ಶಾರುಖ್ ಮಹಾನ್ ದಿನಕ್ಕೆ ಸೇದೋ ಸಿಗರೇಟ್ ಎಷ್ಟು ಪ್ಯಾಕ್ ಗೊತ್ತಾ ? ಕ್ಯಾನ್ಸರ್ ಆತನನ್ನು ಬೆನ್ನು ಬಿದ್ದಿದ್ಯಾ ?

Shah Rukh Khan: ಶಾರುಖ್ ಖಾನ್ (Shah Rukh Khan) ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದು, ತಮ್ಮ ನಟನೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಲಿವುಡ್ ಕಿಂಗ್​ ಆಗಿ ಮೆರೆಯುತ್ತಿರುವ ಶಾರುಖ್​ ಖಾನ್​ಗೆ ಸಿಗರೇಟ್ ಸೇದುವ ಚಟ ಒಂದು ಇದೆಯಂತೆ. ಹೌದು, ಇದರ ಕಾರಣ ಆದರೂ ಏನಿರಬಹುದು ನೋಡೋಣ. ಅಷ್ಟಕ್ಕೂ ಇವರು ಸೇದುವ ಸಿಗರೇಟ್ ಸಂಖ್ಯೆ ಎಷ್ಟು ಅಂತ ನೀವೂ ಊಹಿಸಲು ಸಾಧ್ಯವಿಲ್ಲ.

 

ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಶಾರುಖ್​ ಅಭಿಮಾನಿಗಳ (Shahrukh Fans) ಜೊತೆ ಕೂಡ ಟಚ್​ನಲ್ಲಿದ್ದಾರೆ. ಇದೀಗ ಶಾರುಖ್​ ಧೂಮಪಾನದ ಚಟದ ಬಗೆಗಿನ ಸಸ್ಪೆನ್ಸ್ ನ್ನು ಕೂಡ ಈಗಾಗಲೇ ರಿವೀಲ್ ಮಾಡಿದ್ದಾರೆ .

 

ಮುಖ್ಯವಾಗಿ, ಸಿಗರೇಟ್ ಸೇದದೆ ಇದ್ರೆ ನನಗೆ ನಿದ್ದೆ ಬರುವುದಿಲ್ಲ ಎಂದ ಶಾರುಖ್​ ಖಾನ್​ಗೆ ಈ ಚಟದಿಂದ ದೂರ ಹೊರಬರಲು ಆಗ್ತಿಲ್ಲ ಎಂದಿದ್ದಾರೆ.

 

ಹೌದು, ಖ್ಯಾತ ಬಾಲಿವುಡ್ ಕಿಂಗ್​ ಆಗಿ ಮೆರೆಯುತ್ತಿರುವ ಶಾರುಖ್​ ಖಾನ್​ಗೆ ಸಿಗರೇಟ್ ಸೇದುವ ಚಟವನ್ನು ಬಿಡಲು ಸಾಧ್ಯವಾಗಿಲ್ಲ. ತಾನು ದಿನಕ್ಕೆ 100 ಸಿಗರೇಟ್ ಸೇದುತ್ತೇನೆ ಎಂದು ಸ್ವತಃ ಶಾರುಖ್​ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ನಟ ಹಲವು ವರ್ಷಗಳ ನಂತರ ಸಿಗರೇಟ್ ಚಟದ ಬಗ್ಗೆ ಮಾತಾಡಿದ್ದು, ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

 

ಶಾರುಖ್ ಟ್ವಿಟ್ಟರ್‌ನಲ್ಲಿ ಆಸ್ಕ್ ಎಸ್‌ಆರ್‌ಕೆ ಸೆಷನ್ ನಡೆಸುತ್ತಿದ್ದು, ಈ ಸೆಷನ್​ನಲ್ಲಿ ಎಂದಿನಂತೆ ಅಭಿಮಾನಿಗಳ ಪ್ರಶ್ನೆಗೆ ಶಾರುಖ್ ಉತ್ತರ ನೀಡಿದ್ದಾರೆ. ಅಭಿಮಾನಿಯೊಬ್ಬರು ಶಾರುಖ್‌ಗೆ ನೀವು ಸಿಗರೇಟ್ ಸೇದುವುದನ್ನು ನಿಲ್ಲಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ರು. ಈ ಪ್ರಶ್ನೆಗೆ ತಕ್ಷಣ ಉತ್ತರಿಸಿದ ಶಾರುಖ್, ಹೌದು ನಾನು ಸುಳ್ಳು ಹೇಳಿದ್ದೇನೆ, ಕ್ಯಾನ್ಸರ್ ಕಡ್ಡಿಯ ಹೊಗೆ ನನ್ನನ್ನು ಸುತ್ತುವರಿದಿದೆ ಎಂದಿದ್ದಾರೆ. ಶಾರುಖ್​ ಅವರ ಉತ್ತರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಶಾರುಖ್​ ಈ ಚಟವನ್ನು ಬಿಡಲು ಆಗಿಲ್ಲ.

 

ಕೆಲವು ವರ್ಷಗಳ ಹಿಂದೆ ಶಾರುಖ್ ನೀಡಿದ ಸಂದರ್ಶನದಲ್ಲಿ, ಸಿಗರೇಟ್ ಸೇದದೆ ಇದ್ರೆ ನನಗೆ ನಿದ್ದೆ ಬರುವುದಿಲ್ಲ. ನಾನು ದಿನಕ್ಕೆ ಸುಮಾರು 100 ಸಿಗರೇಟ್ ಸೇದುತ್ತೇನೆ. ಎಷ್ಟೋ ಬಾರಿ ನಾನು ಊಟ ಮಾಡೋದನ್ನು ಮರೆತುಬಿಡುತ್ತೇನೆ. ನಾನು ದಿನಕ್ಕೆ 30 ಕಪ್ ಬ್ಲ್ಯಾಕ್​ ಕಾಫಿ ಕುಡಿಯುತ್ತೇನೆ. ಮುಖ್ಯವಾಗಿ ಸಿಕ್ಸ್​ ಪ್ಯಾಕ್ಸ್​ಗಳನ್ನು ಹೊಂದಿರುವ ನಾನು, ನನ್ನ ಬಗ್ಗೆಯೇ ಕಡಿಮೆ ಕಾಳಜಿ ವಹಿಸುತ್ತೇನೆ ಎಂದು ಶಾರುಖ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಇದನ್ನೂ ಓದಿ : ಕೋಟಿ ಕೋಟಿ ಸಂಬಳ ಪಡೆಯುವ ಸ್ಟಾರ್ ನಟ ನಟಿಯರ ಬಾಡಿಗಾರ್ಡ್ ಗಳು ಯಾರು ಗೊತ್ತಾ 

Leave A Reply

Your email address will not be published.