಡಳಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ವಿದ್ಯುತ್ ಶುಲ್ಕ ಹೆಚ್ಚಳದಿಂದಾಗಿ ಎದುರಾಗಿರುವ ಸಮಸ್ಯೆ ಬಗ್ಗೆ ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳು ಸಭೆ ನಡೆಸಿದ್ದಾರೆ.
ಇದನ್ನು ಓದಿ: Ayodhya Sri Rama Mandir: ಅಯೋಧ್ಯಾ ರಾಮಮಂದಿರ ಉದ್ಘಾಟನೆಗೆ ನಿಗದಿಯಾಯ್ತು ದಿನ – ಪೇಜಾವರ ಶ್ರೀ