Nithyananda: ರಂಜಿತಾ ಮತ್ತು ನಿತ್ಯಾನಂದನ ನಡುವೆ ಇದ್ದ ಮಳ್ಳಿ ಪ್ರೇಮಿ ಭಕ್ತೆ ಯಾರು? ವಿಡಿಯೋ ಲೀಕ್ ಆಗುತ್ತಿದ್ದಂತೆ ಆಕೆ ಕಾಣೆಯಾಗಿದ್ದೇಕೆ?

Ranjitha and Nithyananda matter goes viral

Share the Article

Nithyananda: ನಿತ್ಯಾನಂದ (Nithyananda) ಈಗಾಗಲೇ ರಂಜಿತಾ ವಿಷಯದಲ್ಲಿ ಸುದ್ದಿಯಾಗಿದ್ದು, ಇದೀಗ ರಂಜಿತಾ ಮ್ಯಾಟರ್ ಮತ್ತೆ ಓಪನ್ ಆಗಿದೆ. ನಿತ್ಯಾನಂದ ಬಿಡದಿಯ ಆಶ್ರಮ ಬಿಟ್ಟು ಓಡಿ ಹೋಗಿ ತನ್ನದೇ ‘ಕೈಲಾಸ’ ಅನ್ನೋ ದೇಶವನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿಗೆ ಹೋದ ಬಳಿಕವೂ ಸದ್ಯ ರಂಜಿತಾ ಕೂಡ ನಿತ್ಯಾನಂದನ ಜೊತೆ ‘ಕೈಲಾಸ’ದಲ್ಲಿಯೇ ಇದ್ದಾರೆ ಎನ್ನಲಾಗಿದೆ.

ಹೌದು, ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ರಂಜಿತಾ ತಂದೆ ಅಶೋಕ್ ಕುಮಾರ್ ಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಹಳೇ ಮ್ಯಾಟರ್‌ಗಳೆಲ್ಲ ಮತ್ತೆ ಜೀವ ತುಂಬಿದೆ.

ಅದಲ್ಲದೆ ರಂಜಿತಾ ಮತ್ತು ನಿತ್ಯಾನಂದನ ಖಾಸಗಿ ವಿಡಿಯೋ ಹೊರಬೀಳುತ್ತಿದ್ದಂತೆ ಇನ್ನೊಂದು ಸುದ್ದಿ ಕೂಡ ಹರಿದಾಡಿತ್ತು. ರಂಜಿತಾಗೂ ಮುನ್ನ ನಿತ್ಯಾನಂದನಿಗೆ ಮತ್ತೊಬ್ಬ ಭಕ್ತೆ ಆತ್ಮೀಯರಾಗಿದ್ದಳು. ರಂಜಿತಾಳಿಂದಲೇ ಆಕೆ ದೂರ ಆದಳು ಅನ್ನೋ ಸುದ್ದಿ ಆಗಿದ್ದು, ಅಷ್ಟಕ್ಕೂ ಇವರಿಬ್ಬರ ನಡುವೆ ಬಂದ ಆ ಮಳ್ಳಿ ಭಕ್ತೆ ಯಾರು ನೋಡೋಣ.

ಹೌದು, ನಟಿ ರಂಜಿತಾ, ಸ್ವಾಮಿ ನಿತ್ಯಾನಂದನ ಭೇಟಿಯಾಗುವುದಕ್ಕೂ ಮುನ್ನ ಮತ್ತೊಬ್ಬ ಭಕ್ತೆ ನಿತ್ಯಾನಂದನ ತೆಕ್ಕೆಯಲ್ಲಿ ಇದ್ದಳು. ಅಲ್ಲದೆ ನಿತ್ಯಾನಂದನ ಎಲ್ಲಾ ವ್ಯವಹಾರವನ್ನೂ ನೋಡಿಕೊಳ್ಳುತ್ತಿದ್ದಳು. ಆಕೆಯ ಹೆಸರೇ ನಿತ್ಯಾ ಗೋಪಿಕಾ. ನಿತ್ಯಾನಂದ ಹಾಗೂ ರಂಜಿತಾ ವಿಡಿಯೋ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ನಿತ್ಯಾ ಗೋಪಿಕಾ ಅನ್ನೋ ಭಕ್ತೆ ಮಾಯವಾಗಿದ್ದಾಳೆ ಅಷ್ಟೇ.

ಆದರೆ ಮಾಧ್ಯಮಗಳು ಮಾತ್ರ ನಿತ್ಯಾ ಗೋಪಿಕಾ ಹಿನ್ನೆಲೆಯನ್ನು ಕೆದಕುವುದಕ್ಕೆ ಶುರು ಮಾಡಿದ್ದವು. ಆ ಸಂದರ್ಭದಲ್ಲಿ ಕೆಲವು ಮಾಧ್ಯಮಗಳು ನಿತ್ಯಾನಂದ ಹಾಗೂ ನಿತ್ಯಾ ಗೋಪಿಕಾ ನಡುವೆ ಆತ್ಮೀಯತೆ ಇತ್ತು. ಇಬ್ಬರಲ್ಲೂ ಅನ್ಯೋನ್ಯತೆ ಇತ್ತು ಎಂದು ವರದಿ ಮಾಡಿದ್ದವು.

