APMC ಕಾಯ್ದೆ ಹಿಂಪಡೆಯಲು ರಾಜ್ಯ ಸರಕಾರ ನಿರ್ಧಾರ?!

Karnataka latest political news repeal of bjp govt's amendments to APMC act minister H K Patil

APMC act: ಹೆಚ್‌.ಕೆ.ಪಾಟೀಲ್‌ ಎಪಿಎಂಸಿ ಕಾಯ್ದೆಯ (APMC act) ಬಗ್ಗೆ ಹೊಸ ವಿಚಾರವೊಂದನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ. ರಾಜ್ಯ ಸರಕಾರ ಎಪಿಎಂಸಿ ಕಾಯ್ದೆ ವಾಪಸ್‌ ಪಡೆದು, ಈ ಹಿಂದೆ ಇದ್ದ ಹಳೇ ಕಾಯ್ದೆಯನ್ನೇ ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ.

ಜು.3ರಂದು ವಿಧಾನಸಭೆ ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಈ ಬಗ್ಗೆ ಎಪಿಎಂಸಿ ಕಾಯ್ದೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುವುದು, ಈಗಿನ ಕಾಯ್ದೆ ರದ್ದು ಮಾಡಿ, ಈ ಹಿಂದಿನ ಎಪಿಎಂಸಿ ಕಾಯ್ದೆಯನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳಬೇಕು ಎಂದು ಸುದ್ದಿಗಾರರೊಂದಿಗೆ ಹೆಚ್ ಕೆ ಪಾಟೀಲ್‌ ಹೇಳಿದ್ದಾರೆ.

ಬಿಜೆಪಿ ಸರಕಾರ ಎಪಿಎಂಸಿ ಕಾಯ್ದೆಯನ್ನು ಆತುರಾತುರವಾಗಿ ಜಾರಿಗೆ ತಂದ ಕಾರಣ ಎಪಿಎಂಸಿ ಅಮಾಲಿಗಳಿಗೂ ಸಮಸ್ಯೆ ಉಂಟಾಗಿತ್ತು. ಎಪಿಎಂಸಿ ಕಾಯ್ದೆಗೆ ದೇಶದಲ್ಲಿ ವಿರೋಧ ವ್ಯಕ್ತವಾದ ಕಾರಣ ಈ ಹಿನ್ನಲೆಯಲ್ಲಿ ಕೇಂದ್ರ ಈ ಕಾಯ್ದೆಯನ್ನು ವಾಪಸ್‌ ಪಡೆದರೂ ರಾಜ್ಯದಲ್ಲಿ ಮಾತ್ರ ಬಿಜೆಪಿ ಸರಕಾರ ಈ ಕಾಯ್ದೆ ವಾಪಸ್‌ ಪಡೆದಿಲ್ಲ ಎಂಬ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: SBI Locker Update: ಎಸ್‌ಬಿಐನಿಂದ ಬ್ಯಾಂಕ್‌ ಲಾಕರ್‌ ಚಾರ್ಜ್‌ನಲ್ಲಿ ದೊಡ್ಡ ಬದಲಾವಣೆ; ಗ್ರಾಹಕರೇ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಖಂಡಿತ

Leave A Reply

Your email address will not be published.