Laughing Snake video: ಮುಟ್ಟಿದೊಡನೆ ಬಿದ್ದು ಬಿದ್ದು ನಗುತ್ತೆ ಈ ಹಾವು ; ವಿಡಿಯೋ ನೋಡಿ!

Laughing Snake video

Share the Article

Laughing Snake video : ಸಾಮಾನ್ಯವಾಗಿ ಹಾವುಗಳನ್ನು ನೋಡಿದ್ರೆ ಎಲ್ಲರಿಗೂ ಭಯವಾಗುತ್ತದೆ. ಯಾಕಂದ್ರೆ ಅವುಗಳು ಬುಸುಗುಡುತ್ತದೆ, ಕಚ್ಚುತ್ತದೆ. ಹಾವು (Snake) ಕಚ್ಚಿದರೆ ಏನಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಒಂದೋ ಸಾವನ್ನಪ್ಪುತ್ತಾರೆ ಇಲ್ಲವೇ ಆಸ್ಪತ್ರೆ ಸೇರುತ್ತಾರೆ. ಆದರೆ, ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದರೆ ನಿಮಗೆ ಅಚ್ಚರಿಯಾಗುವುದು ಖಂಡಿತ!. ಯಾಕಂದ್ರೆ ಈ ಹಾವು ಮುಟ್ಟಿದೊಡನೆ ಬಿದ್ದು ಬಿದ್ದು ನಗುತ್ತದೆ (Laughing Snake video). ಅಬ್ಬಾ!! ವಿಚಿತ್ರವಾಗಿದೆ ಅಲ್ವಾ??. ಹಾಗಿದ್ರೆ ಇಲ್ಲಿದೆ ನೋಡಿ ಹಾವಿನ ಬಗ್ಗೆ ಸಂಕ್ಷಿಪ್ತ ವಿವರ.

ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಲೇ ಇರುತ್ತವೆ. ಕೆಲವು ವಿಚಾರಗಳು ಆಶ್ಚರ್ಯ ಉಂಟು ಮಾಡಿದರೆ ಕೆಲವು ನಗು, ಕೋಪ ತರಿಸುತ್ತದೆ. ಇದೀಗ ವೈರಲ್ ಆಗಿರುವ ಹಾವಿನ ವಿಡಿಯೋ ನಿಮಗೆ ಅಚ್ಚರಿಯ ಜೊತೆಗೆ ನಗು ತರಿಸುತ್ತದೆ. ಹೌದು, ನೀವು ಈ ವಿಡಿಯೋದಲ್ಲಿ ನೆಲದ ಮೇಲೆ ತನ್ನ ಪಾಡಿಗೆ ಹರಿದಾಡುತ್ತಿರುವ ಹಾವನ್ನು ನೋಡಬಹುದು. ಈ ಹಾವನ್ನು ಮುಟ್ಟಿದೊಡನೆ ಅದು ಕಚಕುಳಿ ಇಟ್ಟಂತೆ ಪ್ರತಿಕ್ರಿಯಿಸುತ್ತದೆ. ನಂತರ ಈ ಹಾವು ಬಾಯಿ ತೆರೆದು ಜೋರಾಗಿ ನಗುವಂತೆ ಕಾಣಿಸುತ್ತದೆ. ಸಣ್ಣದಾಗಿದ್ದು ನೋಡಲು ಸುಂದರವಾಗಿದೆ.

ಈ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಕೀಪ್ ಆನ್ ಪ್ಲಾಂಟಿಂಗ್ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ವಿಭಿನ್ನ ಕಾಮೆಂಟ್ ಮಾಡಿದ್ದು, ಹೆಚ್ಚಿನ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಇದನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಸಾಕಷ್ಟು ಲೈಕ್ಸ್, ಕಾಮೆಂಟ್ ಬಂದಿದೆ. ಹಾವಿನ ವಿಭಿನ್ನ ಪ್ರತಿಕ್ರಿಯೆಗೆ ಜನರು ಮನಸೋತಿದ್ದಾರೆ.‌

 

ಇದನ್ನು ಓದಿ: Nithyananda: ರಂಜಿತಾ ಮತ್ತು ನಿತ್ಯಾನಂದನ ನಡುವೆ ಇದ್ದ ಮಳ್ಳಿ ಪ್ರೇಮಿ ಭಕ್ತೆ ಯಾರು? ವಿಡಿಯೋ ಲೀಕ್ ಆಗುತ್ತಿದ್ದಂತೆ ಆಕೆ ಕಾಣೆಯಾಗಿದ್ದೇಕೆ? 

Leave A Reply