Actress Pooja Bedi: ‘ನನ್ನದೇ ಬಿಕಿನಿ ಹಿಡಿದುಕೊಂಡು ಮನೆಗೆ ನುಗ್ಗಿಬಿಟ್ಟಿದ್ದ’ ; ಹುಚ್ಚು ಅಭಿಮಾನಿಯ ಹುಚ್ಚಾಟ ಬಿಚ್ಚಿಟ್ಟ ನಟಿ ಪೂಜಾ!!

Actress Pooja unleashed the madness of a crazy fan

Actress Pooja Bedi: ಆಗಿನ ಕಾಲದ ಸ್ಟಾರ್ ನಟಿ ಪೂಜಾ ಬೇಡಿ (Actress Pooja Bedi) ಇದೀಗ ಸಖತ್ ಸುದ್ದಿಯನ್ನು ಬಿಚ್ಚಿಟ್ಟಿದ್ದಾರೆ. ಹೌದು, ಕಪಿಲ್ ಶರ್ಮಾ ಶೋಗೆ (Kapil Sharma show) ಆಗಮಿಸಿದ್ದ ನಟಿ ತಮ್ಮ ಅಪ್ಪಟ ಅಭಿಮಾನಿಯೊಬ್ಬರ ಬಗ್ಗೆ ಮಾತನಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

 

ಅನೈಸ್ ಎಂಬ ಯುವಕ ಪೂಜಾ ಬೇಡಿಯ ಅಭಿಮಾನಿಯಾಗಿದ್ದ. ಎಷ್ಟೆಂದರೆ, ಪೂಜಾ ಕುಂತರು-ನಿಂತರು ಎಲ್ಲೇ ಹೋದರು ಆತ ಕಣ್ಣೆದುರು ಪ್ರತ್ಯಕ್ಷ ಆಗುತ್ತಿದ್ದನಂತೆ. ದಿನಕ್ಕೆ ನೂರಾರು ಬಾರಿ ಕರೆ, ಹತ್ತಾರು ಪತ್ರಗಳನ್ನು ರಕ್ತದಲ್ಲಿ ಗೀಚಿ ಕೊರಿಯರ್ ಮಾಡುತ್ತಿದ್ದ. ಅಬ್ಬಬ್ಬಾ!! ಅದೊಂದು ಬಾರಿ ಸ್ವತಃ ನಟಿ ಪೂಜಾ ಅವರದೇ ಬಿಕಿನಿ ಹಿಡಿದುಕೊಂಡು ಮನೆಗೆ ನುಗ್ಗಿದ್ದ ಎಂದು ಹೇಳಿದ್ದಾರೆ.

ಪೂಜಾ ಬೇಡಿ ಲುಟೇರ ಸಿನಿಮಾದಲ್ಲಿ ಬಿಕಿನಿ ಧರಿಸಿದ್ದು, ನಂತರದಲ್ಲಿ ಇದನ್ನು ಹರಾಜು ಹಾಕಲಾಗಿತ್ತು. ಈ ವೇಳೆ ಪೂಜಾ ಬಿಕಿನಿಯನ್ನು ಅಭಿಮಾನಿ ಯುವಕ ಅನೀಸ್ ಖರೀದಿಸಿದ್ದ. ಖರೀದಿ ಮಾಡಿದ್ದೇ ತಡ ಬಿಕಿನಿ ಹಿಡಿದು ಪೂಜಾ ಮನೆಗೆ ಎಂಟ್ರಿ ಕೊಟ್ಟಿದ್ದ. ಇದರಿಂದ ಆಶ್ಚರ್ಯಗೊಂಡ ಪೂಜಾ ಆತನಿಗೆ ಬುದ್ಧಿವಾದ ಹೇಳಿದ್ದರು. ಆದರೆ, ಅಭಿಮಾನದ ನಶೆಯಲ್ಲಿದ್ದ ಆತನಿಗೆ ಯಾವುದೂ ನಾಟಲಿಲ್ಲ. ಪೂಜಾಳನ್ನು ತಬ್ಬಿಕೊಳ್ಳಲು ಆಗದ ಕಾರಣ, ಆಕೆಯ ಬಿಕಿನಿಯನ್ನಾದರೂ ತಬ್ಬಿಕೊಳ್ಳೋಣ ಎಂದು ಅದನ್ನು ಖರೀದಿಸಿದ್ದನಂತೆ ಈ ಹುಚ್ಚು ಅಭಿಮಾನಿ. ಈ ರೀತಿಯ ಕಾಟ
ನಟಿ ಪೂಜಾ ಫರ್ಹಾನ್ ಜೊತೆ ಮದುವೆ ಆಗುವವರೆಗೆ ಇತ್ತು ಎಂದು ಪೂಜಾ ಬೇಡಿ ಹೇಳಿದ್ದಾರೆ.

