Adipurush Movie: ಆದಿಪುರುಷ್ ಸಿನಿಮಾ ಬಗ್ಗೆ ಜ್ಯೋತಿಷಿಯ ಶಾಕಿಂಗ್ ಭವಿಷ್ಯ ; ಪ್ರಭಾಸ್ ಮದುವೆ ಬಗ್ಗೆ ಏನಂದ್ರು ಗೊತ್ತಾ?

Entertainment cinema news astrologer venu swamy prediction Adipurush film also says ab prabhas marriage

Adipurush Movie: ಪ್ರಭಾಸ್‌ (Prabhas) ಅಭಿನಯದ ಬಹು ನಿರೀಕ್ಷಿತ ‘ಆದಿಪುರುಷ್‌’ ಸಿನಿಮಾ (Adipurush Movie) ತೆರೆ ಮೇಲೆ ಬರಲು ಸಜ್ಜಾಗಿದೆ. ಜೂನ್‌ (June) 16 ರಂದು ಈ ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದ್ದ ಸಿನಿಮಾ ಕೊನೆಗೂ ರಿಲೀಸ್ ಆಗುತ್ತಿದೆ. ಈ ಮಧ್ಯೆ ಇದೀಗ ಸೆಲೆಬ್ರಿಟಿಗಳ ಭವಿಷ್ಯ ಹೇಳುವ ಪ್ರಸಿದ್ಧ ಜ್ಯೋತಿಷಿ ವೇಣು ಸ್ವಾಮಿ ಅವರು ಆದಿಪುರುಷ್ ಸಿನಿಮಾದ ಭವಿಷ್ಯವನ್ನು ಹೇಳಿದ್ದಾರೆ. ಸಿನಿಮಾ ಬಗ್ಗೆ ಏನಂದ್ರು ಗೊತ್ತಾ? ಸಿನಿಮಾ ಹಿಟ್ ಆಗುತ್ತಾ? ಫ್ಲಾಪ್ ಆಗುತ್ತಾ?

 

ಸಿನಿಮಾದ ಭವಿಷ್ಯ ನುಡಿದ ಜ್ಯೋತಿಷಿ, ಸಿನಿಮಾ ಹಿಂದುತ್ವ, ರಾಮನ ಕುರಿತಾಗಿದೆ. ಆದರೆ, ಜನ ಈ ಸಿನಿಮಾವನ್ನು ಸ್ವೀಕರಿಸುವುದಿಲ್ಲ. ಪ್ರಭಾಸ್ ನಟನೆಯ ಬಾಹುಬಲಿಯಷ್ಟು ಈ ಸಿನಿಮಾ ಸಕ್ಸಸ್ ಆಗಲ್ಲ ಎಂದು ಹೇಳಿದ್ದಾರೆ. ಪ್ರಭಾಸ್ ಈ ಹಿಂದಿನ ಸಿನಿಮಾ ಸಾಹೋ ಹಾಗೂ ರಾಧೆ ಶ್ಯಾಮ್ ಕೂಡ ಫ್ಲಾಪ್ ಆಗಿದೆ. ಇದೀಗ ಆದಿಪುರುಷ್ ಸಿನಿಮಾದ ಬಗ್ಗೆ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಸಿನಿಮಾ ಸಕ್ಸಸ್ ಆಗುತ್ತಾ? ಅಥವಾ ಜ್ಯೋತಿಷಿ ಮಾತಿನಿಂತೆ ಫ್ಲಾಪ್ ಆಗುತ್ತಾ ಕಾದು ನೋಡಬೇಕಿದೆ.

ಪ್ರಭಾಸ್​ಗೆ ಈಗ 43 ವರ್ಷ ವಯಸ್ಸು. ಈಗಲೂ ಮದುವೆಯಾಗದೆ ಸಿಂಗಲ್ ಆಗಿದ್ದಾರೆ. ಅನುಷ್ಕಾ ಶೆಟ್ಟಿ ಸೇರಿದಂತೆ ಹಲವು ನಟಿಯರೊಡನೆ ಪ್ರಭಾಸ್ ಹೆಸರು ಕೇಳಿ ಬಂದಿದೆ ಆದರೆ ಯಾವುದೂ ಸಹ ಖಾತ್ರಿಯಾಗಿಲ್ಲ. ಈ ಹಿಂದೆ ಜ್ಯೋತಿಷಿ ವೇಣು ಸ್ವಾಮಿ ಪ್ರಭಾಸ್ ಮದುವೆ ಬಗ್ಗೆ ಮಾತನಾಡಿದ್ದು, ಸ್ಟಾರ್ ನಟ ಪ್ರಭಾಸ್ ಮದುವೆಯಾದರೆ ಒಳಿತಲ್ಲ ಎಂದು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.‌

ಸದ್ಯ ವಾಲ್ಮೀಕಿ ಬರೆದ ರಾಮಾಯಣ ಆಧಾರಿತ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್ ಜೂನ್ 16ರಂದು ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ಪ್ರಭಾಸ್, ಕೃತಿ ಸನೋನ್ (kruthi sanon), ಸೈಫ್ ಅಲಿ ಖಾನ್ (Saif Ali khan) ನಟಿಸಿದ್ದಾರೆ. ಓಂ ರಾವತ್ ನಿರ್ದೇಶನದ ಸಿನಿಮಾ ವಿಶ್ವಾದ್ಯಂತ ಬಿಡುಗಡೆಗೆ ರೆಡಿಯಾಗಿದೆ.

ಇದನ್ನೂ ಓದಿ: SETS Recruitment 2023: ನಿರುದ್ಯೋಗಿಗಳಿಗೆ ಉದ್ಯೋಗವಕಾಶ ; ವೇತನ 90 ಸಾವಿರ , ಕೂಡಲೇ ಅರ್ಜಿ ಸಲ್ಲಿಸಿ !

Leave A Reply

Your email address will not be published.