Cyclone: ಚಂಡಮಾರುತಕ್ಕೆ ಸ್ತ್ರೀಯರ ಹೆಸರಿಡುವುದ್ಯಾಕೆ? ಅಂದ ಹಾಗೆ ಮಹಿಳೆಯರ ಹೆಸರಿರುವ ಸೈಕ್ಲೋನ್‌ಗೆ ರೌದ್ರಾವತಾರ ಹೆಚ್ಚಂತೆ-ಅಧ್ಯಯನ
Interesting facts about cyclone name Cyclones with female names more dangerous cyclone
Cyclone: ಈ ಚಂಡಮಾರುತಕ್ಕೆಲ್ಲ ಇಡುವ ಹೆಸರುಗಳಲ್ಲಿ ಅವು ಎಷ್ಟು ಭಯಾನಕವಾಗಿದೆಯೆಂದು ತಿಳಿಯಬಹುದು ಎಂದು ಅಧ್ಯಯನವೊಂದು ಹೇಳಿದೆ. ಹೌದು, ಅದರಲ್ಲೂ ಹೆಣ್ಮಕ್ಕಳ ಹೆಸರು ಇರುವ ಚಂಡಮಾರುತಗಳು (Cyclone) ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ. ಇವುಗಳ ಹೆಸರು ಮಾತ್ರ ಶಾಂತ ಆದರೆ ಇವುಗಳ ಆರ್ಭಟ, ರೌದ್ರಾವತಾರ ಹೆಚ್ಚು ಎನ್ನಲಾಗಿದೆ.
ಸ್ತ್ರೀಯರ ಹೆಸರಿರುವ ಚಂಡಮಾರುತಗಳ ಅಬ್ಬರ ಕಡಿಮೆ ಇರುವುದಿಲ್ಲ, ಬದಲಾಗಿ ಹೆಚ್ಚಾಗಿರುತ್ತದೆ, ಹೆಣ್ಣುಮಕ್ಕಳ ಹೆಸರಿರುವ ಚಂಡಮಾರುತಗಳು ಹೆಚ್ಚು ಮಾರಣಾಂತಿಕವಾಗಿರುತ್ತವೆ ಎಂದು ಅಧ್ಯಯನವೊಂದು ಹೇಳಿದೆ. ಅಂದ ಹಾಗೆ ಸ್ತ್ರೀಯರ ಹೆಸರಿರುವ ಹೆಸರುಗಳನ್ನೇ ನೋಡಿ, ಎಷ್ಟು ಚೆನ್ನಾಗಿದೆ, ಆದರೆ ಅಬ್ಬರ ಕಡಿಮೆ ಇರುವುದಿಲ್ಲ. ಹೆಣ್ಮಕ್ಕಳ ಹೆಸರಿಟ್ಟ ಚಂಡಮಾರುಗಳು ಹೆಚ್ಚು ಮಾರಣಾಂತಿಕವಾಗಿರುತ್ತದೆ ಎಂದು ಅಧ್ಯಯನ ಹೇಳಿದೆ. ಉದಾ; ಬುರೇವಿ, ಲೈಲಾ, ಫೇಟ್, ಕತ್ರಿನಾ, ಹರಿಕೇನ್ ಐಲಾ, ಫಾನ್. ಹೆಸರುಗಳೆಲ್ಲ ಒಂದಕ್ಕಿಂತ ಒಂದು ಚಂದ ಇದೆ, ಆದರೆ ಇದರ ಆರ್ಭಟ ಮಾತ್ರ ಭಯಂಕರ.
