5 ಗ್ಯಾರಂಟಿ ಎಫೆಕ್ಟ್: ಬಡವರಿಗೆ ಮಾತ್ರ ಗ್ಯಾರಂಟಿ ಎಂದರಿತ ಜನರಿಂದ BPL ಕಾರ್ಡು ಪಡೆಯಲು ನೂಕುನುಗ್ಗಲು !

Congress five guarantee effects

Congress guarantee effects : ರಾಜ್ಯದಲ್ಲಿ ‘ 5 ಗ್ಯಾರಂಟಿಗಳ ‘ ಗ್ಯಾರಂಟಿಯ ಆಧಾರದ ಮೇಲೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆ ವೇಳೆ ಜನರಿಗೆ ನೀಡಿದ ಉಚಿತ ಕೊಡುಗೆಗಳ ಭರವಸೆಗಳನ್ನು ಈಡೇರಿಸಲು ತಿಣುಕಾಡುತ್ತಿದೆ, ಕಾರಣ ಸಂಪನ್ಮೂಲಗಳ ಕೊರತೆ. ಆದುದರಿಂದ ಆ ಕೊಡುಗೆಗಳನ್ನು ಬಡವರಿಗೆ ಮಾತ್ರ ಸೀಮಿತಗೊಳಿಸುವ ಎಲ್ಲ ಸಾಧ್ಯತೆ ಕಂಡುಬರುತ್ತಿದೆ. ಹಾಗಾಗಿ ಈಗ ‘ ಬಡವ ‘ ರಾಗಲು ನೂಕು ನುಗ್ಗಲು ಉಂಟಾಗುತ್ತಿದೆ !

 

ಹೌದು, ಈ ಉಚಿತ ಕೊಡುಗೆಗಳ  (Congress guarantee effects) ಲಾಭ ಪಡೆಯಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಹೇಗಾದರೂ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಹೊರಟಿದ್ದು, ಜನ ನಾ ಮುಂದು ತಾ ಮುಂದು ಎಂದು ಈಗ ಮುಗಿ ಬೀಳತೊಡಗಿದ್ದಾರೆ.

5 ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಅವುಗಳು -ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ಉಚಿತ, ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆಯ ಯಜಮಂತಿಗೆ ಪ್ರತಿ ತಿಂಗಳು 2000 ರೂಪಾಯಿ ಮತ್ತು ನಿರುದ್ಯೋಗಿ ಯುವ ಡಿಪ್ಲೋಮಾ ಮತ್ತು ಪದವೀಧರರಿಗೆ ಧನಸಹಾಯ – ಇವುಗಳನ್ನು ಮುಂದಿನ ದಿನಗಳಲ್ಲಿ ಗ್ಯಾರಂಟಿಯ ಭರವಸೆ ನೀಡಿದೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತ್ರ, ಹಾದಿಬೀದಿಯಲ್ಲಿ ಹೋಗುವವರಿಗೆಲ್ಲ ಈ ಯೋಜನೆಗಳ ಲಾಭ ಸಿಗುವುದಿಲ್ಲ, ನಿಜಕ್ಕೂ ಬಡವರಿಗೆ ಅರ್ಹರಿಗೆ ಮಾತ್ರ ಸಿಗುತ್ತದೆ ಎಂದು ಸ್ಪಷ್ಟಪಡಿಸಿದ ಕಾರಣ ಬಿಪಿಎಲ್ ಕಾಡುದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ಎನ್ನುವ ಸುದ್ದಿ ಹಬ್ಬಿದೆ. ಆದ್ದರಿಂದ ಬಿಪಿಎಲ್ ಕಾರ್ಡ್ ಹೊಂದಲು ಜನರು ಮುಗಿಬಿದ್ದಿದ್ದಾರೆ.

ಆದುದರಿಂದ ಸಾರ್ವಜನಿಕರು ತಮ್ಮ ಹೆಸರಿನಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಆಹಾರ, ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ಸರಬರಾಜು ಇಲಾಖೆಯ ವೆಬ್‌ಸೈಟ್‌ಗೆ ಮೊರೆ ಹೋಗಿದ್ದಾರೆ. ಕೆಲವರು ಆಹಾರ ಡಾಟ್ ಕೆಎಆರ್ ಡಾಟ್ ಎನ್‌ಐಸಿ ಡಾಟ್ ಇನ್ ವೆಬ್‌ಸೈಟ್ ಮತ್ತು ಇನ್ನೂ ಕೆಲವರು ಸೈಬರ್ ಸೆಂಟರ್‌ಗಳಿಗೆ ಹೋಗಿ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹೆಚ್ಚು ಜನ ಒಂದೇ ಸಲಕ್ಕೆ ಪ್ರಯತ್ನ ಮಾಡುತ್ತಿರುವುದರಿಂದ ವೆಬ್‌ಸೈಟ್ ನಿಧಾನವಾಗಿದೆ. ಕೆಲವೆಡೆ ಸರ್ವರ್ ಓಪನ್ ಕೂಡ ಆಗುತ್ತಿಲ್ಲ.

ಈಗ ಆಹಾರ ಇಲಾಖೆಯವರು ಹೊಸ ಪಡಿತರ ಚೀಟಿ ನೀಡುವ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ”ಹೊಸ ಪಡಿತರ ಚೀಟಿಗಾಗಿ ಅರ್ಜಿ ಸ್ವೀಕರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ” ಎಂದು ತಮ್ಮ ವೆಬ್‌ಸೈಟ್‌ನಲ್ಲೇ ಸ್ಪಷ್ಟವಾಗಿ ನಮೂದಿಸಲಾಗಿದೆ. ಇದರಿಂದಾಗಿ ನೂತನ ಸರ್ಕಾರದ ಉಚಿತ ಕೊಡುಗೆಗಳ ಲಾಭ ಪಡೆಯುವ ಸಲುವಾಗಿ ಪ್ಲಾನ್ ಹಾಕಿದ ಜನರಿಗೆ ಭಾರೀ ನಿರಾಸೆ ಆಗಿದೆ.

ಇದನ್ನೂ ಓದಿ: Karnataka budget : ಜುಲೈನಲ್ಲಿ ರಾಜ್ಯದ ಹೊಸ ಬಜೆಟ್ ಮಂಡನೆ: ನೂತನ ಸಿಎಂ ಸಿದ್ದರಾಮಯ್ಯ ಘೋಷಣೆ

Leave A Reply

Your email address will not be published.