Pavithra Lokesh – Naresh: ‘ಇಂತಹ ಸುಂದರ ಹುಡುಗೀನ ನೋಡಿದ್ರೆ ತನ್ನ ಬೆಡ್‌ರೂಮ್‌ನಲ್ಲಿ ಇದ್ದರೆ ಚೆನ್ನಾಗಿರುತ್ತೆ ಅನ್ಸತ್ತೆ…’ – ಪವಿತ್ರಾ ಲೋಕೇಶ್ ಲವ್ ಕೆಮಿಸ್ಟ್ರಿ ಬಗ್ಗೆ ನರೇಶ್ ಬಿಂದಾಸ್ ಮಾತು !
Naresh reveals how his and pavitra love chemistry led to till date

Pavithra Lokesh – Naresh: ಪವಿತ್ರಾಳಂತ ಸುಂದರಿ ನನ್ನ ಬೆಡ್‌ರೂಮ್‌ನಲ್ಲಿ ಇರ್ಬೇಕು ಅಂತ ಅವತ್ತು…… ಪ್ರಪೋಸ್ ಮಾಡಿದ ದಿನ ಮೈ ನಡುಕ ಬಂದಿತ್ತು ….!!!

ನರೇಶ್ ಹಾಗೂ ಪವಿತ್ರಾ ಲೋಕೇಶ್ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇರೋದಾಗಿ ಒಪ್ಪಿಕೊಂಡಿದ್ದಾರೆ. ಅವರಿಬ್ಬರ ಮದುವೆಯಾಗಿಲ್ಲ ಅಷ್ಟೇ ಮದುವೆಯಾಗದೇ ಇದ್ದರೂ ಗಂಡ ಹೆಂಡತಿಯರಂತೆ ಸಹಜೀವನ ಸಹ ಸಂಸಾರ ಮಾಡುತ್ತಿದ್ದಾರೆ. ಈ ‘ಮಳ್ಳಿ ಪೆಳ್ಳಿ’ ಸಿನಿಮಾ ರಿಲೀಸ್ ಆಗ್ತಿದೆ. ಸಿನಿಮಾ ಪ್ರಮೋಷನ್ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದೀಗ ತಮ್ಮ ಲವ್ ಸ್ಟೋರಿ ಹೇಗೆ ಶುರುವಾಯಿತು ಎಂದು ಹೇಳಿದ್ದಾರೆ. ಆ ವಿಷಯ ತುಂಬಾ ಇಂಟರೆಸ್ಟಿಂಗ್ ಆಗಿರುವ ಕಾರಣ ನಿಮ್ಮೊಂದಿಗೆ ಅದನ್ನು ಹಂಚಿಕೊಳ್ಳುತ್ತಿದ್ದೇವೆ.
