Home Breaking Entertainment News Kannada Vaibhavi Upadhyaya Death: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಮೃತ್ಯು!!

Vaibhavi Upadhyaya Death: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಮೃತ್ಯು!!

Vaibhavi Upadhyaya Death
Image source: ವಿಜಯ ಕರ್ನಾಟಕ

Hindu neighbor gifts plot of land

Hindu neighbour gifts land to Muslim journalist

Vaibhavi Upadhyaya Death : ಮಂಗಳವಾರ ಭಾವಿ ಪತಿಯ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು (Car) ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದ ಪರಿಣಾಮ ಹಿಂದಿಯ ‘ಸಾರಾಭಾಯ್ vs ಸಾರಾಭಾಯ್​’ ಧಾರಾವಾಹಿ ಖ್ಯಾತಿಯ ನಟಿ ವೈಭವಿ ಉಪಾಧ್ಯಾಯ (32) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ (Vaibhavi Upadhyaya Death).

ಹಿಮಾಚಲ ಪ್ರದೇಶದಲ್ಲಿ (Himachal Pradesh) ಪ್ರವಾಸದಲ್ಲಿದ್ದ ನಟಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭಾವಿ ಪತಿಯ ಜೊತೆ ತೆರಳುತ್ತಿದ್ದ ನಟಿಯ ಕಾರು ತಿರುವಿನಲ್ಲಿ ನಿಯಂತ್ರಣಕ್ಕೆ ಬರದೆ ಪಲ್ಟಿ ಆಗಿದೆ. ಇದರ ಪರಿಣಾಮ ವೈಭವಿ ಸ್ಥಳದಲ್ಲೇ ಮೃತರಾಗಿದ್ದಾರೆ.

ಸದ್ಯ ಇಂದು (ಮೇ 24) ವೈಭವಿ ಶವವನ್ನು ಮುಂಬೈಗೆ ಕರೆತರಲಾಗಿದೆ. ಇಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ನಟಿ ವೈಭವಿ ಉಪಾಧ್ಯಾಯ (Vaibhavi Upadhyaya) ಹಿಂದಿಯ ಜನಪ್ರಿಯ ಕಿರುತೆರೆಯ ‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ಧಾರಾವಾಹಿಯಲ್ಲಿ ನಟಿಸಿ ಹೆಸರು ಗಳಿಸಿದ್ದಾರೆ. ಈ ಧಾರಾವಾಹಿಯಲ್ಲಿ ಜಾಸ್ಮೀನ್ ಪಾತ್ರ ನಟಿಗೆ ಹೆಸರು ತಂದು ಕೊಟ್ಟಿತ್ತು. ಅವರು ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ (deepika padukone) ನಟನೆ ಛಪಾಕ್ ಹಾಗೂ ತಿಮಿರ್ ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಆಯುಷ್ ಮೆಹ್ರಾ ಜತೆ ‘ಪ್ಲೀಸ್ ಫೈಂಡ್ ಅಟ್ಯಾಚ್ಡ್‌’ ಅನ್ನೋ ವೆಬ್ ಸೀರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ರಾಜ್‌ಕುಮಾರ್ ರಾವ್ ನಟಿಸಿದ್ದ ‘ಸಿಟಿಲೈಟ್ಸ್’ ಸಿನಿಮಾದಲ್ಲೂ ವೈಭವಿ ನಟಿಸಿದ್ದರು. ‘ಕ್ಯಾ ಖುಸೂರ್ ಹೈ ಅಮಲಾ ಕಾ’ ಶೋನಲ್ಲೂ ವೈಭವಿ ಬಣ್ಣ ಹಚ್ಚಿದ್ದರು. ಸದ್ಯ ನಟಿಯ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:CM Siddaramaiah: ಬೆಂಗಳೂರಿನಲ್ಲಿ ಮಳೆ ಅವಾಂತರ! ಅಂಡರ್‌ ಪಾಸ್‌ ಸಂಚಾರ ಬಂದ್‌ ಮಾಡಲು ಸೂಚನೆ-ಸಿಎಂ