Rashmika Mandanna – yash: ಯಶ್​ ಬಗ್ಗೆ ಒಂದೇ ಪದದಲ್ಲಿ ವಿವರಿಸಿದ ರಶ್ಮಿಕಾ ಮಂದಣ್ಣ! ಅಭಿಮಾನಿಗಳಿಂದ ಕಾಮೆಂಟ್ ಗಳ ಸುರಿಮಳೆ

Rashmika Mandanna explained about Yash in one word

Rashmika Mandanna – yash: ನ್ಯಾಷನಲ್ ಕ್ರಶ್ ಅಂತಲೇ ಕರೆಯಲ್ಪಡುವ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ (kirik party )ಚಿತ್ರದ(film )ಮೂಲಕ ಚಂದನವನ ಪ್ರವೇಶಿಸಿದ ಕೊಡಗಿನ ಕುವರಿ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಇವರ ಹವಾ ಫುಲ್ ಜೋರಾಗಿಯೇ ಇದೆ. ಅದರಲ್ಲೂ ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿಯು ಹೌದು. ಆಗಾಗ ಅವರು ಅಭಿಮಾನಿಗಳ ಜೊತೆ ಕಾಮೆಂಟ್ ಗೆ ಪ್ರತ್ಯುತ್ತರ ನೀಡುತ್ತಾರೆ.

 

ರಶ್ಮಿಕಾ (Rashmika Mandanna – yash) ಅಭಿಮಾನಿಗಳ ಜೊತೆ ಟ್ವಿಟರ್​ನಲ್ಲಿ ಪ್ರಶ್ನೋತ್ತರ ನಡೆಸಿದ್ದು, ಆಗ ಅವರಿಗೆ ಯಶ್ (Yash)​ ಬಗ್ಗೆ ಪ್ರಶ್ನೆ ಎದುರಾಗಿದೆ. ಒಂದೇ ಪದದಲ್ಲಿ ಯಶ್​ ಬಗ್ಗೆ ಹೇಳಿ ಎಂದು ನೆಟ್ಟಿಗರೊಬ್ಬರು ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ ಅವರು ‘ಸೂಪರ್​ ಸ್ಟಾರ್​’ ಎಂದು ಉತ್ತರ ನೀಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಈ ಕುರಿತು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದು, ರಶ್ಮಿಕಾ ಕೆಲವೊಮ್ಮೆ ಸತ್ಯ ಮತ್ತು ಅಪ್ಪಟ ಚಿನ್ನದಂತೆ ಮಾತನಾಡುತ್ತಾರೆ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಗಣೇಶ್​, ಪುನೀತ್ ರಾಜ್​ಕುಮಾರ್​, ರಕ್ಷಿತ್​ ಶೆಟ್ಟಿ, ಧ್ರುವ ಸರ್ಜಾ ಮುಂತಾದವರ ಜೊತೆ ನಟಿಸಿದ್ದಾರೆ. ಆದರೆ ಯಶ್​ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿಲ್ಲ. ಸದ್ಯಕ್ಕಂತೂ ರಶ್ಮಿಕಾ ಅವರು ಪರಭಾಷೆ ಪ್ರಾಜೆಕ್ಟ್​ಗಳಲ್ಲೇ ಹೆಚ್ಚು ಬ್ಯುಸಿ ಆಗಿದ್ದಾರೆ. ಇತ್ತ, ಯಶ್​ ಅವರು ‘ಕೆಜಿಎಫ್​: ಚಾಪ್ಟರ್​ 2’ ಬಳಿಕ ಯಾವುದೇ ಹೊಸ ಪ್ರಾಜೆಕ್ಟ್​ ಅನೌನ್ಸ್​ ಮಾಡಿಲ್ಲ. ಆದಷ್ಟು ಬೇಗ ಅವರ ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಟಾಲಿವುಡ್​ನಲ್ಲಿ ಫೇಮಸ್ ಆದ ಬಳಿಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಈಗಾಗಲೇ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಅಮಿತಾಭ್ ಬಚ್ಚನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್ ಜೊತೆ ಅವರು ‘ಅನಿಮಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಸೊಸೆಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಮಂದಣ್ಣ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ‘ರೇನ್​ ಬೋ’ ಸಿನಿಮಾದ ಮೊದಲ ಹಂತದ ಶೂಟಿಂಗ್​ ಮುಗಿಸಿದ್ದಾರೆ. ಸಿನಿಮಾ ಕೆಲಸಗಳನ್ನು ಮುಗಿಸುವಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಅವರು ಸಖತ್​ ಫಾಸ್ಟ್​ ಆಗಿದ್ದಾರೆ.

 

ಇದನ್ನು ಓದಿ: IRDAI: IRDAI ಯಿಂದ ಬಾಡಿಗೆ ತಾಯಂದಿರಿಗೆ ಸಿಹಿಸುದ್ದಿ! ಇಲ್ಲಿದೆ ಮಾಹಿತಿ 

Leave A Reply

Your email address will not be published.