Kazan Khan Death: ಸ್ಯಾಂಡಲ್ ವುಡ್ ನಟ ಕಝಾನ್ ಖಾನ್ ಹೃದಯಾಘಾತದಿಂದ ಸಾವು!

Kazan Khan Death: ಸ್ಯಾಂಡಲ್ ವುಡ್ ಖ್ಯಾತ ನಟ ಕಝಾನ್​ ಖಾನ್​ (Kazan Khan) ಅವರು ತೀವ್ರ ಹೃದಯಾಘಾತದ ಹಿನ್ನೆಲೆ ಸೋಮವಾರ (ಜೂನ್​ 12) ಸಾವನ್ನಪ್ಪಿದ್ದಾರೆ. ನಟನ ಸಾವಿನ ಸುದ್ಧಿ (Kazan Khan Death) ತಿಳಿದ ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

ಕಝಾನ್​ ಖಾನ್​ ಅವರು 1992ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಇವರು ಕನ್ನಡದ ‘ಹಬ್ಬ’, ‘ನಾಗದೇವತೆ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಚ್ಚು ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಝಾನ್ ಅವರ ನಟನೆಗೆ ಪ್ರೇಕ್ಷಕರು ಮನಸೋತಿದ್ದರು. ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಲನ್​ ಪಾತ್ರದಿಂದಲೇ ಕಝಾನ್​ ಖಾನ್​ ಅವರು ಫೇಮಸ್​ ಆಗಿದ್ದರು.

ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಅವರು ಹೆಚ್ಚಾಗಿ ನಟಿಸಿದ್ದರು. ‘ಗಂಧರ್ವಂ’, ‘ಸಿಐಡಿ ಮೂಸಾ’, ‘ದಿ ಕಿಂಗ್​’, ‘ಡ್ರೀಮ್ಸ್​’, ‘ಸೇತುಪತಿ ಐಪಿಎಸ್​’, ‘ವಾನತೈಪೋಲ’, ‘ಮೇಟ್ಟುಕುಡಿ’, ‘ವಲ್ಲರಸು’ ಸೇರಿದಂತೆ 50ಕ್ಕೂ ಅಧಿಕ ಸಿನಿಮಾಗಳಲ್ಲಿ ಕಝಾನ್​ ಖಾನ್​ ನಟಿಸಿದ್ದಾರೆ.

ಇದನ್ನೂ ಓದಿ : ಉಡುಪಿಯಲ್ಲಿ ಹೆಚ್ಚಲಿದೆ ಸರ್ಕಾರಿ ಬಸ್!ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಯಿಂದ ಆತಂಕದಲ್ಲಿ ಪ್ರೈವೇಟ್ ಬಸ್ ವ್ಯವಸ್ಥೆ !

Leave A Reply

Your email address will not be published.