Fertilizer Price: ರಿಯಾಯಿತಿ ದರದಲ್ಲಿ ರಸಗೊಬ್ಬರ: ದರ ನಿಗದಿ ಮಾಡಿ ಸರ್ಕಾರದ ಆದೇಶ!

Fertilizer at discount price

Share the Article

Fertilizer Price: ದೇಶದ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಆನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ರೈತಾಪಿ ವರ್ಗದ ಜನರಿಗೆ ಆರ್ಥಿಕ ನೆರವಿನ ಜೊತೆಗೆ ಕೃಷಿ ಸಂಬಂಧಿತ ಉಪಕರಣಗಳ ಪೂರೈಕೆ ಮಾಡಿ ಸಹಾಯ ಮಾಡುತ್ತಿದೆ. ಜೊತೆಗೆ ರಸಗೊಬ್ಬರ (Fertilizer) ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ (Agriculture Activity) ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದೀಗ ರೈತರಿಗೆ ಸಿಹಿಸುದ್ದಿ ಇಲ್ಲಿದೆ. ಸದ್ಯ ಸರ್ಕಾರ ರಸಗೊಬ್ಬರಕ್ಕೆ ರಿಯಾಯಿತಿ ದರ (Fertilizer Price) ನಿಗದಿ ಮಾಡಿ ಆದೇಶ ಹೊರಡಿಸಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆ ನೀಡಿದ್ದು, “ರೈತರಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ಮಾರಾಟ ಮಾಡಲು ಸರ್ಕಾರ ರಸಗೊಬ್ಬರದ ದರ ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಈ ಬಗ್ಗೆ ಎಲ್ಲಾ ರಸಗೊಬ್ಬರ ಮಾರಾಟಗಾರರಿಗೆ ಮಾಹಿತಿ ನೀಡಿ, ಸರಕಾರದ ಆದೇಶದಂತೆ ದರ ಪಡೆಯಲು ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬೇಕಾಗುವಷ್ಟು ರಸಗೊಬ್ಬರಗಳು ಇದ್ದರೂ ಕೃತಕ ಅಭಾವ ಸೃಷ್ಟಿಸಿದರೆ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿನ ಮಾಡುವುದು ಕಂಡುಬಂದರೆ, ಆ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದೇ ಆದಲ್ಲಿ ತಕ್ಷಣ ಅಂತಹ ಮಾರಾಟಗಾರ ಅಥವಾ ಅಂಗಡಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಅಪರಾಧ ಸಾಬೀತಾದರೆ ಅಂಗಡಿ ಲೈಸೆನ್ಸ್ ರದ್ದುಪಡಿಸಲಾಗುತ್ತದೆ. ನಿಗದಿತ ದರಕ್ಕಿಂತ ಹೆಚ್ಚು ಹಣ ಕೇಳಿದರೆ ರೈತರು ಕೃಷಿ ಇಲಾಖೆ ಅಧಿಕಾರಿಗಳಿಗೆ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ದೂರು ನೀಡಿ ಎಂದು ತಿಳಿಸಿದ್ದಾರೆ.

ರಸಗೊಬ್ಬರಗಳ ನಿಗದಿತ ದರ ಹೀಗಿದೆ :-

ಯೂರಿಯಾ ರಸಗೊಬ್ಬರ ಪ್ರತಿ ಚೀಲಕ್ಕೆ 266 ರೂ., ಡಿಎಪಿ ರಸಗೊಬ್ಬರ ಪ್ರತಿ ಚೀಲಕ್ಕೆ 1350 ರೂ. ಮತ್ತು ಪೊಟ್ಯಾಸಿಯಮ್ ರಸಗೊಬ್ಬರ ಪ್ರತಿ ಚೀಲಕ್ಕೆ 1700 ರೂ.ಗಳಷ್ಟು ಸರ್ಕಾರ ದರ ನಿಗದಿಪಡಿಸಿದೆ. ಈ ಬೆಲೆಯಲ್ಲಿ ರೈತರು ರಸಗೊಬ್ಬರ ಖರೀದಿಸಬೇಕು ಎನ್ನಲಾಗಿದೆ.

ಇದನ್ನೂ ಓದಿ: Old Pension Scheme: NPS ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯೇ ಜಾರಿ, ಕೊಟ್ಟ ಮಾತಿಗೆ ಕಾಂಗ್ರೆಸ್ ತಪ್ಪದು – ಸಚಿವ ಎಸ್.ಎಸ್. ಮಲ್ಲಿಕಾರ್ಜುನ!

 

Leave A Reply