Ranjita and Nityananda: ಶಾಲೆಗೆ ಹೋಗುವಾಗ್ಲೇ ರಂಜಿತಾಳ ಸಿನಿಮಾ ನೋಡಿ ಹುಚ್ಚನಾಗಿದ್ದ ನಿತ್ಯಾನಂದ! ಅಷ್ಟಕ್ಕೂ ಈ ಖ್ಯಾತ ನಟಿ ಈತನ ತೆಕ್ಕೆಗೆ ಬಿದ್ದಿದ್ದೇಗೆ?

Nityananda fell in love with Ranjitha intresting story

Ranjita and Nityananda: ದಕ್ಷಿಣ ಭಾರತದ(South india) ಹಿರಿಯ ನಟ ಅಶೋಕ್ ಕುಮಾರ್(Ashok kumar) ಅವರು ಮೊನ್ನೆ ಮೊನ್ನೆ ತಾನೆ ನಿತ್ಯಾನಂದ ಸ್ವಾಮಿ (Nithyananda Swamy) ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನ ಬಿಚ್ಚಿಟ್ಟಿದ್ದು, ನನ್ನ ಇಬ್ಬರೂ ಮಕ್ಕಳು ತಮ್ಮ ತಮ್ಮ ಗಂಡಂದಿರಿಗೆ ಡಿವೋರ್ಸ್(Divorce) ಕೊಟ್ಟು ನಿತ್ಯಾನಂದನ ಜೊತೆ ಇರೋದಾಗಿ ಅಸಲಿ ವಿಚಾರವನ್ನ ಬಿಚ್ಚಿಟ್ಟು, ಕಣ್ಣೀರ ಕರೆದಿದ್ದರು. ಅಶೋಕ್ ಕುಮಾರ್ ಅವರು ತಮ್ಮ ಮಕ್ಕಳ ಬಗ್ಗೆ ಮನಬಿಚ್ಚಿ ಮಾತನಾಡುತ್ತಿದ್ದಂತೆ ಇದೀಗ ಈ ವಿಚಾರ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಹಳೆಯ ವಿಚಾರಗಳೆಲ್ಲ ಮುನ್ನಲೆಗೆ ಬರುತ್ತಿವೆ.

ದಕ್ಷಿಣ ಭಾರತ ಚಿತ್ರ ರಂಗದ ಖ್ಯಾತ ನಟ ಅಶೋಕ್ ಕುಮಾರ್ (Ashok kumar) ಅವರು ತಮ್ಮ ಹೆಣ್ಣುಮಕ್ಕಳಿಬ್ಬರ ಬದುಕಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತನ್ನ ಇಬ್ಬರೂ ಹೆಣ್ಣುಮಕ್ಕಳು ಇಂದು ನಿತ್ಯಾನಂದನೊಂದಿಗೆ ವಾಸಿಸುತ್ತಿದ್ದಾರೆ ಎಂದಿದ್ದರು. ಈ ವಿಷಯ ಸದ್ಯ ಭಾರೀ ಸುದ್ದಿಯಾಗ್ತಿದೆ. ಕೆಲವೊಂದು ಹಳೆಯ ವಿಚಾರಗಳೆಲ್ಲ ಮತ್ತೆ ಚರ್ಚೆಯಾಗಲಾರಂಭಿಸಿವೆ. ಯಾಕೆಂದರೆ ಅಶೋಕ್ ಅವರ ಎರಡನೇ ಮಗಳು ರಂಜಿತಾಳ(Ranjita and Nityananda) ಹೆಸರು ಬಹಳ ಹಿಂದೆಯೇ ನಿತ್ಯಾನಂದನೊಂದಿಗೆ ತುಳುಕುಹಾಕಿಕೊಂಡಿತ್ತು. ಒಂದೊಮ್ಮೆ ಇಡೀ ದೇಶವೇ ಇವರಿಬ್ಬರ ಕುರಿತು ಮನ ಬಂದಂತೆ ಮಾತನಾಡಿತ್ತು.

