Viral Video: ಹಿಂದೂ ಜತೆ ಮುಸ್ಲಿಂ ಹುಡುಗಿಯ ಮದುವೆ, ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ವಧುವನ್ನು ಎಳೆದೊಯ್ದ ಪೊಲೀಸರು

Latest India news in dramatic incident police drags away bride minutes before wedding in Thiruvananthapuram Kerala

Marriage viral video : ಜೀವನದಲ್ಲಿ ಮದುವೆ ಅನ್ನೋದು ವಿಶೇಷವಾದ ಕ್ಷಣವಾಗಿದೆ. ಆದರೆ ಒಂದು ಮದುವೆ ಅನ್ನೋದು ಸುಸೂತ್ರವಾಗಿ ನಡೆಯಲು ಸಾವಿರಾರು ವಿಘ್ನಗಳಂತೆ. ಹಾಗೆಯೇ ಅಂತರ್ಧರ್ಮೀಯ ಜೋಡಿಯೊಂದು ಇಬ್ಬರ ಒಪ್ಪಿಗೆಯಂತೆ ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ವಧುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

ಹೌದು, ಜೂನ್ 18, ಭಾನುವಾರದಂದು ತಿರುವನಂತಪುರದ ಕೋವಳಂ ದೇವಾಲಯದಲ್ಲಿ ಜೋಡಿಗಳಿಬ್ಬರು ವಿವಾಹವಾಗುವುದಕ್ಕು ಮುನ್ನ ಪೊಲೀಸರು ವಧುವನ್ನು ಎಳೆದೊಯ್ದುದಿರುವ ಘಟನೆ ಬೆಳಕಿಗೆ ಬಂದಿದೆ.

ಈಗಾಗಲೇ ಪರಸ್ಪರ ಪ್ರೀತಿಸುತ್ತಿದ್ದ ಆಲ್ಫಿಯಾ ಮತ್ತು ಅಖಿಲ್ ಮದುವೆಯಾಗಲು ಕೋವಳಂ ದೇವಾಲಯಕ್ಕೆ ತೆರಳಿದ್ದರು. ವರ ಇನ್ನೇನು ವಧುವಿಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ಪೊಲೀಸರು ಆಲ್ಫಿಯಾಳನ್ನು ಬಲವಂತವಾಗಿ ವಶಕ್ಕೆ ಪಡೆದು ನ್ಯಾಯಾಲದಲ್ಲಿ ಹಾಜರುಪಡಿಸಿದ್ದಾರೆ.

ಇನ್ನು ಘಟನೆಯ ಕುರಿತು ಪ್ರತಿಕ್ರಿಯಿಸಿರುವ ವರ ಅಖಿಲ್ ಮತ್ತು ವಧು ಆಲ್ಫಿಯಾ ಪೊಲೀಸರು ಬಲವಂತವಾಗಿ ಎಳೆದೊಯ್ಯುತ್ತಿರುವ ವಿಡಿಯೋ(Marriage Viral Video) ಮಾಡಲಾಗಿದೆ. ಅಲ್ಲದೆ ಈಗಾಗಲೇ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪೊಲೀಸರ ಈ ನಡುವಳಿಕೆ ಕುರಿತಾಗಿ ಹಿರಿಯ ಅಧಿಕಾರಿಗಳಿಗೆ ದೂರು ಕೊಡಲಾಗುವುದು ಎಂದು ಜೋಡಿಗಳಿಬ್ಬರು ತಿಳಿಸಿದ್ದು, ಈ ವರ್ತನೆ ಬಗ್ಗೆ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸ್ ಅಧಿಕಾರಿಗಳು ಆಲ್ಫಿಯಾ ಕಾಣೆಯಾಗಿದ್ದರಿಂದ ಆಕೆಯ ಪೋಷಕರು ದೂರು ನೀಡಿದ್ದರು. ಈ ನಿಟ್ಟಿನಲ್ಲಿ ನಾವು ಆಕೆಯನ್ನು ಕರೆದೊಯ್ದು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Devendra Fadnavis: ಭಾರತದ ಮುಸ್ಲಿಮರು ಔರಂಗಜೇಬನ ವಂಶಸ್ಥರಲ್ಲ, ನಮ್ಮ ರಾಜ ಶಿವಾಜಿ ಮಹಾರಾಜ ಎಂದ ದೇವೇಂದ್ರ ಫಡ್ನವೀಸ್

Leave A Reply

Your email address will not be published.