Home Karnataka State Politics Updates Mysuru : ಜನತೆಗೆ ಗುಡ್’ನ್ಯೂಸ್ ; ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯ ಸಂಭ್ರಮಾಚರಣೆ ! ಮೈಸೂರಿನ ಇಂದಿರಾ...

Mysuru : ಜನತೆಗೆ ಗುಡ್’ನ್ಯೂಸ್ ; ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯ ಸಂಭ್ರಮಾಚರಣೆ ! ಮೈಸೂರಿನ ಇಂದಿರಾ ಕ್ಯಾಂಟೀನ್​​ನಲ್ಲಿ ಉಚಿತ ಹೋಳಿಗೆ ಊಟ ಲಭ್ಯ!!

Mysuru Indira canteens
Image source: varthabharati

Hindu neighbor gifts plot of land

Hindu neighbour gifts land to Muslim journalist

Mysuru Indira Canteens : ಕಾಂಗ್ರೆಸ್ ನಾಯಕರ ಕುರ್ಚಿ ಕದನ ಅಂತ್ಯವಾಗಿದ್ದು, ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಮೇ.20ರಂದು (ಇಂದು) ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K Sivakumar) ಪ್ರತಿಜ್ಞಾವಿಧಿ ಸಮಾರಂಭಕ್ಕೆ, ಕಠೀರವ ಸ್ಟೇಡಿಯಂ ಸಜ್ಜಾಗಿ ನಿಂತಿದೆ. ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಇನ್ನು ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿಯಾಗುತ್ತಿರುವ ಖುಷಿಗೆ ಮೈಸೂರಿನ ಇಂದಿರಾ ಕ್ಯಾಂಟೀನ್​​ನಲ್ಲಿ (Mysuru Indira Canteens) ಉಚಿತ ಹೋಳಿಗೆ ಊಟ ಲಭ್ಯವಾಗುತ್ತಿದೆ.

ಹೌದು, ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಿರುವ ಖುಷಿಗೆ ಅವರ ಅಭಿಮಾನಿ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿರುವ ಡಿ.ಬಸವರಾಜ್ ಎಂಬವವರು ಮೈಸೂರಿನ (Mysuru) ಇಂದಿರಾ ಕ್ಯಾಂಟೀನ್‌ನಲ್ಲಿ ಶುಕ್ರವಾರ ( ಮೇ 19) 150 ಸದಸ್ಯರಿಗೆ ಹೋಳಿಗೆ ಸಹಿತ ಊಟ ಹಂಚಿದ್ದಾರೆ. ಇಂದು ಕೂಡ ಮೈಸೂರಿನ 11 ಇಂದಿರಾಗಾಂಧಿ ಕ್ಯಾಂಟೀನ್‌ಗಳಲ್ಲಿ ಹೋಳಿಗೆ ಊಟ (Free Obbattu meal) ಸಿಗಲಿದೆ.

ಈ ಹಿಂದೆ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂದರ್ಭದಲ್ಲಿಯೂ ಬಸವರಾಜ್ ಅವರು ನಂಜುಮಳಿಗೆ ವೃತ್ತದಲ್ಲಿ ಸಿಹಿ ಹಂಚಿದ್ದರು.‌ ಇಂದು ಸಿದ್ದರಾಮಯ್ಯನವರ ಅನ್ನ ಭಾಗ್ಯ ಯೋಜನೆಗೆ ಗೌರವಾರ್ಥ ಹೋಳಿಗೆ ವಿತರಿಸಲು ಮುಂದಾಗಿದ್ದಾರೆ. ‘ಕ್ಷೀರ ಭಾಗ್ಯ’ ಯೋಜನೆಯನ್ನು ಗುರುತಿಸಲು ಅವರು ಬಾದಾಮ್ ಹಾಲು ವಿತರಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಡಿ.ಬಸವರಾಜ್ ಅವರು 1987 ರಿಂದಲೇ ಸಿದ್ದರಾಮಯ್ಯ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆಗುತ್ತಿರುವ ಸುದ್ಧಿ ತಿಳಿದಂತೆ, ಅಭಿಮಾನಿಗಳಿಂದ ಅವರ ನಿವಾಸದ ಬಳಿ ಹಲವು ಫ್ಲೆಕ್ಸ್ ಗಳು ತಲೆಎತ್ತಿದ್ದವು. ಜೊತೆಗೆ ನಿವಾಸ ಮುಂಭಾಗದ ನಾಮಫಲಕಕ್ಕೆ ಮಲ್ಲಿಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಬಳಿ ಸಿಎಂ ಸಿದ್ದರಾಮಯ್ಯ 2.0 ಎಂಬ ಬರಹವುಳ್ಳ ಸುಮಾರು 7 ಕೆಜಿ ತೂಕದ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದರು.

ಅಲ್ಲದೇ ಸಿದ್ದು ಹೆಸರಲ್ಲಿ ಅಭಿಮಾನಿಗಳು ಬನ್ನೇರುಘಟ್ಟದ ಪುರಾತನಕಾಲದ ಚಂಪಕದಾಮ ದೇವಾಲಯದಲ್ಲಿ ಅರ್ಚನೆ ಮಾಡಿಸಿ ಪ್ರಸಾದವನ್ನು ತಂದು ಹಂಚಿದರು. ಇಷ್ಟೇ ಅಲ್ಲ ಸಿದ್ದರಾಮಯ್ಯ ಗೆದ್ದ ಖುಷಿಯಲ್ಲಿ ಸಿದ್ದರಾಮನ ಹುಂಡಿ ಗ್ರಾಮದಿಂದ ಅಭಿಮಾನಿ ಜಗದೀಶ್ ಎಂಬಾತ ಸಿದ್ದು ಭಾವಚಿತ್ರವನ್ನು ಟ್ಯಾಟೋ ಹಾಕಿಸಿಕೊಂಡು ಬಂದಿದ್ದಾರೆ. ಭರ್ಜರಿ ಸಂಭ್ರಮಾಚರಣೆಯ ಜೊತೆಗೆ ಇಂದು ಸಿದ್ದು ಸಿಎಂ ಪಟ್ಟಕ್ಕೇರುತ್ತಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ (Congress) ನಾಯಕ ಸಿದ್ದರಾಮಯ್ಯ (Siddaramaiah) ಅವರ ಪ್ರಮಾಣ ವಚನ (Siddaramaiah’s swearing) ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಹಲವಾರು ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಪ್ರಮಾಣ ವಚನ ಸಮಾರಂಭಕ್ಕೆ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ (Soinia Gandhi), ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್ ಬಗೇಲ್, ಬಿಹಾರ್‌ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು, ಪುದಿಚೆರಿ ಸಿಎಂ ಎನ್.ರಂಗಸ್ವಾಮಿ, ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: ನಾರಾಯಣ ನೇತ್ರಾಲಯದ ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗ ಶೆಟ್ಟಿ ಇನ್ನಿಲ್ಲ!