ಹೌದು ಗೆಳೆಯರೆ ನಿತ್ಯಾನಂದಾ(Nityananda) ಜೊತೆ ರಂಜಿತಾ ಹೆಸರು ತಳುಕು ಹಾಕೊಂಡಾಗ ದೇಶದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಯಾಗಿತ್ತು. ಆಗಲೇ ನಿತ್ಯಾನಂದ ಹಾಗೂ ರಂಜಿತಾ ಲವ್ ಸ್ಟೋರಿ ಬಗ್ಗೆ ಸುದ್ದಿಯೊಂದು ಹಬ್ಬಿತ್ತು. ಟಿವಿ9ನಲ್ಲಿ ಈ ಬಗ್ಗೆ ವಿಸ್ತೃತವಾಗಿ ವರದಿ ಮಾಡಲಾಗಿತ್ತು. ನಿತ್ಯಾನಂದನಿಗೆ ಯಾವಾಗ ರಂಜಿತಾ ಮೇಲೆ ವ್ಯಾಮೋಹ ಮೂಡಿದ್ದು ಯಾವಾಗ? ಅನ್ನೋದನ್ನು ವರದಿ ಮಾಡಿತ್ತು.

ಹಾಗಿದ್ರೆ ಏನಿದು ವಿಚಾರ ಎಂದು ನೋಡೋದಾದ್ರೆ, ಅಶೋಕ್ ಕುಮಾರ್ ಅವರ ಎರಡನೇ ಪುತ್ರಿನೇ ರಂಜಿತಾ. ಮಗಳು ಸಿನಿಮಾಗೆ ಎಂಟ್ರಿ ಕೊಟ್ಟಾಗ ಖುಷಿಪಟ್ಟಿದ್ದರು. ತಮಿಳಿನ ಜನಪ್ರಿಯ ನಿರ್ದೇಶಕ ಭಾರತಿರಾಜನ್ ನಿರ್ದೇಶಿಸಿದ ‘ನಾಡೋಡಿ ತೆಂಡ್ರಲ್'(Nadodi Tendral) ನಲ್ಲಿ ನಾಯಕಿಯಾಗಿ ನಟಿಸಿದ್ದರು. ಆದರೆ ಈ ಸಿನಿಮಾ ಅಶೋಕ್ ಕುಮಾರ್ ಪಾಲಿಗೆ ಮುಳುವಾಗಿ, ರಂಚಿತಳ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಗಿ, ನಿತ್ಯಾನಂದನ ಬದುಕನ್ನೇ ಬದಲಿಸಿತ್ತು. ಯಾಕೆಂದರೆ ಈ ಸಿನಿಮಾ ಸ್ವಯಂ ಘೋಷಿತ ದೇಶಮಾನವನಿಗೆ, ರಂಜಿತಾ ಮೇಲೆ ಲವ್ವೋ ವ್ಯಾಮೋಹವೋ ಬೆಳೆಯುವಂತೆ ಮಾಡಿಬಿಟ್ಟಿತು.

ಅಂದಹಾಗೆ ನಿತ್ಯಾನಂದ 10ನೇ ತರಗತಿ ಓದುವಾಗ ‘ನಾಡೋಡಿ ತೆಂಡ್ರಲ್’ ರಿಲೀಸ್ ಆಗಿತ್ತು. ಆಗ ನಿತ್ಯಾನಂದ ಇನ್ನೂ ರಾಜಸೇಖರ್(Rajashekar) ಆಗಿಯೇ ಇದ್ದ. ಅದ್ಯಾವಾಗ ಈ ಸಿನಿಮಾ ನೋಡಿದನೋ ಅಲ್ಲಿಂದ ರಂಜಿತಾ ಜಪಾ ಮಾಡೋಕೆ ಶುರು ಮಾಡಿದ್ದ. ಬ್ಯಾಗ್‌ನಲ್ಲಿ ರಂಜಿತಾ ಫೋಟೊಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದನಂತೆ. ಈ ಬಗ್ಗೆ ನಿತ್ಯಾನಂದನ 10ನೇ ತರಗತಿಯಲ್ಲಿ ಸಹಪಾಠಿಯಾಗಿದ್ದ ಶಿವಕುಮಾರ್ (Shivkumar) ಎಂಬುವವರು ಮಾಧ್ಯಮವೊಂದಕ್ಕೆ ವಿವರಿಸಿದ್ದರು.