ಪೂಜಾ ಬೇಡಿ 1994ರಲ್ಲಿ ಪ್ರಸಿದ್ಧ ವಾಸ್ತುಶಿಲ್ಪಿ ಫರ್ಹಾನ್ ಇಬ್ರಾಹಿಂ ಅವರನ್ನು ವಿವಾಹವಾದರು. ಅವರನ್ನು ಮದುವೆಯಾಗಲು, ಪೂಜಾ ಇಸ್ಲಾಂಗೆ ಮತಾಂತರಗೊಂಡರು. ಇವರಿಗೆ ಆಲಿಯಾ ಮತ್ತು ಉಮರ್ ಎಂಬ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಾದ ನಂತರ, ಪೂಜಾ ಬೇಡಿ ಹಾಗೂ ಫರ್ಹಾನ್ ಇಬ್ರಾಹಿಂ ದಾಂಪತ್ಯದಲ್ಲಿ ಬಿರುಕು ಮೂಡಿತು. ಕೆಲ ಕಾರಣಗಳಿಂದ 2003ರಲ್ಲಿ ಪ್ರೇಮಿಗಳ ದಿನದಂದು ಇಬ್ಬರು ವಿಚ್ಛೇದನ ಪಡೆದರು. ವಿಚ್ಛೇದನದ ಬಳಿಕ
2019 ರಲ್ಲಿ ಮಾಣಿಕ್ ಕಂಟ್ರ್ಯಾಕ್ಟರ್ ಜೊತೆ ಲಿವಿನ್ ರಿಲೇಶನ್​ಶಿಪ್​ನಲ್ಲಿ ಪೂಜಾ ಇದ್ದಾರೆ ಎನ್ನಲಾಗಿದೆ.

ನಟಿ ಪೂಜಾ ಬೇಡಿ (Pooja Bedi) 1991ರಲ್ಲಿ ಬಾಲಿವುಡ್​ಗೆ (Bollywood) ಪದಾರ್ಪಣೆ ಮಾಡಿದರು. ಅಂದಿನ ಕಾಲದಲ್ಲಿ ನಟಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದರು. ತಮ್ಮ ನಟನೆಯ ಮೂಲಕ ಸಾಕಷ್ಟು ಜನರನ್ನು ಸೆಳೆದಿದ್ದು, ಪೂಜಾಗೆ ದೊಡ್ಡ ಅಭಿಮಾನಿ ವರ್ಗವೇ ಇತ್ತು. ನಟನೆಯ ಹೊರತಾಗಿ, ನಟಿ ಪೂಜಾ ಬೇಡಿ ಪುಸ್ತಕಗಳನ್ನು ಬರೆದಿದ್ದಾರೆ. ಅನೇಕ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಬಿಗ್​ಬಾಸ್ (bigg boss), ಝಲಕ್ ದಿಕ್​ಲಾಜಾ, ಫಿಯರ್ ಫ್ಯಾಕ್ಟರ್, ಬಿಗ್ ಬ್ರದರ್​ (big brother) ರಿಯಾಲಿಟಿ ಶೋಗಳಲ್ಲಿಯೂ ಪೂಜಾ ಕಾಣಿಸಿಕೊಂಡಿದ್ದಾರೆ. ಪೂಜಾ ಬೇಡಿ ಉದ್ಯಮದಲ್ಲೂ ಉತ್ತಮ ಹೆಸರು ಮಾಡಿದ್ದಾರೆ. ಸದ್ಯ ಪೂಜಾ ಮಗಳು ಆಲಿಯಾ (Alia) ಕೂಡ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದು, ಖ್ಯಾತ ನಟಿಯಾಗಿ ಮಿಂಚುತ್ತಿದ್ದಾರೆ.

 

ಇದನ್ನು ಓದಿ: Dearness Allowance: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ತುಟ್ಟಿ ಭತ್ಯೆ 35 % ಕ್ಕೆ ಹೆಚ್ಚಿಸಿ ಸರ್ಕಾರದ ಆದೇಶ 

Leave A Reply

Your email address will not be published.