Mysterious people: ಈ ಗ್ರಾಮದಲ್ಲಿ ಮನುಷ್ಯರಿಂದ ಹಿಡಿದು ಪ್ರಾಣಿಗಳ ತನಕ ಎಲ್ಲರೂ ಕುರುಡರು, ಅದಕ್ಕೆ ಇದೆ ಒಂದು ಪ್ರಬಲ ಕಾರಣ !

Interesting news Mysterious people this is the only blind village in the world from humans to animals all are blind

Share the Article

Mysterious people: ಜಗತ್ತಿನಲ್ಲಿ ಹೆಚ್ಚಿನ ಜನರು ಆರೋಗ್ಯವಂತರಾಗಿದ್ದಾರೆ. ಕೆಲವೇ ಕೆಲವು ಜನರು ಹುಟ್ಟು ಕುರುಡರು, ಕಿವುಡರು, ಅಂಗವೈಗಲ್ಯತೆ ಹೊಂದಿರುವ ಜನರಿದ್ದಾರೆ. ಅದರಲ್ಲೂ ಒಬ್ಬ ಕುರುಡ ವ್ಯಕ್ತಿಯ ಪಾಡು ತುಂಬಾ ಕಷ್ಟ. ಆತನ ಪಾಲಿಗೆ ಜಗತ್ತು ಕತ್ತಲಾಗಿರುತ್ತದೆ. ಆದರೆ, ಇಲ್ಲೊಂದು ಹಳ್ಳಿಯಲ್ಲಿ ಮನುಷ್ಯರಿಂದ ಹಿಡಿದು ಪ್ರಾಣಿಗಳ ತನಕ ಎಲ್ಲರೂ ಕುರುಡರು (Mysterious people).

ಹೌದು, ಮೆಕ್ಸಿಕೋದ (Mexico) ಟಿಲ್ಟೆಪಾಕ್ ಗ್ರಾಮದಲ್ಲಿ ಮನುಷ್ಯರಿಂದ ಹಿಡಿದು ಪ್ರಾಣಿಗಳ ತನಕ ಎಲ್ಲರೂ ಕುರುಡರು. ಅಲ್ಲಿ ಹುಟ್ಟುವ ಪ್ರತಿ ಮಗು ದೃಷ್ಟಿ ಕಳೆದುಕೊಳ್ಳುತ್ತದೆ. ಆಶ್ಚರ್ಯವೆನಿಸಿದರೂ ಇದು ಸತ್ಯ. ಆದರೆ, ಇದಕ್ಕೆ ಒಂದು ಬಲವಾದ ಕಾರಣ ಇದೆ. ಏನದು ಇಂಟೆರೆಸ್ಟಿಂಗ್ ಸಂಗತಿ? ಇಲ್ಲಿದೆ ನೋಡಿ ಮಾಹಿತಿ.

ಇಲ್ಲಿನ ಮಕ್ಕಳು ಹುಟ್ಟು ಕುರುಡರಲ್ಲ. ಹುಟ್ಟಿದ ನಂತರ ದೃಷ್ಟಿ ಕಳೆದುಕೊಳ್ಳುತ್ತಾರೆ. ಇದಕ್ಕೆ ಕಾರಣವೇನು ಗೊತ್ತಾ? ಈ ಹಳ್ಳಿಯಲ್ಲಿ ಒಂದು ಶಾಪಗ್ರಸ್ತ ಮರವಿದೆ. ಅದರ ಹೆಸರು ಲಾವಾಜುವೆಲಾ (Lava Juwela). ಈ ಮರವನ್ನು ನೋಡಿದ ಪ್ರತಿ ಮನುಷ್ಯ‌ ಹಾಗೂ ಪ್ರಾಣಿಗಳು ಕುರುಡರಾಗುತ್ತಾರೆ ಎಂಬುದು ಇಲ್ಲಿನ ಜನರ (ಹಿರಿಯರ) ನಂಬಿಕೆ.

ಆದರೆ, ವಿಜ್ಞಾನಿಗಳ ಪ್ರಕಾರ, ಈ ಬುಡಕಟ್ಟು ಜನಾಂಗದ ಕುರುಡುತನಕ್ಕೆ ಕಾರಣ ಬೇರೆಯೇ ಇದೆ. ಗ್ರಾಮದಲ್ಲಿ ಜನರು ಮಾತ್ರವಲ್ಲ, ಗಿಡ-ಮರ, ಪ್ರಾಣಿ-ಪಕ್ಷಿ, ನೊಣ, ಇತ್ಯಾದಿ ಜೀವಿಗಳು ಇರುವುದು ಸಾಮಾನ್ಯ. ಅಂತೆಯೇ ಈ ಹಳ್ಳಿಯಲ್ಲೂ ವಿಶೇಷ ಜಾತಿಯ ವಿಷಕಾರಿ ನೊಣಗಳು ಇವೆ. ಈ ವಿಷಕಾರಿ ನೊಣದ ಕಡಿತದಿಂದಲೇ ಇಲ್ಲಿನ ಜನರು ಹಾಗೂ ಪ್ರಾಣಿಗಳು ಕುರುಡರಾಗುತ್ತಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದನ್ನೂ ಓದಿ: Bank Job: ಗ್ರಾಮೀಣ ಬ್ಯಾಂಕುಗಳಲ್ಲಿ ಭರ್ಜರಿ ಉದ್ಯೋಗವಕಾಶ, 800 ಹುದ್ದೆಗಳ ಭರ್ತಿ ಕಾರ್ಯ ಶುರು!

Leave A Reply