BSNL 5G: ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ! ಶೀಘ್ರದಲ್ಲಿ BSNL 5G ನೆಟ್ವರ್ಕ್!
BSNL 5G network coming soon
BSNL 5G: ಟೆಲಿಕಾಂ ನಲ್ಲಿ ಹಲವಾರು ಖಾಸಗಿ ಕಂಪನಿಗಳಿವೆ ಆದರೆ ಇವೆಲ್ಲದಕ್ಕೆ ಪೈಪೋಟಿ ನೀಡುವಂತಹ ಸರ್ಕಾರಿ ಕಂಪನಿಯೆಂದರೆ ಬಿಎಸ್ಎನ್ಎಲ್ ಕಂಪನಿ ಆಗಿದೆ. ಸದ್ಯ ಬಿಎಸ್ಎನ್ಎಲ್ ನ (BSNL 5G) 4ಜಿ ನೆಟ್ ವರ್ಕ್ 2023ರ ಕೊನೆಯ ವೇಳೆಗೆ 5ಜಿಗೆ ಮಾರ್ಪಡಲಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಮುಖ್ಯವಾಗಿ ಬಿಎಸ್ಎನ್ಎಲ್ ಈಗಾಗಲೇ ಟಿಸಿಎಸ್ ಮತ್ತು ಐಟಿಐ ಲಿಮಿಟೆಡ್ ಜತೆಗೆ 4ಜಿ ನೆಟ್ ವರ್ಕ್ ಅಳವಡಿಕೆಗೆ ಸಂಬಂಧಿಸಿ 19,000 ಕೋಟಿ ರೂ.ಗಳ ಖರೀದಿ ಆರ್ಡರ್‌ಗೆ ಮುಂಗಡವನ್ನು ನೀಡಿದೆ (advance purchase order) ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ
ಹೌದು, ಬಿಎಸ್ಎನ್ಎಲ್ ಕಂಪನಿಯು ಪಂಜಾಬ್-ಫಿರೋಜ್‌ಪುರ್, ಪಠಾಣ್ ಕೋಟ್ ಮತ್ತು ಅಮೃತ್‌ಸರದಲ್ಲಿ 200 ಟವರ್‌ಗಳ ಸ್ಥಳಗಳಲ್ಲಿ 4ಜಿಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಮೂರು ತಿಂಗಳ ಕಾಲ ನಡೆಯಲಿದೆ. ಬಳಿಕ ದಿನಕ್ಕೆ 200 ಸೈಟ್ಸ್‌ಗಳ ಲೆಕ್ಕದಲ್ಲಿ 4ಜಿ ನೆಟ್ ವರ್ಕ್ ವಿಸ್ತರಣೆಯಾಗಲಿದೆ. ಹಾಗೂ ನವೆಂಬರ್-ಡಿಸೆಂಬರ್ ವೇಳೆಗೆ 5ಜಿಗೆ ಅಪ್‌ಗ್ರೇಡ್ ಆಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಇನ್ನು ಭಾರತದ ಟೆಲಿಕಾಂ ತಂತ್ರಜ್ಞಾನವನ್ನು ಅಮೆರಿಕಕ್ಕೂ ಪ್ರಸ್ತುತ ರಫ್ತು ಮಾಡಲಾಗುತ್ತಿದೆ. 18 ದೇಶಗಳು ಭಾರತದ 4ಜಿ ಮತ್ತು 5ಜಿ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದ್ದು, ದೇಶ ದೂರಸಂಪರ್ಕ ತಂತ್ರಜ್ಞಾನದಲ್ಲಿ ಬೆಳೆಯುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸದ್ಯ ಬಿಎಸ್ಎನ್ಎಲ್ ನೆಟ್ ವರ್ಕ್ ಆರಂಭದಲ್ಲಿ 4ಜಿಯಲ್ಲಿ ಇರಲಿದ್ದು, ಬಳಿಕ ನವೆಂಬರ್-ಡಿಸೆಂಬರ್ ವೇಳೆಗೆ ಸಾಫ್ಟ್‌ವೇರ್‌ನಲ್ಲಿ ಸಣ್ಣ ಬದಲಾವಣೆಯೊಂದಿಗೆ 5ಜಿಗೆ ಅಪ್‌ಡೇಟ್ ಆಗಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Mangaluru News: ಮುಖ್ಯಮಂತ್ರಿಗಳೇ, ನಾನಿದ್ದ ಇಲಾಖೆಯಿಂದಲೇ ತನಿಖೆ ಪ್ರಾರಂಭಿಸಿ- ಕೋಟ ಶ್ರೀನಿವಾಸ ಪೂಜಾರಿ ಸವಾಲು