KSFC Recruitment 2023: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗವಕಾಶ ; 97 ಸಾವಿರ ಸಂಬಳ ! ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನ !
Karnataka state financial corporation jobs Karnataka state government jobs ksfc recruitment 2023 apply for 41 posts
KSFC Recruitment 2023: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (Karnataka State Financial Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ (KSFC Recruitment 2023). ಒಟ್ಟು 41 ಹುದ್ದೆ ಖಾಲಿ ಇದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಯ ವಿವರ:
ಡೆಪ್ಯುಟಿ ಮ್ಯಾನೇಜರ್(ಟೆಕ್ನಿಕಲ್) -11
ಡೆಪ್ಯುಟಿ ಮ್ಯಾನೇಜರ್ (ಲೀಗಲ್)- 18
ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್ & ಅಕೌಂಟ್ಸ್)- 12
ವಿದ್ಯಾರ್ಹತೆ :
ಡೆಪ್ಯುಟಿ ಮ್ಯಾನೇಜರ್(ಟೆಕ್ನಿಕಲ್) – ಎಂಜಿನಿಯರಿಂಗ್ ಪದವಿ
ಡೆಪ್ಯುಟಿ ಮ್ಯಾನೇಜರ್ (ಲೀಗಲ್)- ಕಾನೂನಿನಲ್ಲಿ ಪದವಿ
ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್ & ಅಕೌಂಟ್ಸ್)- ACA, ICWA,ಎಂಬಿಎ, ಎಂ.ಕಾಂ, CFA, PGDMA
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 14/06/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 7, 2023
ವಯೋಮಿತಿ: ಕನಿಷ್ಠ 25 ವರ್ಷ ಮತ್ತು ಗರಿಷ್ಠ 35 ವರ್ಷ
ವಯೋಮಿತಿ ಸಡಿಲಿಕೆ:
ಪ್ರವರ್ಗ 2ಎ/2ಬಿ/3ಎ &3ಬಿ ಅಭ್ಯರ್ಥಿಗಳು-3 ವರ್ಷ
SC/STಪ್ರವರ್ಗ-1 ಅಭ್ಯರ್ಥಿಗಳು-5 ವರ್ಷ
PWD/ ವಿಧವಾ ಅಭ್ಯರ್ಥಿಗಳು-10 ವರ್ಷ
ಮಾಸಿಕ ವೇತನ : ₹ 52,650-97,100
ಉದ್ಯೋಗದ ಸ್ಥಳ : ಬೆಂಗಳೂರು
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ವೈವಾ ವೋಸ್ ಟೆಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು- 1500 ರೂ.
ಪ್ರವರ್ಗ-1/ 2ಎ/2ಬಿ/3ಎ &3ಬಿ ಅಭ್ಯರ್ಥಿಗಳು- 2000 ರೂ.
ಪಾವತಿಸುವ ಬಗೆ – ಡಿಮ್ಯಾಂಡ್ ಡ್ರಾಫ್ಟ್
ಅರ್ಜಿ ಸಲ್ಲಿಕೆ : ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ
ವಿಳಾಸ:
ವ್ಯವಸ್ಥಾಪಕ ನಿರ್ದೇಶಕರು
ಕೆಎಸ್‌ಎಫ್‌ಸಿ ಕೇಂದ್ರ ಕಚೇರಿ
ಕೆಎಸ್‌ಎಫ್‌ಸಿ ಭವನ
ನಂ.1/1
ತಿಮ್ಮಯ್ಯ ರಸ್ತೆ
ಬೆಂಗಳೂರು-560052
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 080 22282507
ಇದನ್ನೂ ಓದಿ: Viral Video: ಆಂಬುಲೆನ್ಸ್ ನೀಡದ ಆಸ್ಪತ್ರೆಯ ಅಧಿಕಾರಿಗಳು ; ಸೈಕಲ್ ಮೇಲೆಯೇ ವೃದ್ದೆಯ ಶವ ಸಾಗಿಸಿದ ಕುಟುಂಬಸ್ಥರು !