Note ban: ಭಾರತದಲ್ಲಿ ಇದುವರೆಗೆ ಯಾವೆಲ್ಲ ನೋಟುಗಳು ರದ್ದಾಗಿವೆ ಗೊತ್ತಾ? ಇಲ್ಲಿದೆ ಮಾಹಿತಿ
Which notes have been banned in India
Note ban: 2000 ರೂ. ಮುಖಬೆಲೆಯ ನೋಟುಗಳನ್ನು (2000rps Notes) ತಕ್ಷಣದಿಂದ ಜಾರಿಗೆ ಬರುವಂತೆ ನೀಡುವುದನ್ನು ನಿಲ್ಲಿಸುವಂತೆ (Note ban) ಭಾರತೀಯ ರಿಸರ್ವ್ ಬ್ಯಾಂಕ್ (Reserve bank) ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ. 2000 ರೂ. ನೋಟು ನೀಡದಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದ್ದು, ಹಾಲಿ ಇರುವ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ. ಸೆಪ್ಟೆಂಬರ್ (September) 30ರವರೆಗೆ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದ್ದು, ಬ್ಯಾಂಕುಗಳಲ್ಲಿ 2000 ರೂ. ನೋಟುಗಳ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಸದ್ಯ ಭಾರತದಲ್ಲಿ ಇದುವರೆಗೆ ಯಾವೆಲ್ಲ ನೋಟುಗಳು ರದ್ದಾಗಿವೆ ಗೊತ್ತಾ? ಇಲ್ಲಿದೆ ಮಾಹಿತಿ.
2,000 ಮುಖಬೆಲೆಯ ಕರೆನ್ಸಿ ನೋಟನ್ನು ನವೆಂಬರ್ 2016 ರಲ್ಲಿ RBI ಕಾಯಿದೆ, 1934 ರ ಸೆಕ್ಷನ್ 24 (1) ಅಡಿಯಲ್ಲಿ ಎಲ್ಲಾ ರೂಗಳ ಕಾನೂನು ಟೆಂಡರ್ ಸ್ಥಿತಿಯನ್ನು ಹಿಂತೆಗೆದುಕೊಂಡ ನಂತರ ಆರ್ಥಿಕತೆಯ ಕರೆನ್ಸಿ ಅಗತ್ಯತೆಗಳನ್ನು ತ್ವರಿತವಾಗಿ ಪೂರೈಸುವ ಉದ್ದೇಶದಿಂದ ಪರಿಚಯಿಸಲಾಗಿತ್ತು. ಆಗ 500 ಮತ್ತು 1,000 ರೂಪಾಯಿ ನೋಟುಗಳು ಚಲಾವಣೆಯಲ್ಲಿತ್ತು. 2018-19ರಲ್ಲೇ 2000 ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು.
1978ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ ಕಪ್ಪುಹಣದ ವಿರುದ್ಧ ಕ್ರಮ ಕೈಗೊಂಡು, ರೂ. 1,000 ರೂ. 5,000 ಮತ್ತು ರೂ.10,000 ನೋಟುಗಳನ್ನು ರದ್ದುಗೊಳಿಸಿತ್ತು. ನಂತರದಲ್ಲಿ ಚಲಾವಣೆಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಮತ್ತೆ 2016 ರಲ್ಲಿ ಮೋದಿ ಸರ್ಕಾರವು ಹಳೆಯ ಐನೂರು ಮತ್ತು ಸಾವಿರ ನೋಟುಗಳನ್ನು ರದ್ದುಗೊಳಿಸಿದೆ. ಈ ಹಿಂದೆ ಆರ್ ಬಿಐ ಹಲವು ನೋಟುಗಳನ್ನು ರದ್ದುಗೊಳಿಸಿದೆ.
ಇದನ್ನು ಓದಿ: ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಯು.ಆರ್.ಸಭಾಪತಿ ಇನ್ನಿಲ್ಲ!!