Costly Tea: ಇದು ವಿಶ್ವದ ಅತ್ಯಂತ ದುಬಾರಿ ಚಹಾ! ಬೆಲೆ ಕೇಳಿದರೆ ತಲೆ ತಿರುಗುವುದು ಖಂಡಿತ!

Food Tea price costly tea This is the world's most expensive tea

Costly Tea: ಒಂದು ಕಪ್ ಟೀಯ ಸುವಾಸನೆ, ರುಚಿ, ಸ್ವಾದದ ಮುಂದೆ ಒಂದು ಕ್ಷಣ ಸೋತುಬಿಡುತ್ತೇವೆ. ಹೌದು, ಟೀ ಎಂದರೆ ಕೇವಲ ಪಾನೀಯವಲ್ಲ. ಅದೊಂದು ಉತ್ಸಾಹ. ಭರವಸೆ. ಒಂದು ಸಿಪ್ ಟೀಗೆ ಸಂಪೂರ್ಣ ಒತ್ತಡವನ್ನು ಶಮನ ಮಾಡುವಷ್ಟು ಶಕ್ತಿ ಇರುತ್ತದೆ ಎಂದು ಕೂಡ ಹೇಳಿದರೆ ತಪ್ಪಾಗಲಾರದು.

ಸಾಮಾನ್ಯವಾಗಿ ನಾವು ಬಳಸುವ ಚಹಾ ಪುಡಿ ದುಬಾರಿ ಎಂದರೆ ಸರಾಸರಿ ಒಂದು ಕೆಜಿ ಚಹಾ ಪುಡಿಯ ಬೆಲೆ 1000 ರೂಪಾಯಿ ಅಂದಾಜು ಇರಬಹುದು. ಆದರೆ ಕೋಟಿಗಟ್ಟಲೆ ಬೆಲೆ ಬಾಳುವ (Costly Tea) ಚಹಾಪುಡಿ ಕೂಡ ಇದೆ ಅಂದರೆ ನೀವು ನಂಬಲೇ ಬೇಕು.

ಮುಖ್ಯವಾಗಿ ಚಹದ ಬೆಲೆ ಹೆಚ್ಚಿದೆ ಅಂದರೆ ಅದರರ್ಥ ಆ ಚಹ ಬಹಳ ಅಪರೂಪದ್ದಾಗಿರುತ್ತದೆ. ಹೌದು ಚೀನಾದಲ್ಲಿ, ವಿಶ್ವದ ಈ ದುಬಾರಿ ಚಹಾ ಬೆಲೆ 1 ಮಿಲಿಯನ್ ಡಾಲರ್ ಹೆಚ್ಚು. ಚೀನಾದ ಫುಜಿಯಾನ್ ಪ್ರಾಂತ್ಯದ ವುಯಿ ಪರ್ವತಗಳಲ್ಲಿ ಕಂಡುಬರುತ್ತದೆ.
ಅದರ ಹೆಸರು ಡಾ ಹಾಂಗ್ ಪಾವೊ (da hong pao) .

ಡಾ ಹಾಂಗ್​ ಪಾವೊ ಎಂಬುದು ಒಂದು ಊಲಾಂಗ್​ ಚಹ. ಇದು ವಿಶ್ವದ ಅತ್ಯಂತ ದುಬಾರಿ ಚಹಗಳಲ್ಲಿ ಒಂದು. ಊಲಾಂಗ್​ ಚಹ ಮೂಲತಃ ಚೀನಾದ ಸಾಂಪ್ರದಾಯಿಕ ಚಹ ಎನ್ನಲಾಗುತ್ತದೆ. ಚಹದ ಎಲೆಗಳು ಆಗ್ನೇಯ ಪ್ರಾಂತ್ಯದ ಫುಜಿಯಾನ್​ನ ಪರ್ವತಗಳಲ್ಲಿನ ಮರಗಳಲ್ಲಿ ಕಂಡು ಬರುತ್ತದೆ ಹಾಗೂ ಈ ಎಲೆಗಳು ಅತ್ಯಂತ ಅಪರೂಪ. ಆದ್ದರಿಂದಲೇ ಇದರಿಂದ ತಯಾರಿಸಿದ ಚಹ ಅತ್ಯಂತ ದುಬಾರಿ.

