Tamanna bhatia: ಲಿಪ್ ಲಾಕ್ ಮಾತ್ರವಲ್ಲ ‘ಅದಕ್ಕೂ’ ನಾನ್ ರೆಡಿ ಎಂದ ತಮನ್ನಾ!! ಮಿಲ್ಕಿ ಬ್ಯೂಟಿಯ ಹಸಿಬಿಸಿ ವಿಡಿಯೋ ವೈರಲ್!!

Latest Tollywood news actress Tamannaah bhatia reveals why she broke her no kissing rule Tamanna bhatia jee karda movie hot videos viral

Tamanna bhatia: ಬಾಹುಬಲಿ(Bahubali) ಖ್ಯಾತಿಯ ನಟಿ ತಮನ್ನಾ ಭಾಟಿಯಾ ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ಕೆಲ ದಿನಗಳಿಂದ ಲವ್, ಡೇಟಿಂಗ್ ಹಾಗೂ ಲಿಪ್ ಕಿಸ್ ವಿಚಾರವಾಗಿ ಸುದ್ದಿಯಲ್ಲಿರೋ ನಟಿ ಇದೀಗ ಮತ್ತೊಂದು ವಿಚಾರವಾಗಿ ಸುದ್ದಿಯಾಗುತ್ತಿದ್ದು, ಆ ಹಸಿ ಬಿಸಿ ವಿಡಿಯೋಗಳು ವೈರಲ್ ಆಗ್ತಿವೆ.

ಹೌದು, ನಟಿ ತಮನ್ನಾ ಭಾಟಿಯಾ (Tamanna Bhatia) ಅವರು ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಈಗೀಗ ಅವರು ಮಾಡುತ್ತಿರುವ ಪಾತ್ರಗಳು ಎಲ್ಲರ ಗಮನ ಸೆಳೆಯುವಂತಿದೆ. ಇತ್ತೀಚೆಗೆ ‘ಲಸ್ಟ್​ ಸ್ಟೋರಿಸ್ 2’ (Love story 2)ಟ್ರೇಲರ್ ಮೂಲಕ ತಮನ್ನಾ ಗಮನ ಸೆಳೆದಿದ್ದರು. ಈಗ ಅವರು ಮತ್ತೊಮ್ಮೆ ಬೋಲ್ಡ್​ ಅವತಾರ ತಾಳಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡ ‘ಜೀ ಕರ್ದಾ’ (Jee Karda) ವೆಬ್ ಸೀರಿಸ್​ನಲ್ಲಿ ತಮನ್ನಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾ (Social Media) ಮೂಲಕ ವೈರಲ್ ಆಗಿದೆ.

ಫಿಲ್ಮ್​ ಕಂಪ್ಯಾನಿಯನ್​ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರೋ ನಟಿ ತಮನ್ನಾ, 18 ವರ್ಷಗಳ ನೋ ಕಿಸ್ಸಿಂಗ್​ ನೀತಿಗೆ ಇದೀಗ ತೆರೆ ಎಳೆದಿದ್ದೇಕೆ ಎಂಬುದನ್ನು ವಿವರಿಸಿದ್ದಾರೆ. ಲಸ್ಟ್​ ಸ್ಟೋರೀಸ್​ ಸರಣಿಗಾಗಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದರ ಹಿಂದಿನ ಕಾರಣವನ್ನು ಮಿಲ್ಕಿ ಬ್ಯೂಟಿ ವಿವರಿಸಿದ್ದಾರೆ.

ನಾನು ಇದುವರೆಗೂ ಒಂದು ವರ್ಗದ ಪ್ರೇಕ್ಷಕರಿಗೆ ಮಾತ್ರ ಮನರಂಜನೆ ನೀಡುತ್ತಿದ್ದೆ. ಭಾರತವು ದೊಡ್ಡದಾಗಿದೆ ಮತ್ತು ಭಾರತದ ಹಲವು ಭಾಗಗಳು ಇನ್ನೂ ವಿಕಸನಗೊಳ್ಳಬೇಕಾಗಿದೆ. ಈಗಾಗಲೇ ಸಾಕಷ್ಟು ವಿಕಸನ ಆಗಿದೆ. ಅದಕ್ಕೆ ಕಾರಣವಾದ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಿಗೆ ಧನ್ಯವಾದಗಳು. ಇಂದು ಬೆರಳ ತುದಿಯಲ್ಲೇ ಪ್ರತಿಯೊಂದು ಮಾಹಿತಿಯು ಲಭ್ಯವಾಗುತ್ತದೆ. ಪ್ರತಿಯೊಬ್ಬರಿಗೆ ಸಾಕಷ್ಟು ವಿಷಯಗಳು ಸಿಗುತ್ತಿವೆ. ನಾನೊಬ್ಬ ಕಲಾವಿದೆಯಾಗಿ ಯಾವುದನ್ನು ಹಿಡಿದಿಟ್ಟುಕೊಳ್ಳುವುದನ್ನು ಬಯಸುವುದಿಲ್ಲ. ಇದು ಸಂಪೂರ್ಣ ಸೃಜನಾತ್ಮಕ ಪ್ರಯತ್ನವಾಗಿದೆ. ಹೀಗಾಗಿ ನಾನು ಎಲ್ಲ ನೀತಿಗಳಿಗೆ ಬ್ರೇಕ್​ ಹಾಕಿದ್ದೇನೆ. 18 ವರ್ಷಗಳ ವೃತ್ತಿ ಜೀವನದ ಬಳಿಕ ನಾನು ಖ್ಯಾತಿ ಪಡೆಯಲು ಯತ್ನಿಸುತ್ತಿಲ್ಲ. ಅದು ನನ್ನ ಆದ್ಯತೆಯು ಅಲ್ಲ ಎಂದು ತಮನ್ನಾ ಹೇಳಿದರು.

