Actor Upendra: ಚಡ್ಡಿಯಲ್ಲಿ’ ರಿಯಲ್ ‘ ಆಗಿ ಕಾಣಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರ, ಬಾಲ್ಯದ ಫೋಟೋ ನೋಡಿ – ಹೇಗಿದ್ರು ನಮ್ ಡೈರೆಕ್ಟ್ರು !

Actor Upendra Shares childhood photos Viral

Actor Upendra: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಟ, ನಟಿಯರ ಬಾಲ್ಯದ ಫೋಟೋಗಳು ವೈರಲ್ ಆಗುತ್ತಿದೆ. ಈ ಹಿಂದೆ ವಿರಾಟ್ ಕೊಹ್ಲಿ (Virat Kohli) ಬಾಲ್ಯದ ಫೋಟೋ (Virat Kohli childhood photo) ವೈರಲ್ ಆಗಿತ್ತು. ಹಾಗೆಯೇ ನಾಗಿಣಿ ಸೀರಿಯಲ್ ನಟಿ ನಮೃತಾ ಗೌಡ (Namratha Gowda), ಖ್ಯಾತ ಸ್ಟಾರ್ ನಟಿ ಪೂಜಾ ಹೆಗ್ಡೆ ಬಾಲ್ಯದ ಫೋಟೋ (Actress Pooja Hegde Childhood photo) ವೈರಲ್ ಆಗಿತ್ತು. ಇದೀಗ NCC ಯುನಿಫಾರ್ಮ್ ತೊಟ್ಟಿರುವ ಕನ್ನಡದ ಸ್ಟಾರ್ ನಟ ಉಪೇಂದ್ರ (Actor Upendra) ಅವರ ಬಾಲ್ಯದ ಫೋಟೋ ವೈರಲ್ ಆಗುತ್ತಿದೆ.

 

NCC ಯುನಿಫಾರ್ಮ್ ತೊಟ್ಟು ಫೋಟೋಗೆ ಫೋಸ್ ಕೊಟ್ಟಿರುವ ಕನ್ನಡ ಚಿತ್ರರಂಗದ ಸ್ಟಾರ್ ನಟ ಉಪೇಂದ್ರ ಅವರ ಫೋಟೋ ಇದೀಗ ಸಖತ್ ವೈರಲ್ ಆಗಿದೆ. ನಟ ಉಪೇಂದ್ರ (Upendra Rao) ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಇದೀಗ ತಮ್ಮ ಬಾಲ್ಯದ ಫೋಟೋವನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಈ ಫೋಟೋ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾಮೆಂಟ್’ಗಳ ಸುರಿಮಳೆಗೈಯುತ್ತಿದ್ದಾರೆ.

1992 ರಲ್ಲಿ ತೆರೆಗೆ ಬಂದ ‘ತರ್ಲೆನನ್ಮಗ’ ಚಿತ್ರದ ಮೂಲಕ ನಿರ್ದೇಶಕರಾದ ಉಪೇಂದ್ರ ಅವರು ಮುಂದೆ 1993ರಲ್ಲಿ ‘ಶ್’ ಹಾರರ್ ಚಿತ್ರ ನಿರ್ದೇಶಿಸಿದರು. ಉಪೇಂದ್ರ-ಶಿವರಾಜಕುಮಾರ್ ಅಭಿನಯದ ‘ಓಂ’ (ohm) ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಸಖತ್ ಹಿಟ್ ಆದ ಈ ಸಿನಿಮಾ ಉಪೇಂದ್ರ-ಶಿವರಾಜಕುಮಾರ್ ಸಿನಿಜೀವನಕ್ಕೆ ಹೊಸ ತಿರುವು ನೀಡಿತು. ಉಪೇಂದ್ರ 1998ರಲ್ಲಿ ತೆರೆಗೆ ಬಂದ ‘ಎ’ ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ನಂತರ ತೆರೆಗೆ ಬಂದ ‘ಉಪೇಂದ್ರ’ (upendra) ಚಿತ್ರವು ಹಿಟ್ ಆಗಿದ್ದು, ದಾಖಲೆ ಸೃಷ್ಟಿಯಾಯಿತು.

ಸದ್ಯ ಉಪೇಂದ್ರ ಕಬ್ಜಾ (kabzaa) ಸಿನಿಮಾ ಸೂಪರ್ ಹಿಟ್ ಆಗಿದ್ದು, ಉಪ್ಪಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಯುಐ’ (UI) ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ರಾಜಕೀಯದಲ್ಲಿಯೂ ಉಪ್ಪಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. 2018 ಮಾರ್ಚ್ ನಲ್ಲಿ ಪ್ರಜಾಕೀಯ (prakakiya) ಪಕ್ಷ ಸ್ಥಾಪಿಸಿ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ.

ಇದನ್ನೂ ಓದಿ: BPL Card: ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಹಠಾತ್ ಸ್ಥಗಿತ, ಗ್ಯಾರಂಟಿ ಎಫೆಕ್ಟ್ ತಂದ ಶಾಕ್ ?!

Leave A Reply

Your email address will not be published.