ಈ ಅಧ್ಯಯನದ ಪ್ರಕಾರ 1950-2012 ರಲ್ಲಿ ಅಮೆರಿಕಾದಲ್ಲಿ ಸಂಭವಿಸಿದ ಚಂಡಮಾರುತದಿಂದಾದ ಸಾವು ನೋವಿನ ಪ್ರಮಾಣ ಹೇಳುವುದಾದ ಇವುಗಳಲ್ಲಿ ಹೆಣ್ಣುಮಕ್ಕಳ ಹೆಸರಿರುವ ಚಂಡಮಾರುತಗಳು ಹೆಚ್ಚು ಸಾವಿಗೆ ಕಾರಣವಾಗಿದೆ ಎಂದು ಮಾಹಿತಿ ಇದೆ. ಅಂದ ಹಾಗೆ 41.84 ರಷ್ಟು ಹೆಣ್ಮುಮಕ್ಕಳ ಹೆಸರು ಇರುವ ಚಂಡಮಾರುತ ಸಾವಿಗೆ ಕಾರಣವಾಗಿದ್ದರೆ, ಪುರುಷರದ್ದು 15.15 ರಷ್ಟು ಪಾಲು ಹೊಂದಿದೆ. 29ವರ್ಷಗಳ ವರೆಗೆ ಪುರುಷರ ಹೆಸರನ್ನು ಚಂಡಮಾರುತಕ್ಕೆ ಇಟ್ಟಿಲ್ಲ. 1979ರವರೆಗೆ ಉಂಟಾದ ಎಲ್ಲಾ ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನೇ ಇಡಲಾಗಿದೆ.
ಅಂದ ಹಾಗೆ ನಿಮಗಿದು ಗೊತ್ತೇ? ಹೆಚ್ಚಾಗಿ ಚಂಡಮಾರುತಕ್ಕೆ ಸ್ತ್ರೀಯರ ಹೆಸರನ್ನೇ ಯಾಕೆ ಇಡಲಾಗುತ್ತದೆ ಎಂದು? 1950ರಲ್ಲಿ ವಿಶ್ವ ಹವಾಮಾನ ಸಂಸ್ಥೆ(WMO) ಹಾಗೂ ಮಿಲಿಟರಿ ಹವಾಮಾನ ತಜ್ಞ ಸ್ತ್ರೀಯರ ಹೆಸರನ್ನು ಚಂಡಮಾರುತಕ್ಕೆ ಇಡಲಾರಂಭಿಸಿದರು. ಆದರೆ ಸುಮಾರು 60 ಮತ್ತು 70ರ ದಶಕದಲ್ಲಿ ಮಹಿಳಾ ಹಕ್ಕುಗಳ ಸಂಘಟನೆಗಳು ಪ್ರತಿಭಟಿಸಿದ್ದರಿಂದ, 1978 ರಲ್ಲಿ ಚಂಡಮಾರುತಗಳಿಗೆ ಪುರುಷರ ಹೆಸರನ್ನು ಕೂಡಾ ಇಡಲಾಯಿತು.
ಸಾಮಾನ್ಯವಾಗಿ ಹೆಣ್ಮಕ್ಕಳ ಹೆಸರನ್ನು ಚಂಡಮಾರುತಕ್ಕೆ ಮುಂಗಾರಿನ ಪ್ರಾರಂಭದಲ್ಲಿ ಉಂಟಾಗುವ ಚಂಡಮಾರುತಕ್ಕೆ ಇಡಲಾಗುತ್ತದೆ. ಬೆಸ ಸಂಖ್ಯೆಯಿಂದ ಕೊನೆಯಾಗುವ ವರ್ಷದಲ್ಲಿ ಸಮ ಸಂಖ್ಯೆಯ ಚಂಡಮಾರುತಕ್ಕೆ ಹೆಣ್ಮಕ್ಕಳ ಹೆಸರು, ಹಾಗೆನೇ, ಸಮಸಂಖ್ಯೆಯಿಂದ ಕೊನೆಯಾಗುವ ವರ್ಷದಲ್ಲಿ ಬೆಸ ಸಂಖ್ಯೆಯ ಚಂಡಮಾರುತಕ್ಕೆ ಪುರುಷರ ಹೆಸರನ್ನು ಇಡುವುದು ವಾಡಿಕೆ.
ಇದನ್ನೂ ಓದಿ: 83ನೇ ವಯಸ್ಸಿನಲ್ಲಿ 29ವರ್ಷದ ಪ್ರೇಯಸಿಯಿಂದ ಮತ್ತೊಮ್ಮೆ ಗಂಡು ಮಗುವಿನ ತಂದೆಯಾದ ಹಾಲಿವುಡ್ ನಟ!