ನರೇಶ್ ಇಬ್ಬರಿಗೆ ಡಿವೋರ್ಸ್ ಕೊಟ್ಟು 3ನೇ ಮದುವೆ ಆಗಿ, ಈಗ 3 ನೇ ಪತ್ನಿ ರಮ್ಯಾ ರಘುಪತಿಯಿಂದಲೂ ದೂರಾಗಿ ಈಗ ಪವಿತ್ರಾ ಲೋಕೇಶ್ (Pavithra Lokesh – Naresh) ಜೊತೆಗಿದ್ದಾರೆ. ಇತ್ತ ಪವಿತ್ರಾ ಲೋಕೇಶ್ ಕೂಡ ಇಬ್ಬರಿಂದ ದೂರಾಗಿ ನರೇಶ್ ಜೊತೆ ಸಂಸಾರ ಶುರು ಮಾಡಿಕೊಂಡಿದ್ದಾರೆ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಬೇರೆ ಇದೆ. ಹಾಗಿದ್ದರೂ ನಿಮ್ಮ ನಡುವೆ ಅದು ಹೇಗೆ ಪ್ರೀತಿ ಹುಟ್ಟಿತು ? ಈ ವಯಸ್ಸಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದೇಗೆ ಎನ್ನುವ ಸುದ್ದಿಗಾಗಿ ನರೇಶ್ ಪವಿತ್ರ ಅಭಿಮಾನಿಗಳು ಮತ್ತು ಮಾಧ್ಯಮಗಳು ಕಾದು ಕುಳಿತಿದ್ದವು ಇದೀಗ ಒಂದೊಂದಾಗಿ ಆ ವಿವರಗಳು ಸಿಗುತ್ತಿದ್ದು ಹೆಚ್ಚಿನ ಮಾಹಿತಿಗಳನ್ನು ಈ ವಾರವೇ ರಿಲೀಸ್ ಆಗುತ್ತಿರುವ ‘ಮಳ್ಳಿ ಪೆಳ್ಳಿ ‘ ಚಿತ್ರದಲ್ಲಿ ಕೊಡಲಾಗಿದೆಯಂತೆ. ಅವರ ನಿಜಜೀವನದ ಕಥೆಯನ್ನೇ ‘ಮಳ್ಳಿ ಪೆಳ್ಳಿ’ ಚಿತ್ರದಲ್ಲಿ ಹೇಳ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನರೇಶ್ ಮಾಜಿ ಪತ್ನಿ ರಮ್ಯಾರಘುಪತಿ ಅವರನ್ನು ಕೂಡ ಟಾರ್ಗೆಟ್ ಆಗಿದ್ದಾರೆ ಅನ್ನದೋಚಿತದ ಟ್ರೈಲರ್ ನೋಡಿದವರಿಗೆ ಗೊತ್ತಾಗುತ್ತದೆ. ಆದರೆ ಚಿತ್ರ ಈ ವಾರವೇ ಬಿಡುಗಡೆಯಾಗಲಿರುವ ಕಾರಣ ಚಿತ್ರದ ಅಸಲಿ ಕಥೆ ಇನ್ನೆರಡು ದಿನಗಳಲ್ಲಿ ಬಹಿರಂಗವಾಗಲಿದೆ.
ಪರಿಚಯ ಶುರುವಾಗಿದ್ದೇಗೆ ಗೊತ್ತೇ?
ತೆಲುಗು ಸಂದರ್ಶನವೊಂದರಲ್ಲಿ ತಮ್ಮ ಲವ್ ಸ್ಟೋರಿಯನ್ನು ನರೇಶ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ” ನಾವು ಬಹಳ ವರ್ಷಗಳ ಹಿಂದೆ ‘ಆಲಯಂ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಮೊದಲ ಬಾರಿ ಭೇಟಿ ಆಗಿದ್ದೆವು. ಆ ಸಮಯದಲ್ಲಿ ಪವಿತ್ರ ನನ್ನೊಟ್ಟಿಗೆ ಮಾತನಾಡಲಿಲ್ಲ. ಈ ಹುಡುಗಿಗೆ ತುಂಬಾ ಅಹಂಕಾರ ಎಂದುಕೊಂಡು ನಾನು ಸುಮ್ಮನಾಗಿದ್ದೆ. ಆನಂತರ 10 ವರ್ಷಗಳೇ ಕಳೆದಿವೆ. ನಂತರ ‘ಹ್ಯಾಪಿ ವೆಡ್ಡಿಂಗ್’ ಸಿನಿಮಾ ಚಿತ್ರೀಕರಣದ ಸಂದರ್ಭ ನಾವಿಬ್ಬರೂ ಭೇಟಿ ಆಗಿದ್ದೆವು. ಆಗ ಪವಿತ್ರಾ ನನ್ನೊಟ್ಟಿಗೆ ಚೆನ್ನಾಗಿ ಮಾತನಾಡಿದಳು. ನನ್ನ ಬಗ್ಗೆ ಕೂಡಾ ಸಾಕಷ್ಟು ವಿಚಾರ ಗಳನ್ನು ತಿಳಿದುಕೊಂಡರು. ನನಗೆ ತುಂಬಾನೇ ಆಶ್ಚರ್ಯವಾಯಿತು. ಈ ಹುಡುಗಿ ಚೆನ್ನಾಗಿದ್ದಾಳೆ ಅಂತ ಅನ್ನಿಸಿತು. ಈಕೆ ಸುಂದರವಾಗಿದ್ದಾಳೆ, ಪಾಸಿಟಿವ್ ಎನರ್ಜಿ ಇದೆ ಅನ್ನಿಸ್ತು. ಆದ್ರೆ ನಂತರ ಮತ್ತೆ ನಾವು ಮಾತನಾಡಲಿಲ್ಲ. ಮತ್ತೆ ಸದ್ಯಕ್ಕೆ ಸಿಗೋ ಅವಕಾಶ ಸಿಗಲಿಲ್ಲ. ನಂತರ ‘ಸಮ್ಮೋಹನಂ’ ಸಿನಿಮಾ ಚಿತ್ರೀಕರಣದಲ್ಲಿ ನಮ್ಮ ಭೇಟಿ ಆಯ್ತು.” ಎಂದಿದ್ದಾರೆ ನರೇಶ್.

ನಿನ್ನ ಸ್ಮೈಲ್ ಚೆನ್ನಾಗಿದೆ ಎಂದೆ, ಆಕೆಗೆ ಅದು ಕೇಳಿದ್ದೇ ಬೇರೆ ರೀತಿ !
” ಅಂದು ಸಮ್ಮೋಹನ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ವಿಪರೀತ ಸೆಖೆಯ ಕಾರಣ ಶೂಟಿಂಗ್ ಸಮಯದಲ್ಲಿ ಆಕೆ ಚಿಕ್ಕ ಫ್ಯಾನ್ ಕೈಲಿ ಹಿಡಿದು ಕೂತಿದ್ದಳು. ನಿನ್ನ ಸ್ಮೈಲ್ (ನಗು) ಚೆನ್ನಾಗಿದೆ ಎಂದು ನಾ ಹೇಳಿದೆ. ಈ ಬಾರಿ ಓಪನ್ ಆಗಿ ಮಾತಾಡಿದ್ದೆ ನಾನು. ಆಗ ಆಕೆ ತಾನು ಬಳಸುವ ಪರ್ಫ್ಯೂಮ್ ಹೆಸರು ಹೇಳಿದಳು. ಇದ್ಯಾಕೆ ಹೀಗೆ, ನಗು ಚೆನ್ನಾಗಿದೆ ಅಂದಾಗ ಪರ್ಫ್ಯೂಮ್ ಹೆಸರು ಹೇಳ್ತಿದ್ದಾಳೆ ಇವ್ಳು ಅನ್ಕೊಂಡೆ. ಆಮೇಲೆ ಗೊತ್ತಾಯ್ತು: ನನ್ನ ಮಾತು ಆಕೆಗೆ ಸ್ಮೆಲ್ ಅಂತ ಕೇಳಿಸಿತ್ತು ಎಂದು. ಆಗ ನಾನು ಇನ್ನಷ್ಟು ಮುಂದುವರಿದು, ‘ ನಾನು ಹೇಳಿದ್ದು ಅದಲ್ಲ, ನಿಮ್ಮ ಸ್ಮೈಲ್ ಚೆನ್ನಾಗಿದೆ ‘ ಎಂದು ಹೇಳಿದ್ದೆ. ಆಕೆ ಒಂದು ಸ್ಮೈಲ್ ಕೊಟ್ಟಿದ್ದಳು.”
