D K Shivkumar vs Prathap Simha: ಜೂನ್ 1 ಯಾಕೆ? ನಾಳೆಯಿಂದಲೇ ನಮ್ಮ ಮನೆ ಮುಂದೆ ಮಲಗಲಿ- ಪ್ರತಾಪ್ ಸಿಂಹ ಹೇಳಿಕೆಗೆ ಡಿಕೆಶಿ ವ್ಯಂಗ್ಯ! ಉಪ ಮುಖ್ಯಮಂತ್ರಿಗಳೇ ನಿಮಗಾಗಲಿ, ನಿಮ್ಮ ಸರ್ಕಾರಕ್ಕಾಗಲಿ ಹೀಗೆ ಹೇಳೋ ನೈತಿಕಥೆ ಇದೆಯೇ?

DK Shivakumar said to Prathap Simha statement let sleep in front of our house

DK Shivkumar – Prathap Simha: ರಾಜ್ಯ ಕಾಂಗ್ರೆಸ್ ಸರ್ಕಾರ(Congress Government) ಜೂನ್ 1 ರೊಳಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕು, ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ(Prathap simha) ಎಚ್ಚರಿಕೆ ನೀಡಿದ್ದರು. ಇದಕ್ಕೆ ಕೌಂಟ್ರು ಕೊಟ್ಟಿರುವ ಡಿ ಕೆ ಶಿವಕುಮಾರ್(DK Shivkumar – Prathap Simha) ಅವರು ಜೂನ್ 1 ರಿಂದ ಯಾಕೆ ನಾಳೆಯಿಂದಲೇ ನಮ್ಮ ಮನೆಯ ಹತ್ತಿರ ಬಂದು ಮಲಗಲು ಹೇಳಿ ಎಂದು ಲೇವಡಿ ಮಾಡಿದ್ದಾರೆ.

 

ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್‌ನವರ ಮುಖ ನೋಡಿ ಯಾರೂ ಮತ ಹಾಕಿಲ್ಲ, ಅವರು ಘೋಷಣೆ ಮಾಡಿದ್ದ ಗ್ಯಾರಂಟಿಗಳಿಗೆ(Guaranty) ಮತ ಹಾಕಿದ್ದಾರೆ. ಅದನ್ನು ಕಾಂಗ್ರೆಸ್ ನಾಯಕರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೊಟ್ಟ ಭರವಸೆಗಳನ್ನು ಈಡೇರಿಸಬೇಕು. ಜೂನ್ 1ರ ವೇಳೆಗೆ ಗ್ಯಾರಂಟಿಗಳನ್ನು ಈಡೇರಿಸಲಿ, ಷರತ್ತುಗಳನ್ನು ವಿಧಿಸದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ದೆಹಲಿಯಿಂದ ಬೆಂಗಳೂರಿಗೆ(Bangalore) ಬಂದ ನಂತರ ಸುದ್ದಿಗಾರರ ಜೊತೆ ಮಾತನಾಡಿ ಪ್ರತಾಪ್ ಸಿಂಹ(prathap simha) ಇಲ್ಲೇ ನಮ್ಮ ಮನೆ ಹತ್ತಿರ ಬಂದು ಮಲಗಲಿ, ಜೂನ್ ವರೆಗೆ ಯಾಕೆ ಕಾಯಬೇಕು? ನಾಳೆಯಿಂದಲೇ ಬಂದು ಮನೆ ಮುಂದೆ ಮಲಗಲು ಹೇಳಿ ಎಂದು ಉತ್ತರ ನೀಡಿದರು. ಆದರೆ ಇವರಿಗೆ ಅಥವಾ ಇನ್ನಾವುದೇ ಕಾಂಗ್ರೆಸಿಗರಿಗೆ ಈ ರೀತಿ ಮಾತನಾಡುವ ಯಾವ ನೈತಿಕಥೆ ಇದೆ?

