New car for Selling fish: ಅಪ್ಪನಿಗೆ ಮೀನು ಮಾಡಲು ಬ್ರ್ಯಾಂಡ್ ನ್ಯೂ ಐಷಾರಾಮಿ ಕಾರು ಕೊಡಿಸಿದ ಮಗ: ಆ ಕಾರಿನ ಬೆಲೆ ಎಷ್ಟು ಗೊತ್ತಾ ?!
Maruti Xl6:ಸಾಮಾನ್ಯವಾಗಿ ಮೀನು ಮಾಡಲು ಅಥವಾ ಗೊಬ್ಬರ ಸಾಗಿಸಲು ಹಳೆಯ ಬಳಸಿ, ಯಾವುದಕ್ಕೂ ಉಪಯೋಗವಿಲ್ಲ ಎನ್ನುವಂತಾದ ವಾಹನಗಳನ್ನು ಬಳಸುವುದು ರೂಢಿ. ಆದ್ರೆ ಇಲ್ಲೊಬ್ಬ ಸುಪುತ್ರ ತನ್ನ ಅಪ್ಪನಿಗೆ ನೀನು ಮಾರಾಟ ಮಾಡಲು ಹೊಚ್ಚ ಹೊಸ ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದಾನೆ. ದೊಡ್ಡ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಗ ತನ್ನ ತಂದೆಗೆ ಮೀನು ಮಾರಾಟ ಮಾಡಲು ಉಡುಗೊರೆಯಾಗಿ ಪ್ರೀಮಿಯಂ ಮಾರುತಿ ಎಕ್ಸ್ ಎಲ್6 (Maruti Xl6) ಕಾರನ್ನು ನೀಡಿದ್ದಾರೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಪ್ಪನ ಮೇಲಿನ ಮಗನ ಪ್ರೀತಿಗೆ.ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತಮಿಳುನಾಡಿನ ಶಿವಾನಂದಂ-ಕಾಳಿಯಮ್ಮಳ್ ದಂಪತಿಗಳು ರಾಮನಾಥಪುರಂ ಜಿಲ್ಲೆಯ ಅಚಂತನ್ ವ್ಯಾಲ್ ಪ್ರದೇಶದವರು. ಇವರು ತಲೆ ತಲಾಂತರದಿಂದ ಮೀನು ಮಾರಾಟ ಮಾಡುವ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಒಬ್ಬ ಮಗ ಸುರೇಶ್ ಕಣ್ಣನ್ ಎಂಜಿನಿಯರಿಂಗ್ ಓದಿದ್ದು, ಖಾಸಗಿ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಬಡ ಮೀನುಗಾರಿಕೆಯ ಕುಟುಂಬದಲ್ಲಿ ಜನಿಸಿದ ಸುರೇಶ್ ಕಣ್ಣನ್ ಈಗ ವಿದ್ಯಾಬ್ಯಾಸ ಮುಗಿಸಿ ತನ್ನ ಕಠಿಣ ಪ್ರಯತ್ನದಿಂದ ಉತ್ತಮ ಉದ್ಯೋಗವನ್ನು ಪಡೆದುಕೊಂಡಿದ್ದು, ಇದೀಗ ಆತನಿಗೆ ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳ ಸಿಗುತ್ತಿದೆ.
ಸುರೇಶ್ ಹಾಗೆ ಒಳ್ಳೆಯ ನೌಕರಿ ಮಾಡಿಕೊಂಡು ಇಬ್ಬರೂ ತಂಗಿಯಂದಿರ ಮದುವೆ ಮಾಡಿ ಮನೆಯಲ್ಲಿ ಅನುಕೂಲ ಮಾಡಿಕೊಟ್ಟ ನಂತರ ತನ್ನ ತಂದೆಗೆ ಇನ್ನು ಮುಂದೆ ಮೀನು ವ್ಯಾಪಾರ ಮಾಡುವುದು ಬೇಡ, ನೀವು ಮನೆಯಲ್ಲೇ ಆರಾಮಾಗಿ ಇರಿ ಎಂದಿದ್ದ. ಆದರೆ ಅದಕ್ಕೆ ಆತನ ತಂದೆ ಶಿವಾನಂದಂ ಅದಕ್ಕೆ ಕಿವಿಗೊಡದೆ ತಾನು ಬದುಕಿರುವವರೆಗೂ ದುಡಿದು ತಿನ್ನುವ ಆಶಯ ವ್ಯಕ್ತಪಡಿಸಿದ್ದರು. ಅಂತೆಯೇ ಅವರು ತಮ್ಮಕುಲಕಸುಬಾದ ಮೀನುಗಾರಿಕೆ ವ್ಯವಹಾರವನ್ನು ಮುಂದುವರೆಸಿದರು. ಮೀನು ಹಿಡಿದು, ಸುತ್ತಮುತ್ತಲ ಮೀನು ಅಂಗಡಿಗಳಿಗೆ ತೆರಳಿ ಮೀನು ಮಾರಾಟ ಮಾಡುತ್ತಿದ್ದರು.
ಇದೀಗ ತಂದೆಗೆ ಮೀನು ಮಾರಾಟ ಮಾಡುವ ಸಲುವಾಗಿ ಸುರೇಶ್ ಕಣ್ಣನ್ ರೂ.13.5 ಲಕ್ಷ ಮೌಲ್ಯದ ಹೊಚ್ಚ ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್6 ಕಾರನ್ನು ಖರೀದಿಸಿ ತಂದೆಗೆ ಉಡುಗೊರೆಯಾಗಿ ನೀಡಿದ್ದಾನೆ. ಈ ಕಾರನ್ನು ತಮ್ಮ ತಂದೆಯ ಹೆಸರಿನಲ್ಲಿ ಖರೀದಿಸಿದ್ದು, ಇದೀಗ ಸುರೇಶ್ ಕಣ್ಣನ್ ಅವರ ತಂದೆ ತಾಯಿ ತಮ್ಮ ಇಷ್ಟದಂತೆ ಅದೇ ಹೊಸ ವಾಹನದಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ.
ನಮ್ಮ ಕುಲಕಸುವನ್ನು ಮುಂದುವರಿಸಲು ಮತ್ತು ಈಗ ಮ
ನೆಯಲ್ಲಿ ಅನುಕೂಲ ಆದ ಮೇಲೆ ಈ ಹೊಸ ಕಾರಿನಲ್ಲಿ ಮೀನು ಮಾರಾಟ ಮಾಡಲು ನಾವು ತುಂಬಾ ಖುಷಿ ಮತ್ತು ಹೆಮ್ಮೆ ಪಡುತ್ತಿದ್ದೇವೆ ಎಂದಿದ್ದಾರೆ ಆತನ ಪೋಷಕರು.
ಇದನ್ನೂ ಓದಿ:ʻನಿಧಿಸಿಕ್ಕಿದೆʼ ಎಂದು ನಂಬಿಸಿ ದೋಖಾ ..!ಉಡುಪಿ ಮೂಲಕ ವ್ಯಕ್ತಿಗೆ 5 ಲಕ್ಷ ರೂ. ಪಂಗನಾಮ