” ಆ ನಂತರ ಇನ್ನೊಂದು ದಿನ ಕಿಚನ್‌ನಲ್ಲಿ ಶೂಟಿಂಗ್ ಮಾಡೋ ಸಂದರ್ಭ. ಅಲ್ಲಿ ಕಿಚನ್ ನಲ್ಲಿರುವಾಗ ಆಕೆಯ ಒಳ್ಳೆತನ, ನಡವಡಿಕೆ ನೋಡಿ ಇಂತಹ ಹುಡುಗಿ ನನ್ನ ಅಡುಗೆ ಮನೆಯಲ್ಲಿ ಇದ್ದರೆ ಚೆನ್ನಾಗಿರುತ್ತದೆ ಎಂದುಕೊಂಡೆ. ಮೈ ಪುಳಕ ಆಗಿತ್ತು. ‘ ಸಾಮಾನ್ಯವಾಗಿ ಇಂತಹ ಸುಂದರ ಹುಡುಗಿಯನ್ನು ನೋಡಿದರೆ ತನ್ನ ಬೆಡ್‌ರೂಮ್‌ನಲ್ಲಿ ಇದ್ದರೆ ಚೆನ್ನಾಗಿರುತ್ತದೆ ‘ ಎಂದು ಅನಿಸುತ್ತದೆ. ಆದರೆ ನನಗೆ ಆಗ ಹಾಗೆ ಅನ್ನಿಸಲಿಲ್ಲ, ಅಡುಗೆ ಮನೆಯಲ್ಲಿದ್ದರೆ ಚೆಂದ ಎನಿಸಿತ್ತು ” ಎನ್ನುವ ಗುಟ್ಟು ರಟ್ಟು ಮಾಡಿದ್ದಾರೆ ನರೇಶ್.
” ಅಂದೇ ಮನಸ್ಸು ಪವಿತ್ರ ಲೋಕೇಶ್ ಕಡೆಗೆ ವಾಲಿತ್ತು. ಅದೇ ಸಮಯದಲ್ಲಿ ನನ್ನ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸುತ್ತಿದ್ದೆ. ಇಂತಹ ಸುಂದರ ಒಳ್ಳೆಯ ಹುಡುಗಿ ತನ್ನ ಮನೆಯಲ್ಲಿ ಇದ್ದರೆ ಎಷ್ಟು ಚೆನ್ನಾಗಿರುತ್ತೆ ಎನ್ನುವ ಫೀಲಿಂಗ್ ನಂಗೆ ಬಂತು. ಹಿಂದೊಮ್ಮೆ ಆಕೆ ನಾನು ತುಂಬಾ ಚೆನ್ನಾಗಿ ಅಡುಗೆ ಮಾಡ್ತೀನಿ ಅಂತ ಕೂಡ ಹೇಳಿದ್ದಳು. ಹಾಗೆ ಕಿಚನ್ ನಲ್ಲಿ ಮನಸ್ಸು ಕನೆಕ್ಟ್ ಆಗಿತ್ತು. ಆ ನಂತರ ಒಂದು ದಿನ ಒಂದು ಮೆಸೇಜ್ ಮಾಡಿದ್ದೆ. ಅತ್ತಲಿಂದ ಯಾಕೋ ರಿಪ್ಲೇ ಬರಲಿಲ್ಲ. ಇದ್ಯಾಕೋ ಬಹಳ ವಿಚಿತ್ರ ಅನ್ನಿಸಿತು. ನಾನು ಸುಮ್ಮನಿದ್ದೆ. ಇದರ ಮಧ್ಯೆ ಮತ್ತೆ 6 ತಿಂಗಳ ಗ್ಯಾಪ್. ನಂತರ ಒಂದು ದಿನ ಬೆಂಗಳೂರಿನಲ್ಲಿ ಭೇಟಿ ಆಗೋ ಅವಕಾಶ. ‘ಶೂಟಿಂಗ್‌ಗಾಗಿ ಬಂದಿದ್ದೇನೆ, ಭೇಟಿ ಆಗೋಣ ಅಂದರೆ ಆಕೆ ಓಕೆ ಅನ್ನಬೇಕಾ ?ಆ ದಿನ ಹಾಗೆ ಕಾಫಿ ಶಾಪ್‌ನಲ್ಲಿ ಭೇಟಿ ಆಗಿದ್ದೆವು. ಅಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೆ ನಿರಂತರ ಮಾತನಾಡಿದ್ದೆವು. ನಕ್ಕಿದ್ದೆವು. ಆ ದಿನ ನಾವು ಸರಿಯಾಗಿ ಕನೆಕ್ಟ್ ಆದ್ವಿ”
