Devendra Fadnavis: ಭಾರತದ ಮುಸ್ಲಿಮರು ಔರಂಗಜೇಬನ ವಂಶಸ್ಥರಲ್ಲ, ನಮ್ಮ ರಾಜ ಶಿವಾಜಿ ಮಹಾರಾಜ ಎಂದ ದೇವೇಂದ್ರ ಫಡ್ನವೀಸ್
Latest National news No Muslim In India Descendant Of Aurangzeb Devendra Fadnavis Amid Row in Maharashtra
Devendra Fadnavis : `ಭಾರತದಲ್ಲಿ ಯಾವುದೇ ಮುಸಲ್ಮಾನರೂ ಔರಂಗಜೇಬ್ ವಂಶಸ್ಥರಲ್ಲ’ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis ) ಅವರು ಆಘಾತಕಾರಿ ಹೇಳಿಕೆಯನ್ನು ಭಾನುವಾರ ಹೇಳಿದ್ದಾರೆ.
ಹೌದು, ದೇವೇಂದ್ರ ಫಡ್ನವೀಸ್ ಪ್ರಕಾರ ದೇಶದ ರಾಷ್ಟ್ರೀಯವಾದಿ ಮುಸ್ಲಿಮರು
ಮೊಘಲ್ ಚಕ್ರವರ್ತಿಯನ್ನು ತಮ್ಮ ನಾಯಕ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದರು.
ವಂಚಿತ್ ಬಹುಜನ ಅಘಾಡಿ (ವಿಬಿಎ) ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು ಛತ್ರಪತಿ ಸಂಭಾಜಿ ನಗರದಲ್ಲಿರುವ ಔರಂಗಜೇಬ್ ಸ್ಮಾರಕಕ್ಕೆ ಭೇಟಿ ನೀಡಿದ ಒಂದು ದಿನದ ನಂತರ ಉಪಮುಖ್ಯಮಂತ್ರಿ ರು ಈ ರೀತಿ ಹೇಳಿಕೆ ನೀಡಿದ್ದಾರೆ.
ಅಕೋಲಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಕೋಲಾ, ಸಂಭಾಜಿನಗರ ಮತ್ತು ಕೊಲ್ಲಾಪುರದಲ್ಲಿ ನಡೆದಿರುವುದು ಕಾಕತಾಳೀಯವಲ್ಲ ಪ್ರಯೋಗ ಎಂದು ಹೇಳಿದರು. ಔರಂಗಜೇಬನ ಇಷ್ಟೊಂದು ಸಹಾನುಭೂತಿಗಳು ರಾಜ್ಯಕ್ಕೆ ಹೇಗೆ ಬಂದರು ಎಂದು ಕೇಳಿದರು. ಔರಂಗಜೇಬ್ ನಮ್ಮ ನಾಯಕನಾಗುವುದು ಹೇಗೆ? ನಮ್ಮ ರಾಜ ಒಬ್ಬನೇ ಮತ್ತು ಅದು ಛತ್ರಪತಿ ಶಿವಾಜಿ ಮಹಾರಾಜರು ಹೇಳಿದರು.
ಮುಖ್ಯವಾಗಿ ಮುಸ್ಲಿಮರು ಔರಂಗಜೇಬನ ವಂಶಸ್ಥರಲ್ಲ ಎಂದು ಫಡ್ನವೀಸ್ ಹೇಳಿದ್ದಾರೆ. ಔರಂಗಜೇಬನ ವಂಶಸ್ಥರು ಯಾರು ಹೇಳಿ? ಔರಂಗಜೇಬ್ ಮತ್ತು ಅವನ ಪೂರ್ವಜರು ಎಲ್ಲಿಂದ ಬಂದರು? ಎಂದು ಪ್ರಶ್ನಿಸಿರುವ ಅವರು, ಔರಂಗಜೇಬ್ ಮತ್ತು ಅವನ ಪೂರ್ವಜರು ಹೊರಗಿನಿಂದ ಬಂದರು. ರಾಷ್ಟ್ರೀಯ ವಿಚಾರಗಳನ್ನು ಹೊಂದಿರುವ ಈ ದೇಶದ ಮುಸ್ಲಿಂ ಎಂದಿಗೂ ಔರಂಗಜೇಬನನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಛತ್ರಪತಿ ಶಿವಾಜಿ ಮಹಾರಾಜರನ್ನು ಮಾತ್ರ ಗೌರವಿಸುತ್ತಾರೆ. ಈ ದೇಶದ ರಾಷ್ಟ್ರೀಯವಾದಿಗಳು ಔರಂಗಜೇಬನನ್ನು ಬೆಂಬಲಿಸುವುದಿಲ್ಲ ಎಂದೂ ಅವರು ಹೇಳಿದರು.
ಇದನ್ನೂ ಓದಿ: Child Death: ಆಟವಾಡುತ್ತಿದ್ದ ಹಾಗೆ ಡೋರ್ ಲಾಕ್ ಆದ ಕಾರು, ಮೂವರು ಮಕ್ಕಳು ಉಸಿರು ಕಟ್ಟಿ ಸಾವು