Siddaramaiah: 5 ಗ್ಯಾರಂಟಿʼಗೆ ತಾತ್ವಿಕ ಒಪ್ಪಿಗೆ ಎಂದು ತಿಪ್ಪೆ ಸಾರಿಸಿದ ಸಿದ್ದರಾಮಯ್ಯ, ಮೊದಲ ವಚನ ಭ್ರಷ್ಟತೆಗೆ ಗುರಿಯಾದ ಕಾಂಗ್ರೆಸ್ ! ರಾಜ್ಯದ ಜನರಿಗೆ ಭಾರೀ ಮೋಸ !!

siddaramaiah said agreed in principle to the 5 guarantee

Siddaramaiah: ಕಾಂಗ್ರೆಸ್ ಆರಂಭಿಕ ವಚನ ಭ್ರಷ್ಟವಾಗಿದೆ. ತನ್ನ ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲಿ 5 ಗ್ಯಾರಂಟಿಗಳನ್ನೂ ಘೋಷಿಸುವುದಾಗಿ ಹೇಳಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ವಚನಭ್ರಷ್ಟತೆಗೆ ಗುರಿಯಾಗಿದೆ. ಮೊದಲ ತನ್ನ ಸಚಿವ ಸಂಪುಟದ ನಂತರ ಐದು ಗ್ಯಾರಂಟಿಗಳನ್ನು ಘಂಟಾ ಘೋಷವಾಗಿ ಘೋಷಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಆ ಮೂಲಕ ಯಾವುದೇ ತಯಾರಿ ಇಲ್ಲದೆ, ಲೆಕ್ಕಾಚಾರವಿಲ್ಲದೆ ಅಮಿಷದ ಭರವಸೆ ನೀಡಿದೆಯಾ ಕಾಂಗ್ರೆಸ್ ಎನ್ನುವ ಶಂಕೆ ವ್ಯಕ್ತವಾಗಿದೆ. ತನ್ನ ಐದು ಗ್ಯಾರಂಟಿ ನೀಡುವಿಕೆಯ ನಂಬಿಕೆ ಮೇಲೆ ರಾಜ್ಯದ ಜನ ಓಟು ಮಾಡಿ ಕಾಂಗ್ರೆಸ್ ಗೆಲ್ಲಿಸಿದ್ದರು. ಇದೀಗ ರಾಜ್ಯದ ಜನರ ನಂಬಿಕೆಗೆ ಆರಂಭಿಕ ಮೋಸ ಆಗಿದೆ. ಇಂತಿಷ್ಟೇ ದಿನಗಳಲ್ಲಿ ಇವೆಲ್ಲಾ ಗ್ಯಾರಂಟಿಗಳನ್ನು ನಡೆಸಿಕೊಡುತ್ತೇವೆ ಎಂದು ಹೇಳಲು ನೂತನ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ.

ತನ್ನ ಮೊದಲ ಸಂಪುಟ ಸಭೆಯ ನಂತರ ಕೇವಲ ಮೋದಿ ಸರ್ಕಾರವನ್ನು ದೂರುವುದರಲ್ಲಿ ಕಳೆದ ಸಿದ್ದರಾಮಯ್ಯನವರು ಕಡಕ್ ಆಗಿ ತಾನು ಕೊಟ್ಟ ಐದು ಗ್ಯಾರಂಟಿಗಳನ್ನು ಪೂರೈಸುವುದಾಗಿ ಹೇಳುವುದರಲ್ಲಿ ವಿಫಲವಾಗಿದೆ. ಗ್ಯಾರಂಟಿ ನೀಡುವುದಾಗಿ ನೀಡುವುದಕ್ಕೆ ತಾತ್ವಿಕ ಒಪ್ಪಿಗೆ ಇದೆ ಎಂದು ತಿಪ್ಪೇ ಸಾರಿಸುವುದರಲ್ಲಿ ಸಿದ್ದರಾಮಯ್ಯನವರ (Siddaramaiah)  ಮಂತ್ರಿ ಮಂಡಲ ನಿರ್ಧಾರ ಮತ್ತು ಆ ನಂತರದ ಪತ್ರಿಕಾಗೋಷ್ಠಿ ಸೀಮಿತವಾಗಿದೆ.

ಇಂದು ಬೆಂಗಳೂರಿನ ಕಠೀರವ ಸ್ಟೇಡಿಯಂನಲ್ಲಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ಧರಾಮಯ್ಯ ಅವರು, ಡಿಸಿಎಂ ಡಿಕೆ ಶಿವಕುಮಾರ್, 8 ಮಂದಿ ಸಚಿವರೊಂದಿಗೆ ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಸಮಗ್ರ ಚರ್ಚೆ ಬಳಿ ಸುದ್ದಿಗೋಷ್ಟಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದಲ್ಲದೇ ಪ್ಲಾನ್ ಮಾಡದೆ ಗ್ಯಾರಂಟಿ ಘೋಷಣೆಗೆ ಹಣ ಕೊರತೆಯಾಗುವ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಕೇಂದ್ರ ಸರ್ಕಾರವನ್ನು ದೂರುವುದರಲ್ಲಿ ಸಿದ್ದರಾಮಯ್ಯನವರು ನಿರತರಾಗಿದ್ದರು.

ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ನೂತನ ಸಿಎಂ ಸಿದ್ದರಾಮಯ್ಯ ಮಾತನಾಡಿ, ಚುನಾವಣಾ ಪ್ರಚಾರದ ವೇಳೆ ಅನೇಕ ಭರವಸೆಗಳನ್ನು ಕೊಟ್ಟಿದ್ದೇವೆ. ಆ ಎಲ್ಲಾ ಭರವಸೆಗಳು ಒಂದೇ ವರ್ಷದಲ್ಲಿ ಈಡೇರಿಸುವಂತದ್ದಲ್ಲ . ಐದು ಗ್ಯಾರಂಟಿಗಳನ್ನು ಜನರಿಗೆ ವಾಗ್ಧಾನಗಳ ರೂಪದಲ್ಲಿ ಕೊಟ್ಟಿದ್ದೆವು. ನಾವು ಮೊದಲ ಸಚಿವ ಸಂಪುಟ ಸಭೆಯಲ್ಲೇ ಆ ಎಲ್ಲಾ ಗ್ಯಾರಂಟಿಗಳಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆಯನ್ನು ಪಡೆದು ನಂತರ ಆದೇಶ ಹೊರಡಿಸುತ್ತೇವೆ. ಅಲ್ಲದೇ ಈ ಹಿಂದೆಯೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಅಲ್ಲದೇ ಬಿಟ್ಟು 30 ನೂತನ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 165 ಭರವಸೆಗಳಲ್ಲಿ 158 ಈಡೇರಿಸಿದ್ದೇವೆ. ಪ್ರಧಾನ ಮಂತ್ರಿಗಳೇ ಮನ್‌ಕಿ ಬಾತ್‌ನಲ್ಲಿ ರಾಜ್ಯ ದಿವಾಳಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ನಾವು ಘೋಷಣೆ ಮಾಡಿದ 5 ಗ್ಯಾರಂಟಿ ಈಡೇರಿಸಲು 50 ಸಾವಿರ ಕೋಟಿ ರೂಪಾಯಿಗಳು ಬೇಕು. ಕರ್ನಾಟಕದಿಂದ 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ಆದರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಅನ್ಯಾಯವಾಗಿದೆ ಎಂದರು. ಕರ್ನಾಟಕಕ್ಕೆ ಸಿಗಬೇಕಿದ್ದ 5495 ಕೋಟಿ ರೂ.ವನ್ನು ಬಿಜೆಪಿ ರಾಜ್ಯ ಸರ್ಕಾರ ಕೇಳಿಲ್ಲ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈ ದೇಶದ ಸಾಲ 53 ಲಕ್ಷದ 11 ಸಾವಿರ ಕೋಟಿ ಇತ್ತು ಮೋದಿ ಅಧಿಕಾರಕ್ಕೆ ಬಂದ ನಂತರ 9 ವರ್ಷಗಳಲ್ಲಿ ದೇಶದ ಮೇಲೆ 155 ಲಕ್ಷ ಕೋಟಿ ಆಗಿದೆ. ಬೊಮ್ಮಾಯಿ ಯಡಿಯೂರಪ್ಪ ಸರ್ಕಾರದಲ್ಲಿ 4 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಾನು ಐದು ವರ್ಷಗಳ ಕಾಲ ಸರ್ಕಾರ ನಡೆಸಿದಾಗಲೂ ಇಷ್ಟು ಸಾಲ ಇರಲಿಲ್ಲ ಎಂದಿದ್ದಾರೆ. ಹೀಗಾಗಿ ನಾನು ನಮ್ಮ ಈ ಐದು ಗ್ಯಾರಂಟಿಗಳನ್ನು ಈಡೇರಿಸಲು ಮುಂದಾದ್ರೆ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಹೆಚ್ಚು. ಆ ಕಾರಣಕ್ಕಾಗಿ ಕಾಂಗ್ರೆಸ್‌ ಸರ್ಕಾರ ಐದು ಗ್ಯಾರಂಟಿಗಳಿಗೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಏನು ಆ ಗ್ಯಾರೆಂಟಿಗಳು?
1. ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತ ನೀಡುವ ‘ಗೃಹಜ್ಯೋತಿ’ ಯೋಜನೆ
2. ಕುಟುಂಬದ ಪ್ರತಿಯೊಬ್ಬ ಮಹಿಳೆಗೆ 2,000 ರೂʻಗೃಹ ಲಕ್ಷ್ಮಿ’ ಯೋಜನೆ
3. ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ವಿತರಿಸೋ ‘ಅನ್ನ ಭಾಗ್ಯ’ ಯೋಜನೆ
4. ನಿರುದ್ಯೋಗಿ ಪದವೀಧರರಿಗೆ 3,000 ರೂ., ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ ಎರಡು ವರ್ಷಗಳವರೆಗೆ (18-25 ವಯೋಮಾನದವರಿಗೆ) 1,500 ರೂ. ಎಂಬ ‘ಯುವ ನಿಧಿ’ಯೋಜನೆ ಜಾರಿ
5. ಕರ್ನಾಟಕದಾದ್ಯಂತ ಮಹಿಳೆಯರಿಗೆ ರಾಜ್ಯ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾದ ʻನಾರಿ ಶಕ್ತಿʼ ಯೋಜನೆ

 

ಇದನ್ನು ಓದಿ: Free ration scheme: ಗ್ಯಾರಂಟಿಗಳಲ್ಲಿ ಒಂದಾದ ಉಚಿತ ರೇಷನ್‌ ನೀಡಲು ಕಂಡೀಶನ್‌ ಹಾಕಿದ ಕಾಂಗ್ರೆಸ್‌ ಸರ್ಕಾರ! ಏನು ಗೊತ್ತಾ? 

Leave A Reply

Your email address will not be published.