ಇದು ಸಂಜೀವಿನಿಯೂ ಹೌದು. ಈ ಚಹಾ ಎಷ್ಟು ವಿಶೇಷವಾಗಿದೆ ಎಂದರೆ 1972 ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಚೀನಾಕ್ಕೆ ಭೇಟಿ ನೀಡಿದಾಗ, ಅಧ್ಯಕ್ಷ ಮಾವೋ 200 ಗ್ರಾಂ ಚಹಾವನ್ನು ಉಡುಗೊರೆಯಾಗಿ ನೀಡಿದ್ದರು.

ಮುಖ್ಯವಾಗಿ ವಿಶ್ವದ ಅತ್ಯಂತ ದುಬಾರಿ ಚಹಾ ಡಾ ಹಾಂಗ್ ಪಾವೊ, ಹರಾಜಿನ ಮೂಲಕ ಮಾತ್ರ ಲಭ್ಯವಿದೆ. ಇದು ಅಪರೂಪದ ವಸ್ತುವಾಗಿದೆ, ನೈಜ ಲಭ್ಯವಿಲ್ಲ. ಈ ಚಹಾವನ್ನು ಹಿಂದೆ ಚೀನಾದ ಸಿಚುವಾನ್‌ನ ಯಾನ್ ಪರ್ವತಗಳಲ್ಲಿ ಉದ್ಯಮಿಯೊಬ್ಬರು ಬೆಳೆಸಿದರು. ಮೊದಲ ಬ್ಯಾಚ್ಚ 50 ಗ್ರಾಂ ಚಹಾ ಸುಮಾರು 2.90 ಲಕ್ಷ ರೂಪಾಯಿಗೆ ಮಾರಾಟವಾಯಿತು ಎನ್ನಲಾಗುತ್ತದೆ.

ಮೊದಲು ಚೀನಾದ ಮಿಂಗ್ ರಾಜವಂಶದ ಅವಧಿಯಲ್ಲಿ ಇದರ ಕೃಷಿ ಪ್ರಾರಂಭವಾಯಿತು. ಆ ಸಮಯದಲ್ಲಿ ರಾಣಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದು, ಆರೋಗ್ಯ ಸುಧಾರಣೆಗಾಗಿ ಈ ಟೀ ಕುಡಿಯಲು ರಾಜವೈದ್ಯರು ಸಲಹೆ ನೀಡಿದ್ದರು. ಈ ಚಹಾವನ್ನು ಕುಡಿದ ನಂತರ ರಾಣಿ ಸಂಪೂರ್ಣವಾಗಿ ಚೇತರಿಸಿಕೊಂಡಳು. ಇದಾದ ನಂತರ ರಾಜನು ಈ ಗಿಡಗಳನ್ನು ಇಡೀ ರಾಜ್ಯದಲ್ಲಿ ಬೆಳೆಯಲು ಸಿದ್ದಪಡಿಸಿದ್ದನು. ರಾಜನ ಈ ಚಹಾ ಎಲೆಗೆ ಡ-ಹಾಂಗ್ ಪಾವೊ ಎಂದು ಹೆಸರಿಸಲಾಯಿತು.

ಸದ್ಯ ಡ-ಹಾಂಗ್ ಪಾವೊ ಬೆಲೆ ಅಂದಾಜಿಗೆ 2,90,813 ರೂಪಾಯಿ ಹಾಗೂ ಒಂದು ಕಪ್ ಗೆ ಸುಮಾರು 7,30,569ರೂಪಾಯಿ ಎನ್ನಲಾಗುತ್ತದೆ. ಈ ಚಹಾವನ್ನು ರಾಷ್ಟ್ರೀಯ ಸಂಪತ್ತು ಎಂದು ಕೂಡ ಘೋಷಿಸಲಾಗಿದೆ.

 

ಇದನ್ನು ಓದಿ: Yashpal Suvarna: ಯಶ್‌ಪಾಲ್ ಸುವರ್ಣರಿಗೆ ಜೀವ ಬೆದರಿಕೆ : ಆರೋಪಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ 

Leave A Reply

Your email address will not be published.