Home Breaking Entertainment News Kannada Aishwarya Arjun: ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ ಫಿಕ್ಸ್! ಹುಡುಗ ಯಾರು? ಡಿಟೇಲ್ಸ್ ಇಲ್ಲಿದೆ

Aishwarya Arjun: ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ ಫಿಕ್ಸ್! ಹುಡುಗ ಯಾರು? ಡಿಟೇಲ್ಸ್ ಇಲ್ಲಿದೆ

Aishwarya Arjun
image source: Cinestaan

Hindu neighbor gifts plot of land

Hindu neighbour gifts land to Muslim journalist

Aishwarya Arjun: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ (Aishwarya Arjun) ಮದುವೆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ, ಜನಮನ ಗೆದ್ದಿರುವ ನಟಿ ಐಶ್ವರ್ಯಾ ಸರ್ಜಾ ಮದುವೆ ಮಾತುಕತೆ ಬಹುತೇಕ ಪೂರ್ಣಗೊಂಡಿದೆ. ತಮಿಳಿನ ಯುವನಟರೊಬ್ಬರೊಟ್ಟಿಗೆ ಐಶ್ವರ್ಯಾ ವಿವಾಹ (Marriage) ಆಗಲಿದೆ ಎನ್ನಲಾಗುತ್ತಿದೆ.

ಅರ್ಜುನ್ ಸರ್ಜಾ ಪುತ್ರಿ ನಟಿ ಐಶ್ವರ್ಯ ರ ಮದುವೆಯು ತಮಿಳಿನ ಜನಪ್ರಿಯ ಹಾಸ್ಯ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಜೊತೆ ಶೀಘ್ರದಲ್ಲೇ ನಡೆಯಲಿದೆ ಎಂಬ ಸುದ್ದಿ ತಮಿಳು ಮಾಧ್ಯಮಗಳಲ್ಲಿ ಹಬ್ಬಿದೆ. ಎರಡೂ ಕುಟುಂಬಗಳ ಆಶೀರ್ವಾದದೊಂದಿಗೆ ಅವರು ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.

News 18 kannada

ಉಮಾಪತಿ ರಾಮಯ್ಯ ಹಾಗೂ ಐಶ್ವರ್ಯಾ ಇಬ್ಬರು ಹಲವು ದಿನಗಳಿಂದ ಪ್ರೀತಿ ಮಾಡುತ್ತಿದ್ದರಂತೆ.ಇದೀಗ ಇಬ್ಬರ ಕುಟುಂಬದವರೂ ಒಪ್ಪಿ ಜೋಡಿಯ ಮದುವೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಇಬ್ಬರ ಫ್ಯಾಮಿಲಿಯಿಂದ ಮದುವೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ, ತಮಿಳು ಚಿತ್ರರಂಗದ ಕೆಲವು ಹಿರಿಯ ಪತ್ರಕರ್ತರು ರಾಮಯ್ಯ ಕುಟುಂಬದ ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

News 18 kannada

80-90ರ ದಶಕದ ಪ್ರಮುಖ ನಾಯಕರಲ್ಲಿ ಒಬ್ಬರಾದ ಅರ್ಜುನ್ ಸರ್ಜಾ ಬಹುಭಾಷಾ ನಟ. 1998ರಲ್ಲಿ ಆಶಾ ರಾಣಿ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಅಂಜನಾ ಇಬ್ಬರು ಪುತ್ರಿಯರು. 2013 ರಲ್ಲಿ ವಿಶಾಲ್ ನಟನೆಯ ‘ಪತ್ತು ಯಾನೈ’ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. 2018 ರಲ್ಲಿ ʼಪ್ರೇಮ ಬರಹʼ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಇಂಡಸ್ಟ್ರಿಗೆ ಐಶ್ವರ್ಯ ಸರ್ಜಾ ಎಂಟ್ರಿ ಕೊಟ್ಟರು. ‘ಪ್ರೇಮ ಬರಹ’ ಸಿನಿಮಾವನ್ನು ತಮಿಳಿನಲ್ಲಿ ‘ ಸೊಲ್ಲಿವಿಡಾವಾ’ ಹೆಸರಿನಲ್ಲಿ ಮರುಚಿತ್ರೀಕರಿಸಿ ಬಿಡುಗಡೆ ಮಾಡಲಾಗಿತ್ತು. ಆದರೆ ಎರಡೂ ಭಾಷೆಗಳಲ್ಲಿ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಪಡೆಯಲಿಲ್ಲ.

ಇನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟ-ನಿರ್ದೇಶಕ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಈ ವರೆಗೆ ನಾಲ್ಕು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ. 2017ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಉಮಾಪತಿ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. 2022 ರಲ್ಲಿ ‘ದೇವದಾಸ್’ ಹೆಸರಿನ ಸಿನಿಮಾ ಕೈಗೆತ್ತಿಕೊಂಡಿದ್ದು ಈ ವರೆಗೆ ಆ ಸಿನಿಮಾ ಬಿಡುಗಡೆ ಆಗಿಲ್ಲ.

 

ಇದನ್ನು ಓದಿ: Intersting news: ಕಷ್ಟಪಟ್ಟು ಓದಿಸಿ ಪತ್ನಿಯನ್ನು ಮ್ಯಾಜಿಸ್ಟ್ರೇಟ್ ಮಾಡಿದ ಗಂಡ: ಕೆಲ್ಸ ಸಿಕ್ಕ ಕೂಡ್ಲೇ ಗಂಡನನ್ನು ಜೈಲಿಗಟ್ಟಿದ ಹೆಂಡ್ತಿ !!!