ಹೌದು, ನಾಡೋಡಿ ತೆಂಡ್ರಲ್ ಸಿನಿಮಾ ನೋಡುತ್ತಿದ್ದಂತೆ ನಿತ್ಯಾನಂದನ ವರ್ತನೆಯಲ್ಲಿ ಬದಲಾವಣೆಯಾಗಿತ್ತು. ಇದನ್ನು ಆತನ ಸಹಪಾಠಿಗಳು ಗಮನಿಸಿದ್ದರು. ಹೀಗಾಗಿ ಸ್ನೇಹಿತರು ‘ರಾಜಶೇಖರನ್ ಇನ್ ಲವ್’ ಎಂದು ಹೆಸರಿಟ್ಟಿದ್ದಾಗಿ ಮಾಹಿತಿ ನೀಡಿದ್ದರು. ಇಲ್ಲಿಂದಲೇ ರಂಜಿತಾಗಾಗಿ ನಿತ್ಯಾನಂದನ ಮನಸ್ಸು ಹಾತೊರೆಯುತ್ತಿತ್ತು ಎನ್ನಲಾಗಿದೆ. ಸರಿ, ಇದೇನೋ ಸಹಜ. ಹಲವರಿಗೆ ಹಿರೋ, ಹೀರೋಯಿನ್ ಗಳು ಇಷ್ಟ ಆಗೋದು ಸಾಮಾನ್ಯ. ಆದರೆ ಇದೆಲ್ಲದರ ನಡುವೆ ಕಾಡೋ ವಿಚಾರ ನಿತ್ಯಾಂದನ ಸಂಪರ್ಕಕ್ಕೆ ರಂಜಿತಾ ಬಂದಿದ್ದೇಗೆ? ಅದೂ ಕೂಡ ಇಂಟ್ರೆಸ್ಟಿಂಗ್!!

ನಿತ್ಯಾನಂದ 6ನೇ ತರಗತಿಯಿಂದಲೇ ತಪಸ್ಸು ಮಾಡುತ್ತೇನೆ ಸನ್ಯಾಸಿ ಆಗುತ್ತೇನೆ ಎನ್ನುತ್ತಿದ್ದ. ರಂಜಿತಾ ನೋಡಿದ ಮೇಲೆ ವ್ಯಾಮೋಹ ಹುಟ್ಟಿದರೂ, ಸನ್ಯಾಸಿ ಆಗೋ ಗುರಿಯನ್ನು ಮರೆತಿರಲಿಲ್ಲ. ಇತ್ತ ರಂಜಿತಾ ಮಿಲಿಟಿರಿ ಆಫೀಸರ್ ಅನ್ನು ಲವ್ ಮಾಡಿ ಮದುವೆ ಆಗಿದ್ದರು. ಆದರೆ, ಮದುವೆ ಬಳಿಕ ಗರ್ಭ ಕೋಶದ ಸಮಸ್ಯೆ ಎದುರಾಗಿತ್ತು. ಇನ್ನೊಂದು ಕಡೆ ರಂಜಿತಾಳ ಅಕ್ಕ, ಮದುವೆ ಬಳಿಕ ಅಮೆರಿಕಾದಲ್ಲಿ ಇದ್ದರು. ಅಕ್ಕ ನಿತ್ಯಾನಂದನ ಭಕ್ತೆಯಾಗಿದ್ದರು. ಅಕ್ಕನೊಂದಿಗೆ ನಿತ್ಯಾನಂದನ ಆಶ್ರಮಕ್ಕೆ ಹೋಗಿದ್ದರು. ಅಲ್ಲಿವರೆಗೂ ಆಧ್ಯಾತ್ಮದ ಬಗ್ಗೆ ನಂಬಿಕೆನೇ ಇರದ ರಂಜಿತಾಗೆ ನಿತ್ಯಾನಂದನ ಭೇಟಿ ಬಳಿಕ ಒಲವು ಮೂಡುವುದಕ್ಕೆ ಶುರುವಾಗಿತ್ತು. ಬಳಿಕ ರಂಜಿತಾ ಹಾಗೂ ಅವರ ಅಕ್ಕ ನಿರ್ಮಲಾ ಇಬ್ಬರೂ ವಿಚ್ಛೇದನ ಪಡೆದು ನಿತ್ಯಾನಂದನ ಭಕ್ತೆಯಾದರು ಎಂದು ಅಶೋಕ್ ಕುಮಾರ್ ಯೂಟ್ಯೂಬ್ ಚಾನೆಲ್‌ಗೆ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಅಶೋಕ್ ಅವರು ಮೂವರು ಮಕ್ಕಳನ್ನು ಚೆನ್ನಾಗಿ ಓದಿಸಿದೆ. ಅವರು ಇಷ್ಟಪಟ್ಟವರ ಜೊತೆ ಮದುವೆ ಮಾಡಿಕೊಟ್ಟೆ. ಮೊದಲನೇ ಮಗಳು ಮದುವೆ ಆಗಿ ಅಮೆರಿಕಾ(America)ದಲ್ಲಿ ಇದ್ದಳು. ಅವಳು ಆಗಾಗ ನಿತ್ಯಾನಂದ(Nityananda) ಸ್ವಾಮಿ ಆಶ್ರಮಕ್ಕೆ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ನನ್ನ 2ನೇ ಮಗಳು ರಂಜಿತಾ(Ranjita) ಹೋಗಲು ಆರಂಭಿಸಿದ್ದಳು. ಈಗ 2ನೇ ಮಗಳು ರಂಜಿತಾ, ನಿತ್ಯಾನಂದ ಸ್ವಾಮಿ ಜೊತೆ ಇದ್ದಾಳೆ. ರಂಜಿತಾ ಹಾಗೂ ನಿತ್ಯಾನಂದ ಸ್ವಾಮಿ ನಡುವಿನ ರಿಲೇಷನ್‌ಶಿಪ್(Relationship) ಏನು ಅನ್ನೋದು ಗೊತ್ತಿಲ್ಲ. ಆದರೆ ಆ ಫೋಟೊಗಳನ್ನು ನೋಡಿದರೆ ಏನು ಹೇಳಬೇಕು ಎನ್ನುವುದು ಅರ್ಥವಾಗ್ತಿಲ್ಲ” ಎಂದಿದ್ದಾರೆ.

