Tulasi pooja: ನೆನಪಿರಲಿ, ತುಳಸಿಗೆ ಈ ರೀತಿ ಕ್ರಮ ಅನುಸರಿಸಿ ನೀರು ಹಾಕಿದರೆ ಲಕ್ಷ್ಮೀ ಸದಾ ನಿಮ್ಮ ಜೇಬಿನಲ್ಲಿರುತ್ತದೆ !
Pooja rules Do these things before giving water to Tulsi
Tulasi Pooja: ಗಂಗಾ ಮಾತೆಗೆ ಸಮಾನವಾದ ಪವಿತ್ರತೆಯನ್ನು ಹೊಂದಿರುವ ತುಳಸಿ ಗಿಡವನ್ನು ಭಾರತೀಯ ಮನೆಗಳಲ್ಲಿ ಹೆಚ್ಚಾಗಿ ಕಾಣಬಹುದು. ಅದಲ್ಲದೆ ತುಳಸಿ ಸಾಕ್ಷಾತ್ ಲಕ್ಷ್ಮೀ ಸ್ವರೂಪ ಆಗಿದ್ದಾಳೆ. ತುಳಸಿ ಕಟ್ಟೆಯಿರುವ ಸ್ಥಳ ಪೂಜನೀಯ ಸ್ಥಳವೇ ಸರಿ.
ಹಿಂದೂ ಸಂಪ್ರದಾಯ ಪ್ರಕಾರ ಪ್ರತಿನಿತ್ಯ ನಾವು ತುಳಸಿ ಪೂಜೆಯನ್ನು (Tulasi Pooja) ಮಾಡುತ್ತೇವೆ ಮತ್ತು ತುಳಸಿಗೆ ನೀರನ್ನು ನೀಡಿ ದೀಪವನ್ನು ಬೆಳಗುತ್ತೇವೆ. ಆದರೆ, ತುಳಸಿಗೆ ನೀರನ್ನು ನೀಡುವಾಗ ನಾವು ಕೆಲವೊಂದು ನಿಯಮಗಳನ್ನು ಅನುಸರಿಸುವುದು ತುಂಬಾನೇ ಮುಖ್ಯ.
ತುಳಸಿ ಪೂಜೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನಾವು ನಮ್ಮ ಶಾಸ್ತ್ರದಲ್ಲಿ ನೋಡಬಹುದಾಗಿದೆ. ಈ ನಿಯಮಗಳನ್ನು ಪಾಲಿಸುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆಯಿದೆ. ಈ ನಿಯಮಗಳೊಂದಿಗೆ ತುಳಸಿ ದೇವಿಯನ್ನು ಪೂಜಿಸುವುದರಿಂದ ಆಕೆಯು ಬಹುಬೇಗ ಸಂತುಷ್ಟಳಾಗುತ್ತಾಳೆ. ಮತ್ತು ತನ್ನ ಭಕ್ತರ ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹರಿಸುತ್ತಾಳೆ.
ತುಳಸಿಗೆ ನೀರನ್ನು ನೀಡುವ ಬಗ್ಗೆ ನೀವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ವಾರದ ಯಾವುದೇ ದಿನ ಬೇಕಾದರೂ ನೀವು ತುಳಸಿಗೆ ನೀರನ್ನು ನೀಡಬಹುದು ಆದರೆ, ಭಾನುವಾರದಂದು ತಾಯಿ ತುಳಸಿಗೆ ನೀರನ್ನು ಅರ್ಪಿಸಬಾರದು. ಇದರಿಂದ ನೀವು ನಷ್ಟವನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ಸಮಸ್ಯೆಗಳನ್ನು ಕಡಿಮೆ ಮಾಡುವ ಬದಲು ಹೆಚ್ಚಾಗುವಂತೆ ಮಾಡುತ್ತದೆ.
