Sushanth Singh Rajput Death Anniversary: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ನಮ್ಮೊಂದಿಗೆ ಇಲ್ಲದೆ ಇಂದಿಗೆ ಮೂರು ವರ್ಷ!

Sushanth Singh Rajput death anniversary

Sushanth Singh Rajput: ಸುಶಾಂತ್‌ ಸಿಂಗ್‌ (Sushanth Singh Rajput) ಬಾಲಿವುಡ್‌ ನ ಹೆಸರಾಂತ ನಟ ಒಂದು ಕಾಲದಲ್ಲಿ. ಆದರೆ ಇಂದು ಈ ನಟ ನೆನಪು ಮಾತ್ರ. ಜೂನ್‌ 14, 2022 ರಂದು ಸುಶಾಂತ್‌ ಸಿಂಗ್‌ ಅಭಿಮಾನಿಗಳಿಗೆ ಕರಾಳ ದಿನ. ಸುಶಾಂತ್‌ ಸಿಂಗ್‌ ಇನ್ನಿಲ್ಲ ಎಂಬ ಸುದ್ದಿ ಕೇಳಿಯೇ ದಿಗ್ಭ್ರಮೆಗೊಳಗಾದ ಕೆಟ್ಟ ದಿನ ಎಂದೇ ಹೇಳಬಹುದು. ಇಂದು ಸುಶಾಂತ್‌ ಎಂಬ ಸ್ಪುರದ್ರೂಪಿ ನಟ ನಮ್ಮೊಂದಿಗೆ ಇಲ್ಲದೆ ಮೂರು ವರ್ಷ. ಆದರೆ ಇಂದಿಗೂ ಈ ನಟನ ಸಾವಿನ ರಹಸ್ಯ ರಹಸ್ಯವಾಗಿಯೇ ಉಳಿದಿದೆ. ಸಿಬಿಐ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅಭಿಮಾನಿಗಳು ಇಂದಿಗೂ ಈ ರಹಸ್ಯ ಹೊರ ಬರಲಿ ಎಂದು ಕಾಯುತ್ತಿದ್ದಾರೆ.

 

ಕಿರುತೆರೆಯಿಂದ ಹಿರಿತೆರೆಗೆ ಹಾರಿ, ಬಹಳ ಅಲ್ಪಾವಧಿಯಲ್ಲೇ ಎಲ್ಲರ ಮನಸ್ಸನ್ನು ಗೆದ್ದ ನಟನೆಂದರೆ ಸುಶಾಂತ್‌ ಸಿಂಗ್‌. ತನ್ನ ಸಿನಿಕೆರಿಯರ್‌ನಲ್ಲಿ ಉತ್ತಮ ಚಿತ್ರಗಳನ್ನು ಆಯ್ದುಕೊಂಡು ಬಹಳ ಎತ್ತರಕ್ಕೆ ಬೆಳೆದಿದ್ದ ಸುಶಾಂತ್‌ ಸಿಂಗ್‌ ಮುಂಬೈನ ಫ್ಲ್ಯಾಟ್‌ವೊಂದರಲ್ಲಿ ಬಾಡಿಗೆಗೆ ಇದ್ದರು. ಅದೇ ಫ್ಲ್ಯಾಟ್‌ನಲ್ಲಿ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದರು. ಇದೊಂದು ಆತ್ಮಹತ್ಯೆ ಎಂದು ಆಗ ವರದಿಯಾಗಿತ್ತು. ಆದರೆ ಇಂದು ಇದೊಂದು ವ್ಯವಸ್ಥಿತ ಕೊಲೆ ಎಂಬ ಆರೋಪ ಹೆಚ್ಚಾಗಿ ಕೇಳಿ ಬಂದವು.

ಇಂದಿಗೂ ಮುಂಬೈ ಪೊಲೀಸರಿಗೆ ಇದು ಕೊಲೆಯೇ, ಆತ್ಮಹತ್ಯೆಯೇ ಎಂಬುವುದನ್ನು ಪತ್ತೆ ಮಾಡಲು ಆಗಿಲ್ಲ. ಇದರ ಜೊತೆಗೆ ಅಭಿಮಾನಿಗಳಿಂದ ನ್ಯಾಯ ಕೊಡಿಸಿ ಎಂಬ ಕೂಗು ಹೆಚ್ಚಾಗಿಯೇ ಕೇಳಿ ಬಂತು. ನಂತರ ಈ ಕೇಸನ್ನು ಸಿಬಿಐಗೆ ವರ್ಗಾಯಿಸಲಾಯಿತು. ಈಗ ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಆದರೆ ಸತ್ಯ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ.

ಇದನ್ನೂ ಓದಿ: ಸಾರಿಗೆ ಬಸ್‍ನಿಂದ ಬಾಲಕಿ ಬಿದ್ದು ಸಾವು ಕೇಸ್‌ : ಎಚ್ಚೆತ್ತ ಸಾರಿಗೆ ನಿಗಮ, ಹೊಸ ರೂಲ್ಸ್‌ ಫಿಕ್ಸ್‌

Leave A Reply

Your email address will not be published.