New Parliament Building: ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕೆಂದು ಕೋರಿದ ಅರ್ಜಿಗೆ ಹಿನ್ನಡೆ, ಅರ್ಜಿದಾರರಿಗೆ ಮತ್ತು ಬಾಯ್ಕಾಟ್ ಮಾಡಿದ 19 ಪ್ರತಿಪಕ್ಷಗಳಿಗೆ ಮುಖಭಂಗ

New Parliament Building inauguration application cancelled

New Parliament Building: ನೂತನ ಸಂಸತ್ ಭವನದ ಉದ್ಘಾಟನೆಯನ್ನು ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡುವಂತೆ ಲೋಕಸಭೆಯ ಸೆಕ್ರೆಟರಿಯೇಟ್‌ಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಅರ್ಜಿದಾರರಿಗೆ ಛೀಮಾರಿ ಹಾಕಿ ಕಳಿಸಿದೆ ಸುಪ್ರೀಂ ಕೋರ್ಟ್. ಆದರೆ ಅರ್ಜಿ ಹಾಕಿದ ಅವರಿಗೆ ದಂಡ ಹಾಕದೆ ಔದಾರ್ಯ ತೋರಿದೆ.

 

“ನೀವು ಎಂತಹಾ ಅರ್ಜಿಗಳನ್ನು ಏಕೆ ಸಲ್ಲಿಸುತ್ತೀರಿ ಎಂಬುದು ನಮಗೆ ತಿಳಿದಿದೆ, ಇದನ್ನು ಪರಿಗಣಿಸಲು ನಾವು ಒಲವು ತೋರುತ್ತಿಲ್ಲ” ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿದೆ. “ನಾವು ನಿಮ್ಮ ಮೇಲೆ ಫೈನ್ ಹಾಕುತ್ತಿಲ್ಲ, ಅದಕ್ಕಾಗಿ ಕೃತಜ್ಞರಾಗಿರಿ” ಎಂದು ಪೀಠವು ಖಾರವಾಗಿ ಹೇಳಿದೆ. ಈ ಮೂಲಕ ನೂತನ ಸಂಸತ್ ಭಾವನವನ್ನು (New Parliament Building) ರಾಷ್ಟ್ರಪತಿಯವರು ಮಾತ್ರ ಉದ್ಘಾಟಿಸಬೇಕು, ಬದಲಿಗೆ ನರೇಂದ್ರ ಮೋದಿಯವರಲ್ಲ ಎಂದು ಹಠಕ್ಕೆ ಬಿದ್ದು ಉದ್ಘಾಟನಾ ಸಮಾರಂಭವನ್ನು ಬಾಯ್ಕಾಟ್ ಮಾಡಿರುವ 19 ವಿವಿಧ ವಿರೋಧ ಪಕ್ಷಗಳ ನಿರ್ಧಾರಕ್ಕೆ ತೀವ್ರ ಹಿನ್ನಡೆಯಾಗಿದೆ.

ನ್ಯಾಯವಾದಿ ಜಯ ಸುಕಿನ್‌ ಎಂಬುವರು ಈ ಬಗ್ಗೆ ದಾವೆ ಹೂಡಿದ್ದರು. ಮೇ 18 ರಂದು ಲೋಕಸಭೆಯ ಸೆಕ್ರೆಟರಿ ಜನರಲ್‌ ಬಿಡುಗಡೆ ಮಾಡಿರುವ ಆಹ್ವಾನ ಪತ್ರಿಕೆ ದೇಶದ ಸಂವಿಧಾನದ ಸ್ಪಷ್ಟ ಉಲ್ಲಂಘನೆ. ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆ ಮತ್ತು ಅವರು ಸಂಸತ್‌ ನ ಮುಖ್ಯಸ್ಥರು. ದೇಶಕ್ಕೆ ಸಂಬಂಧಿಸಿದಂತೆ ಎಲ್ಲಾ ನಿರ್ಧಾರಗಳನ್ನು ರಾಷ್ಟ್ರಪತಿಗಳ ಹೆಸರಿನಲ್ಲಿಯೇ ಕೈಗೊಳ್ಳಲಾಗುತ್ತದೆ. ಆದುದರಿಂದ ನೂತನ ಸಂಸದ್ಭವವನ್ನು ರಾಷ್ಟ್ರಪತಿಯವರು ಉದ್ಘಾಟಿಸಬೇಕು ಈಗ ಪ್ರಾಯೋದಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಭಾರತದ ಸಂವಿಧಾನದ 79ನೇ ವಿಧಿಯ ಅನ್ವಯ ರಾಷ್ಟ್ರಪತಿಗಳು ಸಂಸತ್‌ನ ಅವಿಭಾಜ್ಯ ಅಂಗ. ಹೀಗಾಗಿ ಉದ್ಘಾಟನಾ ಕಾರ್ಯಕ್ರಮದಿಂದ ಅವರನ್ನು ದೂರ ಇರಿಸುವಂತೆ ಇಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭೆಯ ಕಾರ್ಯಾಲಯಕ್ಕೆ ಹೊಸ ಸಂಸತ್‌ ಭವನವನ್ನು ರಾಷ್ಟ್ರಪತಿಗಳಿಂದ ನಡೆಸಲು ನಿರ್ದೇಶನ ನೀಡಬೇಕು ಎಂದು ಅಲ್ಲಿನ ಮನವಿ ಮಾಡಿಕೊಳ್ಳಲಾಗಿತ್ತು. 20 ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧಾರ ಮಾಡಿರುವಂತೆಯೇ ಈ ಬೆಳವಣಿಗೆ ನಡೆದಿದೆ.

 

ಇದನ್ನು ಓದಿ:  Golden walking stick gifted to Neharu: ಐತಿಹಾಸಿಕ ರಾಜದಂಡ ಮೊದಲ ಪ್ರಧಾನಿಗಳ ‘ಚಿನ್ನದ ವಾಕಿಂಗ್ ಸ್ಟಿಕ್’ ಆಗಿತ್ತಾ? ನೂತನ ಸಂಸತ್ತಲ್ಲಿ ಕಂಗೊಳಿಸೋ ಸೆಂಗೋಲನ್ನು ನೆಹರು ಅವರ ‘ಚಿನ್ನದ ಊರುಗೋಲು’ ಮಾಡಿದ್ಯಾರು? 

Leave A Reply

Your email address will not be published.