Rape on Aged Woman: ಕಣ್ಣು ಕಾಣದ ತಾಯಿ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಕಾಮುಕ! ಆತ್ಮಹತ್ಯೆಗೆ ಶರಣಾದ ಮಹಿಳೆ! ಆರೋಪಿ ಅರೆಸ್ಟ್‌

Rape on aged woman accused arrested but woman commits sucide in Vijayanagara

Rape on Aged woman: ಇದೊಂದು ಇಡೀ ಮನುಕುಲವೇ ನಾಚುವಂತಹ ಸುದ್ದಿ. ಕಣ್ಣು ಕಾಣದ ತನ್ನ ತಾಯಿ ವಯಸ್ಸಿನ ವೃದ್ಧೆಯ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿರುವ(Rape on Aged woman) ಘಟನೆಯೊಂದು ನಡೆದಿದೆ. ಅಷ್ಟು ಮಾತ್ರವಲ್ಲ ಕಣ್ಣು ಕಾಣದ ಈ ವೃದ್ಧ ಮಹಿಳೆ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದು, ಇಡೀ ಗ್ರಾಮಸ್ಥರೇ ಕಣ್ಣೀರು ಹಾಕಿರುವ ಘಟನೆ ನಡೆದಿದ್ದು, ರೊಚ್ಚಿಗೆದ್ದ ಜನರು ನಮಗೆ ನ್ಯಾಯ ಬೇಕು ಎಂದು ಪೊಲೀಸ್‌ ಠಾಣೆ ಮುಂದೆ ಜಮಾವಣೆಗೊಂಡಿರುವಂತಹ ಘಟನೆ ನಡೆದಿದೆ. ಅಷ್ಟು ಮಾತ್ರವಲ್ಲದೇ ಕಾಮುಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರ ಜೊತೆ ವಾಗ್ವಾದ ಮಾಡಿದ್ದಾರೆ. ಈ ಹೇಯ ಘಟನೆ ನಡೆದಿರುವುದು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ.

 

58 ವರ್ಷದ ಕಣ್ಣು ಕಾಣದ ಮಹಿಳೆಯ ಮೇಲೆ ಮೇ.30ರಂದು ಅತ್ಯಾಚಾರವೆಸಗಿದ ವ್ಯಕ್ತಿ ಆರೋಪಿ ಲೋಕೇಶ ನಾಯ್ಕ್‌. ಈತನ ಈ ಕೆಲಸದಿಂದ ತೀವ್ರ ಅಸ್ವಸ್ಥಗೊಂಡಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ನಿನ್ನೆ ಶುಕ್ರವಾರ ಊರಿಗೆ ಮರಳಿದಂತಹ ಈ ಮಹಿಳೆ ನನಗೆ ಹೀಗಾಯ್ತಲ್ಲ ಎಂದು ನೊಂದುಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈಗ ಆರೋಪಿ ಸ್ಥಾನದಲ್ಲಿರುವ ಲೋಕೇಶ ನಾಯ್ಕ್‌. ಈತ ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಾಪುರ ತಾಂಡದ ವ್ಯಕ್ತಿ. ಈತನಿಗೆ ಮದುವೆಯಾಗಿದ್ದು ಮಕ್ಕಳು ಕೂಡಾ ಇದ್ದಾರೆ. ಈಗ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಮನೆಯವರು ಘಟನಾ ದಿನದಂದು ಊರಿನಲ್ಲಿ ನಡೆಯುತ್ತಿದ್ದ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಹೀಗಾಗಿ ವೃದ್ಧೆ ಮನೆಯಲ್ಲಿ ಒಂಟಿಯಾಗಿದ್ದರು. ಈ ಸಂದರ್ಭದಲ್ಲಿ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಕಣ್ಣು ಕಾಣದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ತನ್ನ ಕರಾಳ ಮುಖ ತೋರಿಸಿದ್ದಾನೆ.

ವೃದ್ಧೆಯ ಸಾವಿನ ಸುದ್ದಿ ತಿಳಿದ ಊರಿನ ಜನರು ಪೊಲೀಸ್‌ ಠಾಣೆ ಮುಂದೆ ಜಮಾಯಿಸಿದ್ದು, ಆರೋಪಿಗೆ ತಕ್ಕ ಶಿಕ್ಷೆಯಾಗಬೇಕೆಂದು ಪಟ್ಟು ಹಿಡಿದಿದ್ದಾರೆ. ಹಿರಿಯ ಅಧಿಕಾರಿಗಳು ಘಟನಾ ಸಂದರ್ಭದಲ್ಲಿ ಸ್ಥಳಕ್ಕೆ ಬಾರದೇ ಇರುವುದರಿಂದ ಅದಕ್ಕೂ ಜನ ಆಕ್ರೋಶಗೊಂಡಿದ್ದು, ನಂತರ ತಡವಾಗಿ ಬಂದ ಹಗರಿಬೊಮ್ಮನಹಳ್ಳಿ ತಹಶೀಲ್ದಾರ್‌ ಅವರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ ತಹಶೀಲ್ದಾರ್‌ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿ ಜನರನ್ನು ಸಮಾಧಾನ ಪಡಿಸಿದರು. ಕೊನೆಗೂ ಕಣ್ಣು ಕಾಣದ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿದ ಕಾಮುಕ ಲೋಕೇಶ ನಾಯ್ಕ್‌ ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ,

ಇದನ್ನೂ ಓದಿ:  ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು ನಿಗಮ ಮಂಡಳಿಯ ಸಿಬ್ಬಂದಿ ಐಡಿ ಕಾರ್ಡ್ ಹಾಕಿಕೊಳ್ಳುವುದು ಕಡ್ಡಾಯ, ಸರ್ಕಾರದಿಂದ ಆದೇಶ

Leave A Reply

Your email address will not be published.