ಡಿನ್ನರ್ ಹೋಗಿದ್ದಾಗ ಪ್ರಪೋಸ್
“ಮತ್ತೆ ಒಂದು ಚಿತ್ರೀಕರಣದಲ್ಲಿ ಭೇಟಿ ಆಗಿದ್ದೆವು. ಆಗಲೇ ನನಗೆ ಲವ್ ಹುಟ್ಟಿತ್ತು, ಈಕೆ ನನಗೆ ಸರಿಯಾದ ಜೋಡಿ ಎಂದು ಅನ್ನಿಸಿತ್ತು. ಡಿನ್ನರ್‌ಗೆ ಕರೆದುಕೊಂಡಿ ಹೋಗಿ ಊಟ ಮಾಡಿದ ಮೇಲೆ ‘ ಐ ಲವ್ ಯು ‘ ಅಂದಿದ್ದೆ. ಆದರೆ ಪವಿತ್ರಾ ಯಾಕೋ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ನನ್ನೊಳಗೆ ನಡುಕ ಶುರುವಾಯಿತು. ಇರುವ ಫ್ರೆಂಡ್‌ಶಿಪ್ ಕೂಡ ಖತಮ್ ಆಗಿ ಹೋಗುತ್ತೆ ಎನ್ನಿಸಿತ್ತು. ಅಲ್ಲಿಂದ ಕಾರು ಹತ್ತಿದ ಮೇಲೆ ಕೂಡ ಆಕೆ ಸೈಲೆಂಟ್ ಆಗಿಯೇ ಇದ್ದಳು. ಅಲ್ಲಿಂದ ಕಾರಿಳಿದು ಹೋಟೆಲ್ ಒಳಗೆ ಹೋಗುವಾಗ ಅದೇ ಸೈಲೆನ್ಸ್. ನಂಗೆ ಕಷ್ಟ ಆಗ್ತಿತ್ತು.”
‘ಕೀಪ್ ಲವಿಂಗ್ ಮೀ’ !!
“ಕೊನೆಗೆ ನಾನೇ ಮೌನ ಮುರಿದು ‘ ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ’ ಎಂದು ಕೇಳಿದ್ದೆ. ಆಕೆ ವಾಪಸ್ ಬಂದು ‘ಕೀಪ್ ಲವಿಂಗ್ ಮೀ’ ಎಂದು ಹೇಳಿ ಹೋದಳು. ನನಗೆ ಅಂದು ಇಡೀ ದಿನ ನಿದ್ರೆ ಬರಲಿಲ್ಲ. ಆಕೆ ಹೇಳಿದ ಮಾತಿಗೆ ಅರ್ಥ ಏನು ಎನ್ನುವುದೇ ಗೊತ್ತಾಗಲಿಲ್ಲ. ಒಳಗೊಳಗೇ ತಳಮಳ, ಜತೆಗೆ ಖುಷಿ ಬೇರೆ. ಮರುದಿನ ಬೆಳಗ್ಗೆ ಬೆಳಗ್ಗೆಯೇ ಶೂಟಿಂಗ್ ಇತ್ತು. ಅಲ್ಲಿ ಚಿತ್ರೀಕರಣಕ್ಕೆ ಬಂದರೆ, ಆಕೆ ತನಗೇನೂ ಗೊತ್ತೇ ಇಲ್ಲ, ಏನೂ ನಡೆದೇ ಇಲ್ಲ ಎನ್ನುವಂತೆ ಮಾತನಾಡಿದ್ದಳು. ಕೊನೆಗೆ, ನಾನು ಇಂಗ್ಲೀಷ್‌ನಲ್ಲಿ ಒಂದು ಕವನ ಬರೆದಿದ್ದೆ. ಅದನ್ನು ಕೊಟ್ಟರೆ, ಆಕೆ ಕವನ ಕೇಳಿ ಕೋಪದಿಂದ ನನ್ನತ್ತ ನೋಡಿದ್ದಳು. ನಾನು ಸುಮ್ಮನಾಗಿದ್ದೆ.”