ಅಂದಹಾಗೆ ಈ ವೆಬ್​ಸರಣಿಯ ಭಾಗವನ್ನು ಸುಜೋಯ್​ ಘೋಷ್​(Sujoy ghosh) ಎಂಬುವರು ನಿರ್ದೇಶಿಸಿದ್ದಾರೆ. ಬಾಯ್​ಫ್ರೆಂಡ್​ ವಿಜಯ್​ ವರ್ಮ ಸಹ ಈ ಸರಣಿಯಲ್ಲಿ ನಟಿಸಿದ್ದಾರೆ. ನಾನು ಸುಜೋಯ್​ ನಿರ್ದೇಶನದಲ್ಲಿ ನಟಿಸಬೇಕೆಂದು ನಿಜಕ್ಕೂ ಬಯಸಿದ್ದೆ ಮತ್ತು ಈ ಪಾತ್ರಕ್ಕಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ನಿಜಕ್ಕೂ ಖುಷಿಯಾಗಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಎಂದೂ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿಲ್ಲ. ಮೃಧುವಾದ ಇಂಟಿಮಸಿ ದೃಶ್ಯಗಳಲ್ಲಿ ಮಾತ್ರ ನಟಿಸಿದ್ದೆ. ಇಂತಹ ದೃಶ್ಯಗಳಲ್ಲಿ ನಟಿಸಲು ಮುಜುಗರ ಅನುಭವಿಸುತ್ತಿದ್ದೆ ಎಂದು ಸಂದರ್ಶನದಲ್ಲಿ ತಮನ್ನಾ ಹೇಳಿದ್ದಾರೆ.

https://twitter.com/FilmsLoveLife/status/1669016971441053696?t=tTbQogL4lcLU4kfuP75FTQ&s=08

ಅಂದಹಾಗೆ ‘ಜೀ ಕರ್ದಾ’(Jee krda) ಏಳು ಬಾಲ್ಯ ಸ್ನೇಹಿತರ ಕಥೆ. ಇವರು ಪ್ರೌಢಾವಸ್ಥೆಗೆ ಬಂದ ನಂತರ ಏನೆಲ್ಲ ಸವಾಲುಗಳನ್ನು ಎದುರಿಸುತ್ತಾರೆ ಅನ್ನೋದು ಈ ಸೀರಿಸ್​ನ ಕಥೆ. ತಮನ್ನಾ ಪ್ರೇಮಕ್ಕಾಗಿ ಪರದಾಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಮದುವೆಯ ಕಲ್ಪನೆಯನ್ನು ಯಾರು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಸಿಕ್ಕ ಸಿಕ್ಕವರ ಜೊತೆ ಅವರು ರೊಮ್ಯಾನ್ಸ್​ಗೆ ಇಳಿಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟು ಟ್ರೋಲ್​​ಗಳು ಹರಿದಾಡುತ್ತಿವೆ.

https://twitter.com/letscinema/status/1669043438313156608?t=ErJrJxuukKIX5bBh6yV1hQ&s=08

ಇನ್ನು ಇತ್ತೀಚಿಗೆ ನಟಿ ತಮನ್ನಾ (Tamanna), ವಿಜಯ್ ವರ್ಮಾ (Vijay Varma) ಜೊತೆಗಿನ ಪ್ರೀತಿಯ ಬಗ್ಗೆ ಮೌನ ಮುರಿದಿದ್ದರು. ಅವರು ನನ್ನ ಖುಷಿಯ ಖಜಾನೆ ಅಂತಾ ನಟಿ ಮಾತನಾಡಿದ್ದರು. ವಿಜಯ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ಹೇಳಿದ್ದರು. ಈ ಮೂಲಕ ಲವ್ ಬಗ್ಗೆ ನಟಿ ಸಮ್ಮತಿ ಸೂಚಿಸಿದ್ದರು.

https://twitter.com/telugucinemaza/status/1669020634687631360?t=qYvaPZHgU3MMb2iiDJhDWw&s=08

 

ಇದನ್ನೂ ಓದಿ: ಶಾಲಾ-ಕಾಲೇಜುಗಳಲ್ಲಿ ನಾಡಗೀತೆ, ರಾಷ್ಟ್ರಗೀತೆ ನಂತ್ರ ‘ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ : ಸಿಎಂ ಸಿದ್ದರಾಮಯ್ಯ ಘೋಷಣೆ

Leave A Reply

Your email address will not be published.