ಯಾಕೆಂದರೆ ಕಾಂಗ್ರೆಸ್, ಚುನಾವಣಾ ಪೂರ್ವದಲ್ಲಿ(before election) ತಾನು ಬಿಡುಗಡೆ ಗೊಳಿಸಿದ ಪ್ರಣಾಳಿಕೆಯಲ್ಲಿ 200 ಉಚಿತ ವಿದ್ಯುತ್(Free Current), ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 10 ಕೆ ಜಿ ಅಕ್ಕಿ, ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ, ಹಾಗೂ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆಯನ್ನು ನೀಡೋದಾಗಿ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅಲ್ಲದೆ ಇವರ ನಾಯಕರು ರಾಜ್ಯದಲ್ಲೇನಾದರೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟಸಭಯಲ್ಲಿಯೇ ಅನುಮೋದನೆ ನೀಡಿ ಎಲ್ಲವನ್ನೂ ಜಾರಿಗೊಳಿಸುತ್ತೇವೆ ಎಂದಿದ್ದರು. ಆದರೀಗ ಸರ್ಕಾರ ರಚನೆಯಾಗಿ, ಮೊದಲ ಕ್ಯಾಬಿನೆಟ್ ಸಭೆ ನಡೆದಿದ್ದರು ಯಾವ ಗ್ಯಾರಂಟಿಗಳ ಜಾರಿಗಳು ಆಗಿಲ್ಲ. ತಾತ್ವಿಕ ಒಪ್ಪಿಗೆ ಎಂದು ಜನರಿಗೆ ತೇಪೆ ಹಾಕಿ ಸುಮ್ಮನೆ ಕುಳಿತುಬಿಟ್ಟಿದ್ದಾರೆ ಕರ್ನಾಟಕದ ಕಾಂಗಿಗಳು.

ಚುನಾವಣೆ ಪೂರ್ವದಲ್ಲೂ, ಚುನಾವಣೆ ದಿನ, ಚುನಾವಣೆ ಮುಗಿದ ಬಳಿಕವೂ ಈ ಗ್ಯಾರಂಟಿಗಳ ಬಗ್ಗೆ ಕಾಂಗಿಗಳು ಮಾಧ್ಯಮಗಳ ಮುಂದೆ ಬಂದು ಪುಂಖಾನುಪುಂಖವಾಗಿ ಮಾತನಾಡಿದ್ದೇ ಆಯಿತು. ಡಿಕೆಶಿ ಅಂತೂ ಪ್ರಚಾರಕ್ಕೆ ಹೋದಕಡೆಯೆಲ್ಲಾ, ಸಭೆ ಸಮಾರಂಭಗಳಲೆಲ್ಲ ಕವನವಾಗಿಯೋ, ಚುಟುಕಾಗಿಯೋ ಇಲ್ಲ ಪದ್ಯವಾಗಿಯೋ ಪ್ರಾಸಬದ್ಧವಾಗಿ ಇವುಗಳ ಬಗ್ಗೆ ಕೂಗಿ ಕೂಗಿ, ಹಾಡಿ ಹಾಡಿ ಹೇಳಿದ್ದರು. ಅದರಲ್ಲೂ ಜೂನ್ 1 ರಿಂದ ಯಾರೂ ಕರೆಂಟ್ ಬಿಲ್ ಕಟ್ಟಬೇಡಿ ಎಂದಿದ್ದರು. ಮುಖ್ಯವಾಗಿ ಈ ವೇಳೆ ಯಾವ ಷರತ್ತು, ಕಂಡೀಷನ್ಸ್ ಗಳು ಇರಲಿಲ್ಲ. ಅದರ ಬಗ್ಗೆ ಎಲ್ಲೂ ಚಕಾರ ಕೂಡ ಎತ್ತಿರಲಿಲ್ಲ. ಆದರೀಗ ಈ ಗ್ಯಾರಂಟಿಗಳಿಗೆ ಕೆಲವು ಮಾನದಂಡಗಳು, ಕೆಲವು ಷರತ್ತುಗಳು ಎಂಬ ಗುಸು ಗುಸು ಶುರುವಾಗಿದೆ. ಇದೆಲ್ಲಕ್ಕೂ ಮುಂಚಿತವಾಗಿ ಇವು ಜಾರಿಯಾಗುತ್ತವೆಯೇ ಎಂಬ ಅನುಮಾನವೂ ಬಲವಾಗುತ್ತಿದೆ.

ಅಂದಹಾಗೆ ಕಾಂಗ್ರೆಸ್(Congress) ಘೋಷಣೆ ಮಾಡಿರೋ ಗ್ಯಾರಂಟಿಗಳನ್ನು ಜಾರಿಗೊಳಿಸಲು ವರ್ಷಕ್ಕೆ ಬರೋಬ್ಬರಿ 65 ಸಾವಿರ ಕೋಟಿ ರೂಪಾಯಿಗಳು ಹಣ ಬೇಕಾಗುತ್ತದೆ. ಆಂದರೃ ಇದು ನಮ್ಮ ರಾಜ್ಯ ಬಜೆಟ್ ನ ಅರ್ಧಕ್ಕೆ ಸಮವಾಗುತ್ತದೆ!. ಯಾವುದೇ ಆಲೋಚನೆ-ಮುಂದಾಲೋಚನೆಗಳಿಲ್ಲದೆ, ಯೋಜನೆಗಳ ದೂರದೃಷ್ಟಿ ಇಲ್ಲದೆ, ಅಧಿಕಾರದ ಗದ್ದುಗೆ ಏರಲು, ಮತದಾರರ ಓಲೈಕೆಗಾಗಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿ ಬಿಟ್ಟಿತು. ಜನರು ಕೂಡ ಬದಲಾವಣೆ ಬಯಸಿಯೋ ಇಲ್ಲ ಗ್ಯಾರಂಟಿಗಳನ್ನು ನಂಬಿಯೋ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿರುವುದಂತೂ ನಿಜ.

