PM kisan: ರೈತರೇ, ಇನ್ನುಮುಂದೆ ಪಿ.ಎಂ ಕಿಸಾನ್ ಆರ್ಥಿಕ ಸೌಲಭ್ಯ ಪಡೆಯಲು ಇ- ಕೆವೈಸಿ ಕಡ್ಡಾಯ! ಸಂಪೂರ್ಣ ಮಾಹಿತಿ ಇಲ್ಲಿದೆ

E-KYC is mandatory to avail PM Kisan financial facility

PM kisan: ದೇಶದ ರೈತರನ್ನು (Farmers) ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಹೀಗಾಗಿ, ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ (Agriculture Activity) ಪ್ರೋತ್ಸಾಹ ನೀಡುತ್ತಾ ಬಂದಿದೆ. ರೈತರ ನೆರವು ನೀಡುವಲ್ಲಿ ಬಹಳ ಜನಪ್ರಿಯವಾಗಿರುವ (Popular Scheme For Farmers) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi) ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.

ಇನ್ನು ಮುಂದೆ ಪಿ.ಎಂ ಕಿಸಾನ್ (PM kisan) ಆರ್ಥಿಕ ಸೌಲಭ್ಯ ಪಡೆಯಲು ಇ- ಕೆವೈಸಿ ಕಡ್ಡಾಯವಾಗಿ ಬೇಕಿದೆ. ಇ-ಕೆವೈಸಿ ಹೊಂದದ ರೈತ ಫಲಾನುಭವಿಗಳಿಗೆ ಯೋಜನೆಯ ಮುಂದಿನ ಬಿಡುಗಡೆಯಾಗುವುದಿಲ್ಲ ಎಂದು ಉಪ ಕೃಷಿ ನಿರ್ದೇಶಕ ಡಾ.ಎನ್.ಕೆಂಗೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಇಲಾಖೆಯಿಂದ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಇದೀಗ ಇ-ಕೆವೈಸಿ ಮಾಡಿಸದವರಿಗೆ ಕೊನೆಯ ಅವಕಾಶ ನೀಡಲಾಗಿದೆ. ರೈತರು ಕೂಡಲೇ ಇ ಕೆವೈಸಿ ಮಾಡಿಸುವುದು ಉತ್ತಮ!. ರೈತರು ತಮ್ಮ ಸಮೀಪದ ಗ್ರಾಮ, ಒನ್ ಕೇಂದ್ರ ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ಇ-ಕೆವೈಸಿ ಮಾಡಿಸಬಹುದು. ಅಥವಾ ಪಿ.ಎಂ ಕಿಸಾನ್ ಪೋರ್ಟಲ್ ಮೂಲಕ ಇ-ಕೆವೈಸಿ ಮಾಡಬಹುದು.

ಹತ್ತಿರದ ಅಂಚೆ ಕಚೇರಿಗೆ ಭೇಟಿ ಮಾಡಿ ಪೆಸ್ಟಲ್ ಅಕೌಂಟ್ ಓಪನ್ ಮಾಡುವ ಮೂಲಕ ಪಿಎಂ ಕಿಸಾನ್ ಇ-ಕೆವೈಸಿ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಿಎಂ ಕಿಸಾನ್ ಮೊಬೈಲ್ ಆಪ್ ಪ್ಲೇ Brdo (Play Store) e (Download) ಮಾಡಿಕೊಂಡು ಅಪ್ ಮೂಲಕ ಇ- ಕೆವೈಸಿ ಮಾಡಿಕೊಳ್ಳಬಹುದು.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?
• ಅಧಿಕೃತ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ
• Farmer’s Corner ಗೆ ಹೋಗಿ ‘New Farmer Registration’ ಮೇಲೆ ಕ್ಲಿಕ್ ಮಾಡಿ
• ನೀವು ನಿಮ್ಮ ಎಲ್ಲಾ ಅವಶ್ಯಕ ವಿವರಗಳನ್ನು ನಮೂದಿಸಬೇಕು.
• ‘click here to continue’ ಆಯ್ಕೆ ಮೇಲೆ ಕ್ಲಿಕ್ ಮಾಡಿ
• ‘YES’ ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಫಾರ್ಮ್ 2023 ಅನ್ನು ಭರ್ತಿ ಮಾಡಿ
• ಸೇವ್ ಮಾಡಿ, ಪ್ರಿಂಟ್‌ ಔಟ್‌ ಅನ್ನು ತೆಗೆಯಿರಿ.

ಬೇಕಾದ ದಾಖಲೆಗಳು:
ಆಧಾರ್ ಕಾರ್ಡ್, ನಿಮ್ಮ ಹೆಸರಿನ ಜಾಗದ ಪತ್ರ, ನಾಗರಿಕ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಬ್ಯಾಂಕ್ ಖಾತೆಯ ವಿವರ, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ, ಪಾಸ್‌ಪೋರ್ಟ್ ಗಾತ್ರದ ಫೋಟೋ.

 

ಇದನ್ನು ಓದಿ: Note ban: ಭಾರತದಲ್ಲಿ ಇದುವರೆಗೆ ಯಾವೆಲ್ಲ ನೋಟುಗಳು ರದ್ದಾಗಿವೆ ಗೊತ್ತಾ? ಇಲ್ಲಿದೆ ಮಾಹಿತಿ 

Leave A Reply

Your email address will not be published.