Ranchi: ‘ ಹೆಲ್ಪ್ ಮೀ ಮೋದಿ, ಲವ್ ಜಿಹಾದ್ ಬಲೆಯಲ್ಲಿ ಸಿಕ್ಕಿಹಾಕಿ ಕೊಂಡಿದ್ದೇನೆ, ಇದರಿಂದ ಬಿಡಿಸಿ ‘ ಎಂದು ಪ್ರಧಾನಿಗೆ ಪತ್ರ ಬರೆದ ನಟಿ!

Actress Ranchi wrote a letter to the Prime Minister saying 'Help Me Modi

Ranchi: ಮಾಡೆಲ್ ಒಬ್ಬರಿಗೆ ತಾವು ಕೆಲಸ ಮಾಡುವ ಸಂಸ್ಥೆಯ ಮಾಲೀಕನೇ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿರುವ ಘಟನೆ ರಾಂಚಿಯಲ್ಲಿ (Ranchi) ನಡೆದಿದೆ. ಅಲ್ಲದೆ, ಆತ ಮತಾಂತರವಾಗಲು ಒತ್ತಡ ಹೇರಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ಯುವತಿ ಪ್ರಧಾನಿಗೆ ಪತ್ರ ಬರೆದಿದ್ದು, ‘ಲವ್ ಜಿಹಾದ್ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ, ಇದರಿಂದ ಬಿಡಿಸಿ, ನನಗೆ ಸಹಾಯ ಮಾಡಿ’ ಎಂದು ಪ್ರಧಾನಿಗೆ (Prime minister) ಪತ್ರ ಬರೆದಿದ್ದಾರೆ. ಇದೀಗ ಈ ವಿಚಾರ ಸಖತ್ ವೈರಲ್ ಆಗಿದೆ.

 

ಯುವತಿ ಬಿಹಾರ (Bihar) ಮೂಲದವಳಾಗಿದ್ದು, ರಾಂಚಿಯ ಮಾಡೆಲಿಂಗ್ ಸಂಸ್ಥೆಯಲ್ಲಿ ಮಾಡೆಲ್ (model) ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಕೆ ಸುಮಾರು ಒಂದೂವರೆ ವರ್ಷದಿಂದ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಕಂಪನಿ ಮಾಲಿಕ ತನ್ವೀರ್ ಎಂಬಾತ ಯುವತಿಯ ಜೊತೆಗೆ ಸಲುಗೆ ಬೆಳೆಸಿಕೊಳ್ಳಲು, ಮತಾಂತರ ಮಾಡಿ ಮದುವೆಯಾಗಲು ತನ್ನನ್ನು ಯಶ್ ಎಂದು ಪರಿಚಯ ಮಾಡಿಕೊಂಡಿದ್ದ. ನಂತರ ಹಲವು ಆಮಿಷಗಳನ್ನೊಡ್ಡಿ ಆಕೆಯನ್ನು ಪ್ರೀತಿಯ ಬಲೆಗೆ ಬೀಳಿಸಲು ಪ್ರಯತ್ನಿಸಿದ್ದಾನೆ. ಆದರೆ, ನಂತರದಲ್ಲಿ ಆತನ ನಿಜ ಹೆಸರು ಯುವತಿಗೆ ತಿಳಿದಿದ್ದು, ತಕ್ಷಣವೇ ಅಲ್ಲಿಂದ ಹೊರಟು ಮುಂಬೈ ಸೇರಿದ್ದಾಳೆ. ಆದರೆ ಬೆಂಬಿಡದ ಮಾಲೀಕ ಮುಂಬೈಗೂ ಬಂದು ತನ್ನನ್ನು ಕೊಲ್ಲಲು‌ ಯತ್ನಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಈ ಬಗ್ಗೆ ಯುವತಿ ಮೇ. 23 ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನಲ್ಲಿ, ಮಾಲೀಕ ತನ್ನ ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದಾನೆ. ಮತಾಂತರ ಮಾಡಿ ಮದುವೆಯಾಗಲು ಒತ್ತಾಯಿಸುತ್ತಿದ್ದ ಎಂದು ಮಾಡೆಲ್​​ ಆರೋಪಿಸಿದ್ದಾರೆ. ಅಲ್ಲದೆ, ಆತ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ ಮತ್ತು ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಸದ್ಯ ಮಾಲೀಕ ತನ್ವೀರ್ ವಿರುದ್ದ ಎಫ್‌ಐಆರ್ ದಾಖಲಾಗಿದೆ.