ಸ್ವಾಮಿ ನಿತ್ಯಾನಂದ ಜನಪ್ರಿಯನಾಗಿದ್ದ ಸಂದರ್ಭದಲ್ಲಿ ದೇಶದ ಮೂಲೆ ಮೂಲೆ ಸುತ್ತುತ್ತಿದ್ದ. ವಿದೇಶಗಳಿಗೆ ಹೋಗಿ ಪ್ರವಚನ ನೀಡುತ್ತಿದ್ದ. ಈ ವೇಳೆ ನಿತ್ಯಾ ಗೋಪಿಕಾ ಅನ್ನೋ ಭಕ್ತೆ ಸದಾ ನಿತ್ಯಾನಂದನ ಜೊತೆಯೇ ಇರುತ್ತಿದ್ದಳು ಎನ್ನಲಾಗಿದೆ.

ಅಸಲಿಗೆ ನಿತ್ಯಾ ಗೋಪಿಕಾ ಎನ್‌ಆರ್‌ಐ ಆಗಿದ್ದಳು. ಅಮೆರಿಕಾದಲ್ಲಿ ನೆಲೆಸಿದ್ದಳು ಎನ್ನಲಾಗಿದೆ. ನಿತ್ಯಾನಂದ ಪ್ರವಚನದಿಂದ ಆಕರ್ಷಿತಳಾಗಿ ಈತನ ಭಕ್ತೆಯಾಗಿದ್ದಳು. ಭಾರತದಲ್ಲಿ ಬಿ.ಟೆಕ್ ಪಡೆದ ನಂತರ ಅಮೆರಿಕಾದ ಡಾಕ್ಟರೇಟ್ ಪಡೆದಿದ್ದಳು ಎಂದು ವರದಿಯಾಗಿದೆ. ಆದರೆ ಇಷ್ಟೊಂದು ಆತ್ಮೀಯಳಾಗಿದ್ದ ಗೋಪಿಕಾ ನಿತ್ಯಾನಂದ ಹಾಗೂ ರಂಜಿತಾ ವಿಡಿಯೋ ಲೀಕ್ ಆಗುತ್ತಿದ್ದಂತೆ ಕಾಣಿಯಾಗಿದ್ದಳು.

ನಿತ್ಯಾನಂದನ ಜೊತೆ ನಿತ್ಯಾ ಗೋಪಿಕಾ ಆತ್ಮೀಯಳಾಗಿದ್ದಳು. ಆದರೆ, ನಿತ್ಯಾನಂದನ ಗಮನವೆಲ್ಲವೂ ರಂಜಿತಾ ಮೇಲೆ ಇತ್ತು. ಅದ್ಯಾವಾಗ ರಂಜಿತಾ ಕೂಡ ನಿತ್ಯಾನಂದನ ಮಾತಿಗೆ ಮರುಳಾದಳೋ ಅಲ್ಲಿಂದ ನಿತ್ಯಾನಂದ ಹಾಗೂ ರಂಜಿತಾ ಇಬ್ಬರೂ ಆತ್ಮೀಯರಾದರು. ಇದನ್ನು ನಿತ್ಯಾ ಗೋಪಿಕಾಗೆ ಸಹಿಸಲು ಆಗಲಿಲ್ಲ. ಹೀಗಾಗಿ ವಿಡಿಯೋ ಲೀಕ್ ಮಾಡುವ ಪ್ಲ್ಯಾನ್ ಮಾಡಿದ್ದಳು ಎಂಬ ಸುದ್ದಿಯಾಗಿತ್ತು.

ಆದರೆ, ಇದೂವರೆಗೂ ನಿತ್ಯಾ ಗೋಪಿಕಾ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಸದ್ಯಕ್ಕೆ ಆಕೆ ಮೂಲ, ಎಲ್ಲಿದ್ದಾಳೆ ಅನ್ನೋದು ತಿಳಿದಿಲ್ಲ. ಒಟ್ಟಿನಲ್ಲಿ ನಿತ್ಯಾನಂದನ ಪ್ರೀತಿಯ ಬಲೆಗೆ ಈಕೆಯು ಬಿದ್ದಿದ್ದಾಳಾ ಅಥವಾ ಇದೊಂದು ಹೊಸ ಕಸರತ್ತಿನ ಚಮಕ್ ಆಗಿರಬಹುದೇ ಎಂದು ತಿಳಿದುಬರಬೇಕಿದೆ.

 

ಇದನ್ನು ಓದಿ: Watch video: ಆಟೋ ಚಾಲಕನಿಗೆ ಥಳಿಸಿ, ದರ್ಪತೋರಿದ ಪೇದೆ ಸಸ್ಪೆಂಡ್ : ಕಾರಣವೇನು ಗೊತ್ತಾ? 

Leave A Reply