Teacher slapped student: 30 ನಿಮಿಷದಲ್ಲಿ 23 ಕಪಾಳಮೋಕ್ಷ… 4ನೇ ತರಗತಿಯಲ್ಲಿ ಓದುತ್ತಿದ್ದ ಮಗುವಿಗೆ ಶಿಕ್ಷಕರಿಂದ ಅಮಾನುಷ ಥಳಿತ! ಪ್ರಕರಣ ದಾಖಲು

Primary school teacher book FIR in Bengaluru for slapped an innocent class 4 student 23 times

Teacher slapped student:ಯಾವ ಹೆತ್ತ ತಂದೆ ತಾಯಂದಿರಿಗೂ ಕೂಡಾ ತಮ್ಮ ಮಕ್ಕಳಿಗೆ ಮನಬಂದಂತೆ ಹೊಡೆಯುವುದನ್ನು ನೋಡಲು ಕೇಳಲು ಆಗುವುದಿಲ್ಲ. ಅಂತಹ ಒಂದು ಘಟನೆ ಶಾಲೆಯಲ್ಲಿ ನಡೆದಿದೆ. ನಿಮಗಿದು ಗೊತ್ತೇ? ಬೆಂಗಳೂರಿನ ಶಾಲಾ ಶಿಕ್ಷಕರೊಬ್ಬರು 4ನೇ ತರಗತಿಯ ವಿದ್ಯಾರ್ಥಿಗೆ 23 ಬಾರಿ ಕಪಾಳಮೋಕ್ಷ ಮಾಡಿದ್ದಾರೆಂದು. ನಿಜಕ್ಕೂ ಈ ಮಾತನ್ನು ಯಾರು ಕೇಳಿದರೂ ಒಮ್ಮೆ ಕರುಳು ಚುರುಕ್‌ ಎನ್ನದೇ ಇರಲಾರದು. ಈ ಘಟನೆಯ ನಂತರ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದಾರೆ.

ಈ ಘಟನೆ ವೈಟ್‌ಫೀಲ್ಡ್‌ ಬಳಿಯ ಚನ್ನಸಂದ್ರದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಶಿಕ್ಷಕಿ ಮಗುವಿನ ಮೇಲೆ ಕೋಪಗೊಂಡಿದ್ದು, ನಂತರ ಮಗುವಿಗೆ ಹೊಡೆದಿದ್ದಾರೆ( Teacher slapped student) ಎಂದು ಬಾಲಕನ ಪೋಷಕರು ತಿಳಿಸಿದ್ದಾರೆ. ಹೋಮ್‌ ವರ್ಕ್‌ ಸರಿಯಾಗಿ ಮಾಡುತ್ತಿಲ್ಲ ಎಂಬ ದೂರನ್ನು ಕೂಡಾ ಶಿಕ್ಷಕಿ ಹೇಳಿದ್ದರು ಎನ್ನಲಾಗಿದೆ. ಮಗುವಿನ ಪೋಷಕರು ಮತ್ತೊಂದು ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರು.

23 ಬಾರಿ ಮಗುವಿನ ಮುಖಕ್ಕೆ ಕಪಾಳಮೋಕ್ಷ ಮಾಡಿದ್ದರಿಂದ ಮಗುವಿನ ಗಲ್ಲದಲ್ಲಿ ಗಾಯವಾಗಿದೆ. ಗಲ್ಲದ ಮೇಲೆ ಊತವಿರುವುದನ್ನು ಗಮನಿಸಿದ ತಾಯಿ ವಿಚಾರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ನಂತರ ತಾಯಿ ಮಗುವಿನ ತಂದೆಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮರುದಿನ ಇಬ್ಬರು ಕೂಡಾ ಶಾಲೆಗೆ ಬಂದು ಶಾಲೆಯ ಅಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ.

ಆದರೆ ಪೋಷಕರ ಪ್ರಶ್ನೆಗೆ ಶಿಕ್ಷಕರಾಗಲಿ, ಪ್ರಾಂಶುಪಾಲರಾಗಲಿ ಸರಿಯಾದ ಉತ್ತರ ನೀಡಲಿಲ್ಲ ಎಂದು ಪೋಷಕರು ದೂರಿದ್ದಾರೆ. ಇದರ ಬದಲಾಗಿ ಥಳಿಸಿದ ಶಿಕ್ಷಕಿಯನ್ನೇ ಮನೆಗೆ ಕಳುಹಿಸಿದ್ದಾರೆ. ಇದಾದ ನಂತರ ಪೊಲೀಸರಿಗೆ ಮಾಹಿತಿಯನ್ನು ನೀಡಲಾಯಿತು. ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕೇಳಿದ್ದು, ಅಲ್ಲಿ ಶಿಕ್ಷಕರು ಮಗುವಿಗೆ ಕಪಾಳಮೋಕ್ಷ ಮಾಡಿರುವುದು ಕಂಡು ಬಂದಿದೆ. ಹಾಗಾಗಿ ಪೊಲೀಸರು ಶಾಲೆಯ ಪ್ರಾಂಶುಪಾಲರು ಹಾಗೂ ಕಪಾಳಮೋಕ್ಷ ಮಾಡಿದ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: Coffee Board Recruitment 2023: ಕಾಫಿ ಬೋರ್ಡ್‌ನಲ್ಲಿ ಉದ್ಯೋಗವಕಾಶ, ಮಾಸಿಕ ವೇತನ ರೂ.30ಸಾವಿರ, ಹೆಚ್ಚಿನ ಮಾಹಿತಿ ಇಲ್ಲಿದೆ

Leave A Reply

Your email address will not be published.