ಯುವತಿ ಟ್ವಿಟ್ಟರ್ (Twitter) ಮತ್ತು ಯೂಟ್ಯೂಬ್‌ನಲ್ಲಿ (YouTube) ವಿಡಿಯೋ ಅಪ್ಲೋಡ್ ಮಾಡಿದ್ದು, “ನಾನು ಸಾಯುತ್ತೇನೆ ಆದರೆ ನನ್ನ ಧರ್ಮವನ್ನು ಬದಲಾಯಿಸುವುದಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳೇ ನನ್ನನ್ನು ಈ ರಾಕ್ಷಸನಿಂದ ರಕ್ಷಿಸಿ, ನಾಳೆ ಏನು ಮಾಡುತ್ತಾರೋ ನನಗೆ ಗೊತ್ತಿಲ್ಲ, ನಾನು ಹಿಂದೂ, ಎಂದಿಗೂ ಅನ್ಯ ಧರ್ಮದವರನ್ನು ಮದುವೆ ಆಗುವುದಿಲ್ಲ” ಎಂದು ಹೇಳಿದ್ದಾರೆ.

ಯುವತಿ ಮಾಲೀಕನ ವಿರುದ್ಧ ಈ ಮೊದಲೇ ದೂರು ನೀಡಿದ್ದು, ಆ ವೇಳೆ ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಆತ ಕೋರ್ಟ್‌ನಲ್ಲಿ ಅಫಿಡವಿಟ್ ನೀಡಿದ್ದ. ನಂತರ ತನ್ನ ದೂರನ್ನು ಮಾನ್ವಿ ಹಿಂಪಡೆದಿದ್ದರು. ಆದರೆ, ಮಾಲೀಕ ತನ್ನ ಛಾಳಿ ಮುಂದುವರೆಸಿದ್ದ. ಮತ್ತೆ ಕಿರುಕುಳ ನೀಡಲಾರಂಭಿಸಿದ ಎಂದು ಮಾಡೆಲ್ ಹೇಳಿದ್ದಾರೆ.

ಆಕೆ ಮಾತ್ರವಲ್ಲ ಮಾಲೀಕ ಕೂಡ ಯುವತಿಯ ವಿರುದ್ಧ ಆರೋಪ ಮಾಡಿದ್ದಾನೆ. ಮಾಡೆಲ್​​​ ತನ್ನ ವ್ಯವಹಾರದಲ್ಲಿ ತನಗೆ ಮೋಸ ಮಾಡಿದ್ದಾಳೆ. ವಾಪಾಸ್ ಹಣ ಕೇಳಿದ್ದಕ್ಕಾಗಿ ಈ ರೀತಿಯ ಆರೋಪ ಮಾಡುತ್ತಿದ್ದಾಳೆ. ಆಕೆ​ ಕೂಡ ನನ್ನ ನಗ್ನ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾಳೆ ಎಂದು ಆರೋಪಿ ತನ್ವೀರ್ ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ.

 

ಇದನ್ನು ಓದಿ: Chikmagalur: ಇದೆಂಥಾ ವೈದ್ಯರ ಎಡವಟ್ಟು : ಕಂಠಪೂರ್ತಿ ಕುಡಿದು ಶಸ್ತ್ರಚಿಕಿತ್ಸೆ ಮಾಡಲು ಬಂದ ವೈದ್ಯ :ಕುಸಿದು ಬಿದ್ದು ಹೈಡ್ರಾಮಾ

Leave A Reply

Your email address will not be published.