Nalin Kumar Kateel: ಕಾಂಗ್ರೆಸ್ ಸರ್ಕಾರ ಬರೋ ಡಿಸೆಂಬರ್ ತಿಂಗಳಲ್ಲಿ ಪತನ – ಭವಿಷ್ಯ ನುಡಿದ ಅಧ್ಯಕ್ಷ !

Political news Nalin Kumar Kateel president predicted the fall of the Congress government next December

Nalin Kumar Kateel: ಸದ್ಯ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ. ಹೊಂದಾಣಿಕೆ ರಾಜಕಾರಣ ವಿಚಾರವಾಗಿ ಭಾರೀ ವಾಕ್ ಯುದ್ಧ ನಡೆದಿದ್ದು, ಬಿಜೆಪಿಯಲ್ಲಿ ಕೆಲವು ಮಂದಿ ನಾಯಕರು ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. ಇದಕ್ಕೆ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಪ್ರತಿಕ್ರಿಯೆ ನೀಡಿದ್ದಾರೆ.

 

ಬೆಂಗಳೂರಿನಲ್ಲಿ ಮಾತನಾಡಿದ ಕಟೀಲ್, ಬಿಜೆಪಿಯಲ್ಲಿ ಎಲ್ಲಿಯೂ ಹೊಂದಾಣಿಕೆ ರಾಜಕಾರಣ ಇಲ್ಲ ಎಂದು ಹೇಳಿದ್ದಾರೆ. ಡಿಸೆಂಬರ್​ನಲ್ಲಿ ಕಾಂಗ್ರೆಸ್​​​ ಸರ್ಕಾರ ಪತನವಾಗಲಿದೆ. ಎಲ್ಲರೂ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಸಿಎಂ ವಿಚಾರಕ್ಕೆ ಡಿಸೆಂಬರ್​ನಲ್ಲಿ ಸರ್ಕಾರ ಪತನವಾಗಲಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಸರ್ಕಾರ ವಿದ್ಯುತ್​ ಬಿಲ್​ನಲ್ಲಿ ವಂಚನೆ ಮಾಡ್ತಿದೆ. ಬಿಜೆಪಿ ಸರ್ಕಾರ ಎಸ್​​​ಸಿ, ಎಸ್​ಟಿ ಸಮುದಾಯಕ್ಕೆ ಉಚಿತ ವಿದ್ಯುತ್​ ನೀಡಿತ್ತು. ಎಸ್​ಸಿ, ಎಸ್​ಟಿ ಸಮುದಾಯಕ್ಕೆ 75 ಯೂನಿಟ್​ ವಿದ್ಯುತ್​​​ ನೀಡಿತ್ತು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕರೆಂಟ್ ಕೂಡ ಇಲ್ಲ, ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಜೂನ್​​ 22 ರಿಂದ ನಮ್ಮ ನಾಯಕರ ತಂಡ ರಾಜ್ಯ ಪ್ರವಾಸ ಮಾಡಲಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಏನೇನು ನಡೆಯುತ್ತದೆಯೋ ನೋಡೋಣ ಎಂದು ನಳಿನ್ ಕುಮಾರ್ ಹೇಳಿದರು.

 

ಇದನ್ನು ಓದಿ: Mobile: ಮೊಬೈಲ್ ಕೊಡದ ಹೆತ್ತವರಿಗೇ ಸ್ಕೆಚ್, 13 ವರ್ಷದ ಬಾಲಕಿ ಮಾಡಿದ ಮಾಸ್ಟರ್ ಪ್ಲಾನ್ ಕೇಳಿದ್ರೆ ಬೆವೆತು ಬಿಡ್ತೀರಾ ! 

Leave A Reply

Your email address will not be published.