ನನ್ನು ಮಕ್ಕಳು ಹೀಗೆ ಮನೆ ಬಿಟ್ಟು ನಿತ್ಯಾನಂದನ ಆಶ್ರಮ ಸೇರಿದ್ದು ನೋಡಿ ಒಮ್ಮೆ ಅಲ್ಲಿಗೆ ಹೋಗಿ ಗಲಾಟೆ ಮಾಡಿದ್ದೆ. ನನ್ನ ಮಕ್ಕಳು ಇಲ್ಲಿ ಯಾಕೆ ಇದ್ದಾರೆ? ಅವರನ್ನು ಕಳುಹಿಸಿ ಕೊಡು ಎಂದು ಕೇಳಿದ್ದೆ. ಅದಕ್ಕೆ ಆತನ ಅವರು ಬಂದರೆ ಕರೆದುಕೊಂಡು ಹೋಗು ಎಂದ. ಕರೆದರೆ ಅವರು ಬರಲಿಲ್ಲ. ನನ್ನ ಇಬ್ಬರು ಹೆಣ್ಣು ಮಕ್ಕಳು ಇವತ್ತಿಗೂ ಆತನೊಟ್ಟಿಗೆ ಇದ್ದಾರೆ. ಇಂದಿಗೂ ನನ್ನ ಆ ಇಬ್ಬರೂ ಮಕ್ಕಳು ಕರೆ ಮಾಡಲಿಲ್ಲ. ನಮ್ಮ 3ನೇ ಮಗಳು ನನ್ನನ್ನೂ ನೋಡಿಕೊಳ್ತಿದ್ದಾರೆ. ಇಬ್ಬರು ಮಕ್ಕಳು ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರು ಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ:New Parliament building Inauguration Row: 19 ಪಕ್ಷಗಳಿಂದ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಭಹಿಷ್ಕಾರ: ನಾವು ಭಾಗವಹಿಸುತ್ತೇವೆ ಎಂದ್ವು ಆ 2 ಪಕ್ಷಗಳು

Leave A Reply

Your email address will not be published.