ಹೊಸ ವರ್ಷ ಹೊತ್ತು ತಂತು ‘ಐ ಲವ್ ಯು’!
ಕೊನೆಗೆ ಅದೇ ದಿನ ಸೆಟ್‌ನಲ್ಲಿ, ಇಂದ್ರಗಂಟಿ ಮೋಹನಕೃಷ್ಣ ಉಪಸ್ಥಿತಿಯಲ್ಲಿ ಎಲ್ಲರೂ ಸೆಟ್‌ನಲ್ಲಿ ಇರುವಾಗ ಪವಿತ್ರಾ ಲೋಕೇಶ್ ಕೈ ಹಿಡಿದು ಕೇಳಿದ್ದೆ. ಆಗ ಕೂಡ ಪವಿ ರಿಯಾಕ್ಟ್ ಮಾಡಲಿಲ್ಲ. ನಂತರ, ಹೊಸ ವರ್ಷ ಬಂದಿತ್ತು. ಡಿಸೆಂಬರ್ 31ರಂದು ಹೊಸವರ್ಷದ ಶುಭಾಶಯ ಕೋರೋನಾ ಅಂತ ಕೇಕ್, ಬೊಕೆ ಎತ್ತಿಕೊಂಡು ಹೋಗಿದ್ದೆ. ‘ ಈಗಲಾದರೂ ಹೇಳು ಎಂದಾಗ, ಆಕೆಯ ತುಟಿ ಬಿರಿದಿದ್ದವು. ಆಗ ಪವಿತ್ರಾ ಲೋಕೇಶ್ (Pavithra Lokesh – Naresh) ತಮಗೆ ‘ಐ ಲವ್ ಯು’ ಹೇಳಿದ್ದಳು ಎಂದು ನರೇಶ್ ವಿವರಿಸಿದ್ದಾರೆ. ಒಟ್ಟಾರೆ ಪವಿತ್ರ ಲೋಕೇಶ್ ಮತ್ತು ನರೇಶ್ ಲವ್ ಸ್ಟೋರಿ ದಿನದಿಂದ ದಿನಕ್ಕೆ ಫುಲ್ ಆಗುತ್ತಿದೆ. ಅವರಿಬ್ಬರ ಮತ್ತೆ ಮದುವೆ (ಮಳ್ಳಿ ಪೆಳ್ಳಿ) ಚಿತ್ರದಲ್ಲಿ ಮೂಡಿ ಬರಬಹುದಾದ ಕೆಮಿಸ್ಟ್ರಿ ಬಯಾಲಜಿಗಾಗಿ ಸಿನಿ ರಸಿಕರು ಕಾದು ಕೂತಿದ್ದಾರೆ.
ಇದನ್ನು ಓದಿ: New Parliament Building: 26,045 ಟನ್ ಉಕ್ಕು ಬೆರೆಸಿ ಕಟ್ಟಿದ ಹೊಸ ಸಂಸತ್ ಕಟ್ಟಡದ ಇನ್ನಷ್ಟು ಇಂಟರೆಸ್ಟಿಂಗ್ ಮಾಹಿತಿ