Home Breaking Entertainment News Kannada Toby Movie: ಹೊಸ ಸಿನಿಮಾ ಹೆಸರು ರಿಲೀಸ್‌ ಮಾಡಿದ ರಾಜ್‌ ಬಿ ಶೆಟ್ಟಿ; ʼಟೋಬಿʼ ಮೂಲಕ...

Toby Movie: ಹೊಸ ಸಿನಿಮಾ ಹೆಸರು ರಿಲೀಸ್‌ ಮಾಡಿದ ರಾಜ್‌ ಬಿ ಶೆಟ್ಟಿ; ʼಟೋಬಿʼ ಮೂಲಕ ಮತ್ತೊಮ್ಮೆ ತೆರೆಗೆ!

Hindu neighbor gifts plot of land

Hindu neighbour gifts land to Muslim journalist

Raj B Shetty :ರಾಜ್‌ ಬಿ ಶೆಟ್ಟಿ ಕನ್ನಡ ಚಿತ್ರರಂಗದಲ್ಲೇ ಚಿರಪರಿಚಿತ ಹೆಸರು. ತನ್ನ ನಟನಾ ಕೌಶಲ್ಯ, ನಿರ್ದೇಶನದಿಂದಾಗಿ ತನ್ನದೇ ರೀತಿಯ ಅಭಿಮಾನಿ ವರ್ಗವನ್ನು ಹೊಂದಿರುವ, ಹಾಗೂ ಬಹಳ ವಿಶೇಷವಾಗಿ ಗುರುತಿಸಿಕೊಂಡಿರುವ ರಾಜ್‌ ಬಿ ಶೆಟ್ಟಿ (Raj B Shetty) ಅವರ ಹೊಸ ಚಿತ್ರಕ್ಕೆ ʼ ಟೋಬಿʼ (Tobby Kannada Movie) ಎಂಬ ಹೆಸರಿಡಲಾಗಿದೆ. ಹೊಸ ಚಿತ್ರಕ್ಕೆ ಹೊಸ ಶೀರ್ಷಿಕೆಯನ್ನು ಅನೌನ್ಸ್‌ ಮಾಡಿ ಮೋಷನ್‌ ಪೋಸ್ಟರ್‌ ಹಂಚಿಕೊಳ್ಳಲಾಗಿದೆ. ಆಗಸ್ಟ್‌ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಮಾಹಿತಿಯನ್ನು ಸ್ವತಃ ರಾಜ್‌ ಬಿ ಶೆಟ್ಟಿ ನೀಡಿದ್ದಾರೆ. ತನ್ನದೇ ವಿಭಿನ್ನವಾದ ನಟನೆ, ಸಿನಿಮಾದಿಂದ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಪ್ರಸಿದ್ಧಿ ಪಡೆದ ರಾಜ್‌ ಬಿ ಶೆಟ್ಟಿಯವರ ಹೊಸ ಶೀರ್ಷಿಕೆ, ಜೊತೆಗೆ ಸಿನಿಮಾ ಬಗ್ಗೆ ಜನ ನಿಜಕ್ಕೂ ಕುತೂಹಲ ಹೊಂದಿರುವುದು ಸತ್ಯ.

 

ರಾಜ್‌ ಬಿ ಶೆಟ್ಟಿ ನಿರ್ದೇಶನದಲ್ಲಿ ಅತ್ಯದ್ಭುತ ಸಿನಿಮಾ ಮೂಡಿ ಬಂದಿದೆ. ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಈ ಸಿನಿಮಾಗಳನ್ನು ಪ್ರೇಕ್ಷಕರು ಮರೆಯುವಂತಿಲ್ಲ. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕೂಡಾ ರಿಲೀಸ್‌ ಗೆ ರೆಡಿಯಾಗಿದ್ದು, ಈ ಸಮಯದಲ್ಲೇ ತನ್ನ ಹೊಸ ಚಿತ್ರದ ಕುರಿತು ಹೇಳಿದ್ದಾರೆ ನಿರ್ದೇಶಕರು. ಟೋಬಿ ಮೋಷನ್‌ ಪೋಸ್ಟರ್‌ ನೋಡಿ ಪ್ರತಿಯೊಬ್ಬರಲ್ಲಿಯೂ ಇದರಲ್ಲಿಯೂ ಏನೋ ಭಿನ್ನತೆ ಇದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ ಎಂದರೆ ತಪ್ಪಿಲ್ಲ.

 

ಲೈಟರ್‌ ಬುದ್ಧ ಫಿಲ್ಮ್ಸ್‌ ಮೂಲಕ ಟೋಬಿ ಸಿನಿಮಾ ಸಿದ್ಧವಾಗುತ್ತಿದೆ. ಇವರಿಗೆ ಜೊತೆಯಾಗಿ ಅಗಸ್ತ್ಯ ಫಿಲ್ಮ್ಸ್‌ ಕೂಡಾ ಇದೆ. ಟೋಬಿ ಮಾಸ್‌ ಸಿನಿಮಾ ಎಂದು ಹೇಳಲಾಗಿದ್ದು, ಈ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಜೊತೆಗೆ ಸಂಯುಕ್ತ ಹೊರನಾಡು, ಚೈತ್ರಾ ಆಚಾರ್‌ ನಟಿಸಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಹಾಗೆನೇ ಈ ಸಿನಿಮಾ ನನಗೆ ತುಂಬಾ ಅನುಭವ ನೀಡಿದೆ. ಆ ಅನುಭವವನ್ನೇ ನಾನು ಈ ಸಿನಿಮಾದಲ್ಲಿ ತೋರಿಸಿದ್ದೇನೆ, ಹಾಗೆನೇ ಈ ಸಿನಿಮಾ ನಿಮಗೆ ಖಂಡಿತ ಇಷ್ಟ ಆಗುತ್ತದೆ ಎಂದು ರಾಜ್‌ ಬಿ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ:ಕೊನೆಗೂ ‘ವರ್ಮಾ’ ಜೊತೆಗಿನ ಪ್ರೀತಿಯ ಮರ್ಮಾ ಬಿಚ್ಚಿಟ್ಟ ತಮನ್ನಾ ಭಾಟಿಯ!!ಅಂದು ಏನೂ ಇಲ್ಲವೆಂದ ಮಿಲ್ಕಿ ಬ್ಯೂಟಿ ಇಂದು ಹೇಳಿದ್ದೇನು?