Ramalinga Reddy: ಉಚಿತ ಬಸ್ ಯೋಜನೆಯನ್ನು ಮುಂದಿನ 10 ವರ್ಷದವರೆಗೆ ಕೊಡ್ತೇವೆ – ಸಾರಿಗೆ ಸಚಿವರ ಬಿಗ್ ಹೇಳಿಕೆ

Karnataka latest news Congress guarantee Shakti scheme Minister Ramalinga Reddy reaction about free bus ticket for women

Ramalinga Reddy: ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶುರುವಾಗಿದೆ. ಇಂದು ಸಿಎಂ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಮಧ್ಯೆ ಇದೀಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿಕೆ ನೀಡಿದ್ದು, ಉಚಿತ ಬಸ್ ಯೋಜನೆಯನ್ನು ಮುಂದಿನ 10 ವರ್ಷದವರೆಗೆ ಕೊಡ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

 

ವಿಧಾನಸೌಧದಲ್ಲಿ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಈ ಯೋಜನೆ 5 ವರ್ಷ ಇರಲಿದೆ. ಮತ್ತೆ ಚುನಾವಣೆ ಆಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಆಮೇಲೆ ಕೂಡ ಉಚಿತ ಬಸ್ ಪ್ರಯಾಣ ಕೊಡ್ತೀವಿ. 10 ವರ್ಷವೂ ಉಚಿತ ಕೊಡ್ತೀವಿ ಎಂದು ಹೇಳಿದರು.

ಡ್ರೈವರ್ ಬಸ್ ಸ್ಟಾಪ್ ಇರುವಲ್ಲಿ ಬಸ್ ಕಡ್ಡಾಯವಾಗಿ ನಿಲ್ಲಿಸಬೇಕು. ಮ‌ಹಿಳೆಯರಿಗೆ 3 ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ನಿಮಗೆ ಸಿಗಲಿದೆ. ಅಲ್ಲಿವರೆಗೂ ಒಂದು ಗುರುತಿನ ಚೀಟಿ ಹಿಡಿದು ಉಚಿತ ಬಸ್ ಪ್ರಯಾಣ ಮಾಡಬಹುದು. ಸ್ಮಾರ್ಟ್ ಕಾರ್ಡ್ ಕೂಡಾ ಉಚಿತವಾಗಿಯೇ ಕೊಡಲಿದ್ದೇವೆ ಎಂದು ಹೇಳಿದರು.

Free Bus Ticket: ಇವರೇ ನೋಡಿ, ಉಚಿತ ಪ್ರಯಾಣದ ಮೊದಲ ಟಿಕೆಟ್ ಪಡೆದ ಅದೃಷ್ಟಶಾಲಿ ಮಹಿಳೆ !

 

Leave A Reply

Your email address will not be published.