ಇನ್ನು ತುಳಸಿ ಗಿಡಕ್ಕೆ ನೀರನ್ನು ನೀಡುವುದಕ್ಕೆ ಅದರದ್ದೇ ಆದ ನಿಯಮಗಳಿವೆ. ತುಳಸಿಗೆ ನೀರನ್ನು ನೀಡುವಾಗ ನೀವು ಈ ತುಳಸಿ ಮಂತ್ರವನ್ನು ಪಠಿಸುವುದು ಹೆಚ್ಚು ಫಲ ನೀಡುತ್ತದೆ. ತುಳಸಿಗೆ ನೀರನ್ನು ಅರ್ಪಿಸುವಾಗ ”ಓಂ ಸುಭದ್ರಾಯ ನಮಃ” ಮಂತ್ರವನ್ನು ಪಠಿಸಿ. ತುಳಸಿಗೆ ಅತಿಯಾಗಿಯೂ ನೀರು ನೀಡಬಾರದು ಮತ್ತು ಅತ್ಯಂತ ಕಡಿಮೆಯೂ ನೀರನ್ನು ನೀಡಬಾರದು. ತುಳಸಿಗೆ ಅತಿಯಾಗಿ ನೀರು ನೀಡಿದರೆ ಗಿಡ ಸಾಯಬಹುದು ಮತ್ತು ನೀರು ಕಡಿಮೆ ನೀಡಿದಾಗ ಅದು ಒಣಗಿ ಹೋಗಬಹುದು.
ಮುಖ್ಯವಾಗಿ ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ತುಳಸಿಗೆ ನೀರನ್ನು ಅರ್ಪಿಸಬೇಕು, ಆದರೆ ಅದಕ್ಕೂ ಮೊದಲು ಏನನ್ನೂ ತಿನ್ನಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ತಾಯಿ ತುಳಸಿ ಇದರಿಂದ ಸಂತಸಗೊಂಡು ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. ಸ್ನಾನ ಮಾಡದೆ ತುಳಸಿಗೆ ನೀರನ್ನು ನೀಡುವುದು ಮಾತ್ರವಲ್ಲ, ಆಕೆಯನ್ನು ಸ್ಪರ್ಶಿಸಲೂಬಾರದು.
ತುಳಸಿ ದೇವಿಗೆ ನೀವು ನೀರನ್ನು ಅರ್ಪಿಸುವಾಗ ಹೊಲಿಯದ ಬಟ್ಟೆಗಳನ್ನು ಧರಿಸಬೇಕು ಎಂದು ಹೇಳಲಾಗುತ್ತದೆ. ಇದರೊಂದಿಗೆ ತುಳಸಿಗೆ ನೀರನ್ನು ಅರ್ಪಿಸುವಾಗ 11 ಬಾರಿ ಅಥವಾ 21 ಬಾರಿ ”ಓಂ ಸುಭದ್ರಾಯ ನಮಃ” ಎನ್ನುವ ಮಂತ್ರವನ್ನು ಜಪಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಮತ್ತು ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ.
ಶಾಸ್ತ್ರಗಳ ಪ್ರಕಾರ ತುಳಸಿಗೆ ಸೂರ್ಯೋದಯದ ನಂತರವೇ ನೀರು ಅರ್ಪಿಸಬೇಕೇ ಹೊರತು ಸೂರ್ಯಾಸ್ತದ ನಂತರ ತುಳಸಿಗೆ ನೀರನ್ನು ನೀಡಬಾರದು ಎಂದು ಹೇಳಲಾಗಿದೆ. ಸೂರ್ಯಾಸ್ತದ ನಂತರ ತುಳಸಿಗೆ ನೀರನ್ನು ಅರ್ಪಿಸುವುದು ಮಾತ್ರವಲ್ಲ, ಈ ಸಮಯದಲ್ಲಿ ತುಳಸಿಯನ್ನು ನೀವು ಸ್ಪರ್ಶಿಸಲೂಬಾರದು.
ಹಿಂದೂ ಸಂಪ್ರದಾಯ ಪ್ರಕಾರ ಮುಸ್ಸಂಜೆ ವೇಳೆ ಅಥವಾ ಸೂರ್ಯಾಸ್ತದ ಸಮಯದಲ್ಲಿ ನೀವು ತುಳಸಿಯ ಮುಂದೆ ತಪ್ಪದೇ ದೀಪವನ್ನು ಹಚ್ಚಿಡಬೇಕು ಇದರಿಂದ ನಿಮ್ಮ ಜೀವನ ಸುಖಮಯ ಆಗಲಿದೆ.
ಇದನ್ನೂ ಓದಿ: Police Jobs: ಸುವರ್ಣ ಅವಕಾಶ! RPF ಕಾನ್ಸ್ಟೇಬಲ್ ಆಗಿ 9000 ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ!