Chief Minister Speech: ಮುಖ್ಯಮಂತ್ರಿ ಭಾಷಣದ ವೇಳೆ ಸಿಎಂ ಇರುವ ಸ್ಟೇಜ್ ‘ನ ಮೇಲೆ ಮಗುವನ್ನು ಎತ್ತಿ ಬಿಸಾಕಿದ ತಂದೆ, ಕಾರಣ ಕೇಳಿದ್ರೆ ಶಾಕ್‌ ಆಗ್ತೀರ !

father threw the child on the stage during the Chief Minister speech

Chief Minister Speech: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಒಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಹತಾಶೆಯಲ್ಲಿದ್ದ ಕಾರ್ಮಿಕನೊಬ್ಬ ತನ್ನ ವರ್ಷದ ಮಗುವನ್ನು ವೇದಿಕೆಯ ಮೇಲೆ ಎಸೆದ ಧಾರುಣ ಘಟನೆ ನಡೆದಿದೆ.

ಮಧ್ಯಪ್ರದೇಶದ ಸಾಗರದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರು ಸಾರ್ವಜನಿಕ (Chief Minister Speech) ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗ ಕೂಲಿ ಕಾರ್ಮಿಕನಾಗಿರುವ ಮುಖೇಶ್ ಪಟೇಲ್ ತಮ್ಮ ಸಂಕಷ್ಟದ ಬಗ್ಗೆ ಸಿಎಂ ಗಮನ ಸೆಳೆಯಬೇಕೆಂದು ಹೀಗೆ ಮಾಡಿದ್ದಾನೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕೂಲಿ ಪಟೇಲ್ ಅವರ ಈ ಕ್ರಮ ಸಾಕಷ್ಟು ಸಂಚಲನ ಮೂಡಿಸಿದ್ದು, ಇದು ಸಿಎಂ ಚೌಹಾಣ್ ಅವರ ಗಮನವನ್ನೂ ಸೆಳೆದಿತ್ತು.

ಅಪ್ಪ ಪಟೇಲ್ ನು ಜನರ ಗುಂಪಿನ ನಡುವೆ ಒಂದು ಅಡಿ ದೂರದಿಂದಲೆ ತನ್ನ ಒಂದು ವರ್ಷದ ಮಗುವನ್ನು ವೇದಿಕೆ ಮೇಲಕ್ಕೆ ಎಸೆದಿದ್ದಾನೆ. ಕಾರ್ಯಕ್ರಮದಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಮಗುವನ್ನು ಸ್ಟೇಜ್ ನಿಂದ ಎಬ್ಬಿಸಿ ಮಗುವಿನ ಅಮ್ಮನಿಗೆ ಒಪ್ಪಿಸಿದ್ದಾರೆ. ಪಟೇಲ್ ನ ಈ ಕೃತ್ಯದಿಂದಾಗಿ ಸಿಎಂ ಚೌಹಾಣ್ ಆತನ ಕುಟುಂಬ ಅನುಭವಿಸುತ್ತಿರುವ ಕುಂದುಕೊರತೆಗಳನ್ನು ಸರ್ಕಾರದ ಗಮನ ಸೆಳೆದಿದೆ.

ಮುಖೇಶ್ ಪಟೇಲ್ ನು ಮಧ್ಯಪ್ರದೇಶದ ಸಾಗರದ ಕೆಸ್ಲಿ ತಹಸಿಲ್‌ನ ಸಹಜ್‌ಪುರ ಗ್ರಾಮದ ನಿವಾಸಿ. ಅವರು ತಮ್ಮ ಪತ್ನಿ ನೇಹಾ ಮತ್ತು ಅವರ ಒಂದು ವರ್ಷದ ಮಗನೊಂದಿಗೆ ವಾಸಿಸುತ್ತಿದ್ದಾನೆ. ತಮ್ಮ ಮಗುವಿಗೆ 3 ತಿಂಗಳಿರುವಾಗ ವೈದ್ಯರು ತಮ್ಮ ಮಗನ ಹೃದಯದಲ್ಲಿ ರಂಧ್ರ ಇರೋದನ್ನು ಪತ್ತೆ ಮಾಡಿ ತಿಳಿಸಿದ್ದರು. ಇಲ್ಲಿಯತನಕ ಅದರ ಚಿಕಿತ್ಸಾ ವೆಚ್ಚ ಭರಿಸಿ ಶಸ್ತ್ರ ಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ. ಆದರೂ ಮಗನ ಚಿಕಿತ್ಸೆಗಾಗಿ ಇಲ್ಲಿಯವರೆಗೆ 4 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಆತ ಹೇಳಿಕೊಂಡಿದ್ದಾರೆ. ‘ ನಮ್ಮ ಮಗುವಿಗೆ ಈಗ ಒಂದು ವರ್ಷ, ವೈದ್ಯರು ನಮಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಹೇಳಿದರು. ಅವರು 3.50 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಅವರು ಹೇಳಿದರು. ಅಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಲು ನಮಗೆ ಸಾಧ್ಯವಿಲ್ಲ. ನಮ್ಮ ಮಗುವಿಗೆ ಚಿಕಿತ್ಸೆ ನೀಡಬೇಕೆಂದು ನಾವು ಬಯಸುತ್ತೇವೆ. ಆದರೆ ಯಾರೂ ನಮಗೆ ಸಹಾಯ ಮಾಡುತ್ತಿಲ್ಲ,’ ಎಂದು ಮುಖೇಶ್ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

‘ಈ ಸಂಬಂಧ ನಾವು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ನಿರ್ಧರಿಸಿದೆವು. ನಮಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸಹ ಅವಕಾಶ ನೀಡಲಿಲ್ಲ. ನಮ್ಮ ಕಷ್ಟವನ್ನು ಸಿಎಂಗೆ ತಿಳಿಸಲೆಂದು ನಾನು ನನ್ನ ಮಗುವನ್ನು ವೇದಿಕೆಯ ಮೇಲೆ ಎಸೆದಿದ್ದೇನೆ. ಈಗ ಅಧಿಕಾರಿಗಳು ವಿಷಯದ ಬಗ್ಗೆ ಗಮನ ಹರಿಸಿದ್ದಾರೆ. ಮತ್ತು ನಾಳೆ ಸಿಎಂ ಅವರನ್ನು ಭೇಟಿಯಾಗಲು ನಮ್ಮನ್ನು.ಕರೆದೊಯ್ಯುವುದಾಗಿ ಹೇಳಿದ್ದಾರೆ ‘ ಎಂದು ಘಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖೇಶ್ ಅವರು ಹೇಳಿದ್ದಾರೆ.

 

ಇದನ್ನು ಓದಿ: Fake Note: RBI ಬ್ಯಾಂಕ್‌ನಲ್ಲೇ ಪತ್ತೆಯಾಯ್ತು ನಕಲಿ ನೋಟು, ಯಾಮಾರಿದ್ರೆ ಜೈಲು ಊಟ ಗ್ಯಾರಂಟಿ ಎಚ್ಚರ! 

Leave A Reply

Your email address will not be published.