ಮಂಗಳೂರಲ್ಲಿ ಇದೆಂಥಾ ಮಹಾ ಯಡವಟ್ಟು…! 3 ಸಾವಿರ ಬರುತ್ತಿದ್ದ ಕರೆಂಟ್ ಬಿಲ್ ಏಳು ಲಕ್ಷ ರೂ..!
Mangalore: ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ಯೋಜನೆ ಜಾರಿಗೆ ತರುತ್ತಿದ್ದಂತೆ ಸಾರ್ವಜನಿಕರು ವಿದ್ಯುತ್ ಬಿಲ್ ಕಡೆ ಗಮನಹರಿಸುವುದು ಹೆಚ್ಚಾಗಿದ್ದು, ಇದೀಗ ಮಂಗಳೂರಲ್ಲಿ (Mangalore)ಮೆಸ್ಕಾಂ ಮಹಾ ಯಡವಟ್ಟು ಬೆಳಕಿಗೆ ಬರುತ್ತಿದೆ.
ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದಲ್ಲದೇ ಘೋಷಣೆಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಕೆಲ ಯೋಜನೆಗಳ ಬಗ್ಗೆ ಜನ ಸಾಮಾನ್ಯರು ಸಂತಸ ಪಟ್ಟರೆ ಇನ್ನೊಂದಷ್ಟು ಯೋಜನೆಗಳ ಬಗ್ಗೆ ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಅದರಲ್ಲೂ ಐದು ಗ್ಯಾರಂಟಿಗಳ ಪೈಕಿ, ಉಚಿತ 200 ಯೂನಿಟ್ ವಿದ್ಯುತ್ ಜಾರಿ ವಿಚಾರವಾಗಿ ಭಾರೀ ಚರ್ಚೆ ನಡೆಸಲಾಗುತ್ತಿದೆ . ಅದರಲ್ಲೂ ಕೆಲ ಜಿಲ್ಲೆಗಳಲ್ಲಿ ಈ ಬಾರಿ ವಿದ್ಯುತ್ ಬಿಲ್ ಭಾರೀ ಏರಿಕೆ ಮಾಡಲಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೇ ಮಂಗಳೂರು ಹೊರವಲಯದ ಉಳ್ಳಾಲ ಬೈಲುನಲ್ಲಿರುವ ಸದಾಶಿವ ಆಚಾರ್ಯ ಎಂಬುವವರಿಗೆ ಏಳು ಲಕ್ಷ ಕರೆಂಟ್ ಬಿಲ್ ಬಂದಿರೋದನ್ನು ಕಂಡು ಆತಂಕಗೊಂಡಿದ್ದಾರೆ.
ಮೀಟರ್ ರೀಡರ್ ಯಡವಟ್ಟಿನಿಂದಲೇ ಈ ರೀತಿ ಬಿಲ್ ಬಂದಿರೋದಕ್ಕೆ ಸಾಧ್ಯ ಎಂದು ಆರೋಪ ಮಾಡಲಾಗುತ್ತಿದೆ ಅಲ್ಲದೇ ಪ್ರಶ್ನೆ ಮಾಡಿದ್ರೆ, ನೀವು 99,338 ಯೂನಿಟ್ ವಿದ್ಯುತ್ ಬಳಸಿದ್ದೀರಿ ಎಂದು ಬಿಲ್ ಕೊಡಲು ಬಂದ ವ್ಯಕ್ತಿ ಇಲ್ಲಸಲ್ಲದ ಉತ್ತರ ನೀಡಿ ಬಾಯಿ ಮುಚ್ಚಿಸುತ್ತಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಎಚ್ಚೆತ್ತುಕೊಂಡು ಸದಾಶಿವ ಆಚಾರ್ಯಮೆಸ್ಕಾಂ ಅಧಿಕಾರಿಗಳನ್ನು ಕೇಳಿದಾಗ ಯಡವಟ್ಟಾಗಿದೆ ಎಂದು ಉತ್ತರ ನೀಡುವ ಮೂಲಕ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಮತಾಂತರ ನಿಷೇಧ ಕಾಯ್ದೆ ರದ್ದು ರಾಜ್ಯ ಸಚಿವ ಸಂಪುಟ ನಿರ್ಧಾರ