Home Breaking Entertainment News Kannada Vijay Devarakonda: ವಿಜಯ್‌ ದೇವರಕೊಂಡಗೆ ನಾಯಕಿಯಾದ ಮೃಣಾಲ್‌! ರಶ್ಮಿಕಾ ಬದಲಿಗೆ ಜೋಡಿಯಾದ ʼಸೀತಾರಾಮಂʼ ಖ್ಯಾತಿಯ ನಟಿ!

Vijay Devarakonda: ವಿಜಯ್‌ ದೇವರಕೊಂಡಗೆ ನಾಯಕಿಯಾದ ಮೃಣಾಲ್‌! ರಶ್ಮಿಕಾ ಬದಲಿಗೆ ಜೋಡಿಯಾದ ʼಸೀತಾರಾಮಂʼ ಖ್ಯಾತಿಯ ನಟಿ!

Vijay Devarakonda
Image source: The opinionated indian. Com

Hindu neighbor gifts plot of land

Hindu neighbour gifts land to Muslim journalist

Vijay Devarakonda: ವಿಜಯ್ ದೇವರಕೊಂಡ (Vijay Devarakonda) ತನ್ನ ಹೊಸ ಸಿನಿಮಾ ಬಗ್ಗೆ ಮಾಹಿತಿ ರಿವೀಲ್ ಮಾಡಿದ್ದಾರೆ. ಹೌದು ‘ಗೀತಾ ಗೋವಿಂದಂ’ (Geetha Govindam) ಸಿನಿಮಾದ ನಿರ್ದೇಶಕನ ಹೊಸ ಚಿತ್ರಕ್ಕೆ ವಿಜಯ್ ಕೈಜೋಡಿಸಿದ್ದು, ಈ ಬಾರಿ ರಶ್ಮಿಕಾ (Rashmika Mandanna) ಬದಲು ಸೀತಾರಾಮಂ ಬೆಡಗಿ ಜೊತೆ ವಿಜಯ್ ಡ್ಯುಯೇಟ್ ಹಾಡಲಿದ್ದಾರೆ.

ಈಗಾಗಲೇ ಟಾಲಿವುಡ್ ನಲ್ಲಿ ತೆರೆಕಂಡ ಗೀತಾ ಗೋವಿಂದಂ ಸಿನಿಮಾ ಸೂಪರ್ ಹಿಟ್ ಆಗುತ್ತಿದೆ. ಆ ಬಳಿಕ ನಟಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೋಡಿ ಸಾಕಷ್ಟು ಖ್ಯಾತಿ ಗಳಿಸಿತ್ತು. ಜೊತೆಗೆ ಈ ಸಿನಿಮಾದ ಬಳಿಕ ರಶ್ಮಿಕಾಗೆ ಟಾಲಿವುಡ್ ನಲ್ಲಿ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗುತ್ತಿದೆ.

ಸದ್ಯ ವಿಭಿನ್ನ ಕಥೆಯೊಂದಿಗೆ ನಿರ್ದೇಶಕ ಪರಶುರಾಮ್ ಮತ್ತು ವಿಜಯ್ ಜೊತೆಯಾಗಿ ಕೈಜೋಡಿಸಿದ್ದಾರೆ. ಈ ಹಿಂದೆ ‘ಗೀತಾ ಗೋವಿಂದಂ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುತ್ತಿದೆ. ರಶ್ಮಿಕಾ- ವಿಜಯ್ ಜೋಡಿ ಕಮಾಲ್ ಮಾಡಿತ್ತು. ಇದೀಗ ಮತ್ತೆ ಈ ತಂಡ ಹೊಸ ಸಾಹಸಕ್ಕೆ ಕೈಹಾಕಿದೆ.

ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ, ಪರಶುರಾಮ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿದೆ. ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಪಕದಿಲ್ ರಾಜು, ಶಿರೀಶ್ ಈ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ, ವಾಸು ವರ್ಮಾ ಕ್ರಿಯೇಟಿವ್ ಪ್ರೊಡ್ಯೂಸರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಸದ್ಯ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಸಿನಿಮಾಗೆ ಕ್ಲಾಪ್ ಮಾಡಿದ್ರೆ, ಗೋವರ್ಧನ್ ರಾವ್ ದೇವರಕೊಂಡ ಮೊದಲ ಶಾಟ್ ನಿರ್ದೇಶನ ಮಾಡಿದರು.

ಸದ್ಯ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿ ಚಿತ್ರೀಕರಣ ನಡೆಯಲಿದೆ. ಆದರೆ ವಿಜಯ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡದೇ ಇರೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ ವಿಜಯ್- ಮೃಣಾಲ್ ಜೋಡಿ ಸಿನಿಮಾದಲ್ಲಿ ಇಬ್ಬರ ಕಾಂಬಿನೇಶನ್ ಬಗ್ಗೆ ಸಕತ್ ಕ್ಯೂರಿಯಸಿಟಿ ಅಭಿಮಾನಿಗಳಲ್ಲಿ ಇದೆ.

ಇದನ್ನೂ ಓದಿ: Gruhalahakshmi Scheme: ನಾಳೆಯಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ: ದಾಖಲೆ ವಿವರ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್