ಇನ್ನು ಇಷ್ಟೆಲ್ಲಾ ತಮ್ಮಲ್ಲೇ ಹುಳುಕು ಹೊಂದಿದ್ದರೂ, ತಮ್ಮ ತಪ್ಪಿದ್ದರು, ತಾವು ಮಾತಿಗೆ ತಪ್ಪುತ್ತಿದ್ದೇವೆ ಎಂದು ಗೊತ್ತಿದ್ದರೂ ಡಿಕೆಶಿ ಅವರು ಪ್ರತಾಪ್ ಸಿಂಹರ ಹೇಳಿಕೆಗೆ, ಜೂನ್ 1 ರಿಂದ ಯಾಕೆ ನಾಳೆಯಿಂದಲೇ ನಮ್ಮ ಮನೆಯ ಹತ್ತಿರ ಬಂದು ಮಲಗಲು ಹೇಳಿ ಎಂದು ಲೇವಡಿ ಮಾಡಿರುವುದು ಅಷ್ಟರ ಮಟ್ಟಿಗೆ ಸರಿಯಲ್ಲ. ಯಾಕೆಂದರೆ ವಿರೋಧ ಪಕ್ಷದ ಸ್ಥಾನದಲ್ಲಿದ್ದವರು ಸರ್ಕಾರದ ನಡೆಗಳನ್ನು, ಪೊಳ್ಳು ಭರವಸೆಗಳನ್ನು ಪ್ರಶ್ನಿಸುವುದು ಸಹಜ. ಪ್ರಶ್ನಿಸಲೇ ಬೇಕು. ಅಂತೆಯೇ ಬಿಜೆಪಿ ಆಗಲಿ ಪ್ರತಾಪ್ ಸಿಂಹರಾಗಲಿ ಮಾಡಿದ್ದಾರೆ. ಆದರೆ ಆಡಳಿತ ನಡೆಸುವವರು ಅದಕ್ಕೆ ಸಮರ್ಥವಾಗಿ ಉತ್ತರಿಸಬೇಕು. ಅದು ಬಿಟ್ಟು ಉಡಾಫೆಯ ಮಾತುಗಳನ್ನಾಡಬಾರದು.

ಅಂತೆಯೇ ಡಿಕೆಶಿ ಅವರು ಕೂಡ ಗ್ಯಾರಂಟಿಗಳನ್ನು ಜಾರಿಗೊಳಿಸಲು ಯಾಕೆ ತಡವಾಗುತ್ತಿದೆ, ಏನು ಸಮಸ್ಯೆಗಳಿವೆ, ಆಗುತ್ತಿರುವ ತೊಡಕೇನು ಎಂದು ವಿವರವಾಗಿ ವಿವರಿಸಿ ಪ್ರತಾಪ್ ಸಿಂಹರಿಗೆ ಉತ್ತರಿಸಿದ್ದರೆ ಅವರ ಮಾತುಗಳಿಗೆ ಒಂದು ತೂಕ ಬಂದು, ಅವರಿಗೂ ಒಂದು ಘನತೆ ಬರುತ್ತಿತ್ತು. ಅಲ್ಲದೆ ಜನರಿಗೂ ಕಾಂಗ್ರೆಸ್ ಸರ್ಕಾರದ ಬಗ್ಗೆ ನಂಬಿಕೆ, ಗೌರವಗಳು ಹೆಚ್ಚಾಗುತ್ತಿದ್ವು!!. ಏನೇ ಆಗಲಿ ಆಗಿದ್ದು ಆಗಿದೆ. ಆದಷ್ಟು ಬೇಗ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ರಾಜ್ಯದ ಜನರ ನಂಬಿಕೆ ಉಳಿಸಿಕೊಂಡು ಅವರ ಕಷ್ಟಗಳಿಗೆ ನೆರವಾಗಲಿ.

 

ಇದನ್ನು ಓದಿ: Karunakar Pujari Patte: ಬೆಳಂದೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕರುಣಾಕರ ಪೂಜಾರಿ ಪಟ್ಟೆ ನಿಧನ 

Leave A Reply

Your email address will not be published.