SSLC Supplementary Exam 2023: SSLC ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ ; ಯಾವ ದಿನ ಪರೀಕ್ಷೆ ನಡೆಯಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ
SSLC Supplementary Exam 2023: ವಿದ್ಯಾರ್ಥಿಗಳಿಗೆ (students) ಮಹತ್ವದ ಮಾಹಿತಿ ಇಲ್ಲಿದೆ. ಈ ಬಾರಿಯ ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆಯಲ್ಲಿ (SSLC board exam) ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ (SSLC Supplementary Exam 2023) ನಡೆಸಲಾಗುತ್ತದೆ. ಇದೀಗ ಈ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ, ಅವರು ಕಲಿಕೆಯಲ್ಲಿ ಮುಂಬರುವಂತೆ ಸುಧಾರಣೆ ಮಾಡುವುದೇ ಪೂರಕ ಪರೀಕ್ಷೆಯ ಉದ್ದೇಶವಾಗಿದೆ. ಅದಕ್ಕಾಗಿ ಪೂರಕ ಪರೀಕ್ಷೆ ನಡೆಸಿ ಪಲಿತಾಂಶ ನೀಡಿ ಮುಂದಿನ ತರಗತಿಗೆ ಕಳುಹಿಸಲಾಗುತ್ತದೆ.
2022-23ನೇ ಸಾಲಿನ ಎಸ್ಎಸ್ಎಲ್‍ಸಿ ಪರೀಕ್ಷೆಯ ಫಲಿತಾಂಶ ಮೇ 8ರಂದು ಪ್ರಕಟಗೊಂಡಿತ್ತು. ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಏರ್ಪಡಿಸಲಾಗಿದೆ. ಹೆಸರು ನೋಂದಾಯಿಸಿಕೊಳ್ಳಲು ಮೇ 15ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು (SSLC Supplementary Exam Time table) ಬಿಡುಗಡೆ ಮಾಡಿದೆ. ಜೂನ್ 12 ರಿಂದ ಜೂನ್ 19 ರವರೆಗೆ ಪರೀಕ್ಷೆಗಳು ನಡೆಯಲಿವೆ.
SSLC ಪೂರಕ ಪರೀಕ್ಷೆಯ ವೇಳಾಪಟ್ಟಿ :-
23-05-2023 – ಕನ್ನಡ, ಅರೇಬಿಕ್
24-05-2023 – ಐಚ್ಛಿಕ ಕನ್ನಡ, ರಾಸಾಯನಶಾಸ್ತ್ರ, ಮೂಲ ಗಣಿತ
25-05-2023 – ಇಂಗ್ಲೀಷ್
26-05-2023 – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
27-05-2023 – ಇತಿಹಾಸ, ಸಂಖ್ಯಾಶಾಸ್ತ್ರ
29-05-2023 – ಹಿಂದಿ
30-05-2023 – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ
31-05-2023 – ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣಶಾಸ್ತ್ರ, ಗೃಹ ವಿಜ್ಞಾನ
01-06-2023 – ರಾಜ್ಯಶಾಸ್ತ್ರ, ಗಣಿತಶಾಸ್ತ್ರ
02-06-2023 – ತರ್ಕಶಾಸ್ತ್ರ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ
03-06-2023 – ಅರ್ಥಶಾಸ್ತ್ರ, ಜೀವಶಾಸ್ತ್ರ
ಇದನ್ನೂ ಓದಿ:ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಯು.ಟಿ.ಖಾದರ್ ಹೆಸರು ಅಂತಿಮ